Movie News: ಕೆಲ ದಿನಗಳ ಹಿಂದಷ್ಟೇ ಸಿಂಗಪುರದ ಶಾಲೆಯಲ್ಲಿ ನಡೆದಿದ್ದ ಅಗ್ನಿ ಅವಘಡದಿಂದ ನಟ, ರಾಜಕಾರಣಿ ಪವನ್ ಕಲ್ಯಾಣ್ ಪುತ್ರ ಮಾರ್ಕ್ ಶಂಕರ್ ಪಾರಾಗಿದ್ದ. ಇದೀಗ ಸಿಂಗಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಭಾರತಕ್ಕೆ ಮರಳಿದ್ದಾನೆ. ಪುತ್ರ ಪ್ರಾಣಾಪಾಯದಿಂದ ಹೊರ ಬಂದಿದ್ದಿದ್ದಕ್ಕಾಗಿ, ಪವನ್ ಕಲ್ಯಾಣ್ ಮೂರನೇಯ ಪತ್ನಿ ಮತ್ತು ಮಾರ್ಕ್ ಶಂಕರ್ ತಾಯಿ ಅನ್ನಾ ತಿರುಪತಿ ತಿಮ್ಮಪ್ಪನಿಗೆ, ಮುಡಿ ಕೊಡುವ ಮೂಲಕ ಹರಕೆ ಸಲ್ಲಿಸಿದ್ದಾರೆ.
ಏಪ್ರಿಲ್ 8ರಂದು ಸಿಂಗಪುರದ ಶಾಲೆಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ವೇಳೆ ಅದೇ ಶಾಲೆಯಲ್ಲಿ ಓದುತ್ತಿದ್ದ ಪವನ್ ಕಲ್ಯಾಣ್ ಪುತ್ರ ಮಾರ್ಕ್ ಶಂಕರ್ ಸೇರಿ 20 ಮಕ್ಕಳಿಗೆ ಸುಟ್ಟ ಗಾಯಗಳಾಗಿತ್ತು. ತಕ್ಷಣ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗಿತ್ತು. ಈ ವೇಳೆ ಮಾರ್ಕ್ ತಾಯಿಯಾಗಿರುವ ಅನ್ನಾ ಲೆಜ್ನೆವಾ, ಮಗ ಪ್ರಾಣಾಪಾಯದಿಂದ ಹೊರಬರಲಿ ಎಂದು ತಿರುಪತಿ ತಿಮ್ಮಪ್ಪನಲ್ಲಿ ಹರಕೆ ಹೊತ್ತು, ಮುಡಿ ಕೊಡುವುದಾಗಿ ಹೇಳಿಕೊಂಡಿದ್ದರು. ಇದೀಗ ಮಗ ಚಿಕಿತ್ಸೆ ಪಡೆದು ಹುಷಾರಾದ ಬಳಿಕ, ಅನ್ನಾ ತಿರುಪತಿಗೆ ಬಂದು, ಮುಡಿ ಕೊಟ್ಟು ಹರಕೆ ತೀರಿಸಿದ್ದಾರೆ.
ಪವನ್ ಕಲ್ಯಾಣ್ ಮೂರನೇ ಪತ್ನಿಯಾಗಿರುವ ಅನ್ನಾ ಲೆಜ್ನೆವಾ ಮತ್ತು ಅವರ ಇಬ್ಬರು ಮಕ್ಕಳು ಸಿಂಗಪೂರದಲ್ಲಿ ನೆಲೆಸಿದ್ದರು. ಮಕ್ಕಳು ಕೂಡ ಅಲ್ಲೇ ಶಾಲೆಗೆ ಹೋಗುತ್ತಿದ್ದರು. ಪವನ್ ಕಲ್ಯಾಣ್ ತಿಂಗಳಿಗೊಮ್ಮೆ ಸಿಂಗಪುರಕ್ಕೆ ಹೋಗಿ, ಕುಟುಂಬಸ್ಥರೊಂದಿಗೆ ಸಮಯ ಕಳೆದು ಬರುತ್ತಿದ್ದರು. ಆದರೆ ಮಾರ್ಕ್‌ಗೆ ಈ ಅವಘಡದಿಂದ ಸುಟ್ಟು ಗಾಯಗಳಾಗಿ, ಉಸಿರಾಟದ ಸಮಸ್ಯೆ ಉದ್ಭವಿಸಿತ್ತು.
ಬಳಿಕ ಸಿಂಗಪುರದಲ್ಲಿ ಮಾರ್ಕ್‌ಗೆ ಚಿಕಿತ್ಸೆ ಕೊಡಿಸಿ, ಹೈದರಾಬಾದ್‌ಗೆ ಕರೆತರಲಾಗಿದೆ. ಈ ಬಗ್ಗೆ ಮಾತನಾಡಿರುವ ಪವನ್ ಕಲ್ಯಾಣ್, ನನ್ನ ಮಗನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರಾರ್ಥನೆಯಿಂದ ನಮ್ಮ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸದ್ಯ ಅವನನ್ನು ಹೈದರಾಬಾದ್‌ಗೆ ಕರೆದುಕೊಂಡು ಬರಲಾಗಿದೆ ಎಂದಿದ್ದಾರೆ.




