ಹುಬ್ಬಳ್ಳಿ: ಜಿಲ್ಲೆಯಲ್ಲಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್ ವಿಶ್ವನಾಥ್ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ನಾವು ಹಾಲುಮತದವರು ಮಹಾತ್ಮಾ ಗಾಂಧಿಯವರು ಹಾಲನ್ನು ಆಹಾರವಾಗಿ ಸೇವನೆ ಮಾಡುತ್ತಿದ್ದರು. ಹಾಗಾಗಿ ಗಾಂಧಿಜಯಂತಿ ದಿನ 2014 ರಲ್ಲಿ ಸಂಘವನ್ನುಹುಟ್ಟು ಹಾಕಿದ್ದೇವೆ.
ರಾಜ್ಯದಲ್ಲಿ ಕುರುಬ ಸಮುದಾಯದ ಸಂಘಟನೆಗೆ ಮೊದಲು ಒತ್ತು ಕೊಟ್ಟಿದ್ದು ಸನ್ಮಾನ್ಯ ಸಿದ್ದರಾಮಯ್ಯ ಇಡೀ ದೇಶದಲ್ಲಿ ಕುರುಬ ಸಮಾಜದವರಿಗೆ ರಾಜಕೀಯ ಪ್ರಜ್ಞೆ ಇರುವುದು ಕರ್ನಾಟಕದಲ್ಲಿ ಮಾತ್ರ ಹಾಗಾಗಿ ರಾಜಕೀಯವಾಗಿ ನಾವು ಸಂಘಟನೆ ಮಾಡಬೇಕಿದೆ .
ರಾಜ್ಯದಲ್ಲಿ ಕುರುಬರನ್ನು ಬಿಟ್ಟು ಬೇರೆ ಸಮಾಜದವರು ಎಲ್ಲರೂ ಸಂಘ ಕಟ್ಟಿದ್ದಾರೆ.ಉದಾಹರಣೆಗೆ ಬ್ರಾಹ್ಮಣ ಸಮುದಾಯ ಸಂಘಟನೆ, ಲಿಂಗಾಯತ ಸಂಘಟನೆ, ಒಕ್ಕಲಿಗ ಸಂಘಟನೆ, ದಲಿತ ಸಂಘಟನೆ ಇಲ್ವಾ? ಎಂದು ಪ್ರಶ್ನೆ ಮಾಡಿದರು.ಇನ್ನು ಸಿದ್ದರಾಮಯ್ಯನವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ ನಮಗೆ ರಾಜ್ಯದಲ್ಲಿ ಪರಮೋಚ್ಚ ಸ್ಥಾನ ಸಿಕ್ಕಿದೆ..
ಸಿದ್ದರಾಮಯ್ಯ ಅವರನ್ನು ರಾಷ್ಟ್ರರಾಜಕರಾಣಕ್ಕೆ ಹೋಗ್ತಾರಾ ಅನ್ನೋ ಪ್ರಶ್ನೆಗೆ ವಿಶ್ವನಾಥ್ ಖಾರವಾಗಿ ಉತ್ತರ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯನವರು ರಾಷ್ಟ್ರ ರಾಜಕಾರಣಕ್ಕೆ ಯಾಕೆ ಹೋಗಬಾರದು, ದೇವೆಗೌಡ ಏನೂ ಕನಸು ಕಂಡಿದ್ದರಾ? ಪ್ರಧಾನಿ ಆಗುತ್ತೇನೆ ಅಂತಾ ಈಗ ಸಿದ್ದರಾಮಯ್ಯನವರು ಹೋದರೆ ತಪ್ಪೇನು ಎಂದು ಉತ್ತರಿಸಿದರು.
Kuruba; ಕುರುಬ ಸಮುದಾಯದ ಸಭೆ ನಡೆಸಿ ಒಟ್ಟುಗೂಡಿಸುವ ಕೆಲಸವಾಗಲಿದೆ. ಹೆಚ್.ಎಮ್ ರೇವಣ್ಣ
World Cup: ಏಕದಿನ ವಿಶ್ವಕಪ್ಗೆ ತಂಡ ಪ್ರಕಟ. ರಾಹುಲ್ ಎಂಟ್ರಿ, ತಿಲಕ್ಗೆ ಗೇಟ್ಪಾಸ್
Sankalpa Shetter: ಬಕೆಟ್ ಹಿಡಿದು ಟಿಕೆಟ್ ಗಿಟ್ಟಿಸಿಕೊಂಡವರು ಯಾರು ಅನ್ನೋದು ಗೊತ್ತಿದೆ..!