Sunday, April 20, 2025

Latest Posts

ವಂದೇ ಭಾರತ್ ರೈಲಿನಲ್ಲಿ ಹಳಸಿದ ಆಹಾರ ನೀಡಿದ್ದಾಗಿ ಪ್ರಯಾಣಿಕರ ಆರೋಪ..

- Advertisement -

National News: ವಂದೇ ಭಾರತ್ ರೈಲಿನಲ್ಲಿ ಹಾಳಾಗಿರುವ, ಹಳಸಿದ ಆಹಾರ ನೀಡುತ್ತಾರೆಂದು, ಪ್ರಯಾಣಿಕರೊಬ್ಬರು ವೀಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರೊಬ್ಬರು ನವದೆಹಲಿಯಿಂದ ವಾರಣಾಸಿಗೆ ಪ್ರಯಾಣ ಬೆಳೆಸುತ್ತಿದ್ದ ವೇಳೆ, ವಂದೇ ಭಾರತ್ ರೈಲಿನಲ್ಲಿ ಊಟವನ್ನು ಆರ್ಡರ್ ಮಾಡಿದ್ದಾರೆ. ಆದರೆ ಊಟ ಹಾಳಾಗಿದ್ದು, ಹಳಸಿ ಹೋಗಿದೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೇ, ಊಟದ ಗುಣಮಟ್ಟವೂ ಕಳಪೆಯಾಗಿದೆ ಎಂಬುದು ಇವರ ಆರೋಪವಾಗಿದೆ.

ಆಕಾಶ್ ಕೇಶಾರಿ ಎಂಬುವವರು ಈ ಬಗ್ಗೆ ವೀಡಿಯೋ ಮಾಡಿ, ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು, ಆಕ್ರೋಶ ಹೊರಹಾಕಿದ್ದಾರೆ. ನಾನು ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಊಟ ಆರ್ಡರ್ ಮಾಡಿದ್ದೆ. ಆದರೆ ಇವೆಲ್ಲವೂ ಕಳಪೆ ಗುಣಮಟ್ಟದ್ದಾಗಿದೆ. ದಯವಿಟ್ಟು ನನ್ನ ಎಲ್ಲ ಹಣವನ್ನು ಮರುಪಾವತಿ ಮಾಡಿ. ಇಂಥ ಮಾರಾಟಗಾರರಿಂದಲೇ, ವಂದೇ ಭಾರತ್ ಎಕ್ಸ್‌ಪ್ರೆಸ್ ಬ್ರ್ಯಾಂಡ್ ಹೆಸರು ಹಾಳಾಗುತ್ತಿದೆ ಎಂದು ಆಕಾಶ್ ಆರೋಪಿಸಿದ್ದಾರೆ.

ಇನ್ನು ಇವರು ಟ್ವೀಟ್ ಮಾಡಿರುವ ವೀಡಿಯೋದಲ್ಲಿ ಹಲವರು ತಟ್ಟೆಯಲ್ಲಿ ಊಟವನ್ನು ಹಾಗೇ ಬಿಟ್ಟಿದ್ದಾರೆ, ಪಲ್ಯ ಹಾಳಾಗಿದೆ. ದಾಲ್ ವಾಸನೆ ಬರುತ್ತಿದೆ ಎಂದು ಕೂಡ ಆರೋಪಿಸಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿದ ಬ್ರಿಟೀಷ್ ರಾಯಭಾರಿ: ಆಕ್ಷೇಪ ವ್ಯಕ್ತಪಡಿಸಿದ ಭಾರತ

ಏರ್ ಇಂಡಿಯಾ ವೆಜ್ ಊಟದಲ್ಲಿ ಚಿಕನ್ ಪೀಸ್ ಪ್ರತ್ಯಕ್ಷ..

ಮಾರಿಷಿಯಸ್‌ನಲ್ಲಿ ರಾಮಮಂದಿರ ಉದ್ಘಾಟನೆ ದಿನ ಹಿಂದೂಗಳಿಗೆ ಪ್ರಾರ್ಥನೆಗಾಗಿ 2 ಗಂಟೆ ವಿಶೇಷ ವಿಶ್ರಾಂತಿ

- Advertisement -

Latest Posts

Don't Miss