Saturday, April 20, 2024

Latest Posts

ಅಸೆಂಬ್ಲಿಯಲ್ಲಿ ಪೋರ್ನ್ ವೀಡಿಯೋ ಕಂಡ ತ್ರಿಪುರಾ ಬಿಜೆಪಿ ಎಂಎಲ್ಎ..

- Advertisement -

ತ್ರಿಪುರಾ ಬಿಜೆಪಿ ಎಂಎಲ್‌ಎ ಆಗಿರುವ ಜಾಧವ್ ಲಾಲ್ ನಾಥ್, ರಾಜ್ಯ ವಿಧಾನಸಭೆ ಅಸೆಂಬ್ಲಿ ನಡೆಯುತ್ತಿದ್ದ ವೇಳೆ, ಪೋರ್ನ್ ವೀಡಿಯೋ ನೋಡಿದ್ದಾರೆ. ಅಲ್ಲೇ ಇದ್ದ ಓರ್ವರು ಈ ವೀಡಿಯೋವನ್ನ ಸೆರೆ ಹಿಡಿದಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾಗೆ ಬರುತ್ತಿದ್ದಂತೆ, ಪರ ವಿರೋಧ ಚರ್ಚೆ ಶುರುವಾಗಿದೆ.

ಕೆಲವರು ಈ ವೀಡಿಯೋ ನೋಡಿ, ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇನ್ನು ಕೆಲವರು ವ್ಯಂಗ್ಯವಾಡಿದ್ದಾರೆ. ಮತ್ತೆ ಕೆಲವರು ಇವರನ್ನು ಸಮರ್ಥಿಸಿಕೊಂಡಿದ್ದಾರೆ. ಬಾಗ್‌ಬಸ್ಸಾ ಕ್ಷೇತ್ರವನ್ನು ಪ್ರತಿನಿಧಿಸುವ ಜಾಧವ್ ಲಾಲ್‌ನಾಥ್, ರಾಜ್ಯ ಬಜೆಟ್ ಮಂಡನೆಯಾಗುತ್ತಿದ್ದ ವೇಳೆಯೇ ಈ ರೀತಿ ಎಡವಟ್ಟು ಮಾಡಿದ್ದಾರೆ. ಬಜೆಟ್‌ ಮೇಲೆ ಇರಬೇಕಾಗಿದ್ದ ಇವರ ಲಕ್ಷ ಮೊಬೈಲ್ ಮೇಲಿತ್ತು.

ಅಧಿವೇಶನದಲ್ಲಿ ಇತರ ಎಂಎಲ್‌ಎಗಳು ಮತ್ತು ಸ್ಪೀಕರ್ ತಮ್ಮ ರಾಜ್ಯದ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದ ವೇಳೆ, ಇವರು ಮೊಬೈಲ್ ಬಳಸುತ್ತಿದ್ದು, ಇವರ ಹಿಂದೆ ಇದ್ದ ವ್ಯಕ್ತಿ ಈ ವೀಡಿಯೋವನ್ನು ಸೆರೆ ಹಿಡಿದಿದ್ದಾರೆ. ಇನ್ನು ಈ ಬಗ್ಗೆ ಕಾಮೆಂಟ್ ಮಾಡಿದ ಹಲವರು, ಇದೇನು ಮೊದಲಲ್ಲ ಹೀಗೆ ಹಲವು ನಾಯಕರು ಅಧಿವೇಶನದ ವೇಳೆ, ಈ ರೀತಿ ನೀಲಿ ಚಿತ್ರ ನೋಡಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಿದ್ದಾರೆ.

ಫ್ಯಾನ್ ಬಳಸಿ ಐಸ್ಕ್ರೀಮ್ ತಯಾರಿಸಿದ ಮಹಿಳೆ.. ಹೇಗೆ ಗೊತ್ತಾ..? ಈ ವೀಡಿಯೋ ನೋಡಿ..

ಲಿಫ್ಟ್ನ ಬಾಗಿಲಿಗೆ ಸಿಲುಕಿ ಬಾಲಕ ಸಾವು..

- Advertisement -

Latest Posts

Don't Miss