Sunday, September 8, 2024

Latest Posts

ನಿಮಗೆ ತಾಳ್ಮೆ ಇದೆಯಾ.? ಪರೀಕ್ಷೆ ಮಾಡಲು ಹೀಗೆ ಮಾಡಿ

- Advertisement -

special news:

ಈಗಿನ ಡಿಜಿಟಲ್ ಯುಗದಲ್ಲಿ ಜನರಲ್ಲಿ ತಾಳ್ಮೆ ಎನ್ನುವುದೇ ಇಲ್ಲದಂತಾಗಿದೆ. ಎಲ್ಲಾದಕ್ಕೂ ಅವಸರ. ನಾವು ಬೇಗ ಊರು ಮುಟ್ಟಬೇಕು, ಬೇಗೆ ದುಡ್ಡನ್ನು ಸಂಪಾದನೆ ಮಾಡಬೇಕು. ಸಿನಿಮಾದಲ್ಲಿ ನೋಡುವ ರೀತಿ ಒಂದೇ ಸಾಂಗಿನಲ್ಲಿ ಶ್ರೀಮಂತರಾಗಬೇಕು ಅಂದುಕೊಳ್ಳುತ್ತಾರೆ. ಆದರೆ ಅದೆಲ್ಲ ಆಗುವ ಕೆಲಸವೇ.

ಇನ್ನೊಬ್ಬರನ್ನು ನೋಡಿ ನಾವು ಸಹ  ಸಾಕಷ್ಟು ದುಡ್ಡು ಸಂಪಾದನೆ ಮಾಡಬೇಕು ಎಂದುಕೊಂಡು ಅಲ್ಲಿಇಲ್ಲಿ ಸಾಲಸೋಲ ಮಾಡಿ ಒಂದು ವ್ಯಾಪಾರದಲ್ಲಿ ಇಳಿದುಬಿಡುತ್ತಾರೆ.ಆದರೆ ಆವ್ಯವಹಾರದ ಗಂಧ ಗಾಳಿನೇ ಗೊತ್ತಿಲ್ಲದೆ ನಮ್ಮಲ್ಲಿರುವ ತಾಳ್ಮೆಯ ಕೊರತೆಯಿಂದಾಗೆ ಗೊತ್ತಿಲ್ಲದೆ ಆ ವ್ಯವಾಹಾರದಲ್ಲಿ ನಷ್ಟವನ್ನು ಅನುಭವಿಸುತ್ತಾರೆ ಇದೇ ರೀತಿ ಸಾಕಷ್ಟ ಜನ ನಷ್ಟ ಹೊಂದಿದವರನ್ನು ದಿನಬೆಳಗಾದರೆ ನೋಡುತ್ತಿರುತ್ತೇವೆ . ಹೀಗೆಲ್ಲ ಆಗಬಾರದು ಎಂದರೆ ನಮ್ಮಲ್ಲಿ ಮೊದಲು ತಾಳ್ಮೆಯನ್ನು ತಂದುಕೊಳ್ಳಬೇಕು.

ಮೊದಲು ನಿಮಗೆ ತಾಳ್ಮೆ ಇದೆಯಾ ಎಂಬುದನ್ನು ಪರೀಕ್ಷೆ ಮಾಡಲು ನಿಮ್ಮ ಸುತ್ತಮುತ್ತ ಸಾಕಷ್ಟು ವಸ್ತುಗಳು ಸಿಗುತ್ತವೆ. ಅದರಲ್ಲಿ ನಾನು ಒಂದನ್ನು ತಿಳಿಸುತ್ತೇನೆ ಸ್ವತಃ ನೀವೆ ಪರಿಕ್ಷೆ ಮಾಡಿಕೊಳ್ಳಬಹುದು ನಿಮಗೆ ತಾಳ್ಮೆ ಇದೆಯಾ ಅಥವಾ ಇಲ್ಲವಾ ಎಂದು .

ಪ್ರತಿ ದಿನ ಸ್ನಾನವನ್ನು ಎಲ್ಲರೂ ಮಾಡುತ್ತಾರೆ ಸ್ನಾನ ಮಾಡುವಾಗ ಮೈಗೆ ಸಾಬೂನು ಹಚ್ಚಿಕೊಳ್ಳುತ್ತೇವೆ ಆದರೆ ದಿನಾಲೂ ಬಳೆಸುವುದರಿಂದಾಗಿ ಸಾಬೂನು ಚಿಕ್ಕದಾಗಿರುತ್ತದೆ. ಅದು ಚಿಕ್ಕದಾಯಿತು ಎನ್ನುವ ಕಾರಣಕ್ಕೆ ಅದನ್ನು ಕೆಲವು ಜನ ಬಳೆಸುವುದನ್ನೇ ಬಿಟ್ಟು ಮತ್ತೊಂದು ಹೊಸ ಸಾಬೂನು ಉಪಯೋಗ ಮಾಡುತ್ತಾರೆ ಏಕೆಂದರೆ ಅದು ಕೈಗೆ ಸಿಗುವುದಿಲ್ಲ. ಪದೇ ಪದೇ ಜಾರಿ ಕೆಳಗೆ ಬೀಳುತ್ತದೆ ಎನ್ನುವ ಕಾರಣಕ್ಕೆ . ಆದರೆ ಇಲ್ಲಿ ನಿಮಗೊಂದು ವಿಷಯ ತಿಳಿದಿರಲಿ ಅದು ತಾನು ತಾನಾಗಿಯೆ ಅದು ಕೆಳಗೆ ಬೀಳುವುದಿಲ್ಲ ಬದಲಿಗೆ ನಿಮಗೆ ಅದನ್ನು ಪೂರ್ತಿಯಾಗಿ ಉಪಯೋಗಿಸಲು ತಾಳ್ಮೆ ಇಲ್ಲ ಅಂತ

ನೀವು ಆ ಚಿಕ್ಕದಾಗಿರುವ ಸಾಬೂನನ್ನು ತಾಳ್ಮೆಯಿಂದ ನಿದಾನವಾಗಿ ಕೆಳಗೆ ಬೀಳದಂತೆ ಉಪಯೋಗಿಸಿದರೆ ಅದನ್ನೂಸಹ ಪೂರ್ತಿಯಾಗಿ ಕಾಲಿಯಾಗುವವರೆಗೂ ಉಪಯೋಗಿಸಬಹುದು, ನೀವು ಈ ರೀತಿ ಅದನ್ನು ಕಾಲಿಯಾಗುವವರೆಗೂ ಉಪಯೋಗಿಸಿದರೆ ನಿಮ್ಮ ತಾಳ್ಮೆ ಬಗ್ಗೆ ನಿಮಗೆ ಅರ್ಥವಾಗುತ್ತದೆ. ಇದನ್ನು ಒಂದು ಬಾರಿ ಮನೆಯಲ್ಲಿ ಮಾಡಿ ನೋಡಿ ಆಮೇಲೆ ಗೊತ್ತಾಗುತ್ತೆ ನಿಮ್ಮ ತಾಳ್ಮೆ ಬಗ್ಗೆ

ನೋಡಿ ಸ್ನೇಹಿತರೆ ಎಲ್ಲಾರಿಗೂ ಆಸೆ ಇರುತ್ತದೆ ನಾವೂ ಸಹ ಜೀವನದಲ್ಲಿ ಬೆಳೀಬೇಕು ಅಂತ ಆದರೆ ನಮ್ಮಲ್ಲಿರುವುದು ತಾಳ್ಮೆಯ ಕೊರತೆ. ಈ ಕಥೆ ಓದಿದ ನಿಮಗೆ ಇದು ಹಾಸ್ಯದ ರೀತಿ ಅನಿಸಿದರೂ ಇದು ನಿಜ

ಕೇವಲ ಒಂದು ಚಿಕ್ಕ ಸಾಬೂನನ್ನು ಅದು ಕಾಲಿಯಾಗುವವರೆಗೂ  ಮೈಗೆ ಹಚ್ಚಿಕೊಂಡರೆ ನೀವು ಮೊದಲ ಬಾರಿ ಗೆದ್ದಂತೆ ನಂತರ ದಿನ ದಿನ ನೀವು ಕೈಗೊಂಡಿರುವ ಕೆಲಸವನ್ನು ತಾಳ್ಮೆ ಯಿಂದ ಮಾಡಿದರೆ ಜೀವನದಲ್ಲಿ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ

ಎಲ್ಲಾರಿಗೂ ಒಳ್ಳೆಯದಾಗಲಿ.

ಚೆಕ್ ಪೋಸ್ಟ್ ತಪಾಸಣೆ ನೆಪದಲ್ಲಿ ರೈತರು, ಸಾಮಾನ್ಯರಿಗೆ ಕಿರುಕುಳ ಆಗಬಾರದು: ಹೆಚ್.ಡಿ.ಕುಮಾರಸ್ವಾಮಿ

ಅಸೆಂಬ್ಲಿಯಲ್ಲಿ ಪೋರ್ನ್ ವೀಡಿಯೋ ಕಂಡ ತ್ರಿಪುರಾ ಬಿಜೆಪಿ ಎಂಎಲ್ಎ..

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅನಧಿಕೃತ ಹಣ ವಹಿವಾಟು / ಖರ್ಚಿನ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ .

- Advertisement -

Latest Posts

Don't Miss