Thursday, July 31, 2025

Latest Posts

ಸ್ವಂತ ಪಕ್ಷದವರೇ ಲಾಟರಿ ಸಿಎಂ ಎಂದಿದ್ದಾರೆ, ಇದಕ್ಕೆ ಸಿದ್ದರಾಮಣ್ಣನವರೇ ಉತ್ತರಿಸಬೇಕು: ನಿಖಿಲ್ ಕುಮಾರ್

- Advertisement -

Political News: ಇಂದು ಜೆಡಿಎಸ್ ಯುವನಾಯಕ ನಿಖಿಲ್ ಕುಮಾರ್ ಮಂಡ್ಯದಲ್ಲಿ ಮಾಧ್ಯಮದ ಜತೆ ಮಾತನಾಡಿದ್ದು, ಎಲ್ಲ ಪತ್ರಕರ್ತರಿಗೂ ಪತ್ರಿಕಾ ದಿನದ ಶುಭಾಶಯ ಕೋರಿದ್ದಾರೆ. ಅಲ್ಲದೇ, ಸಮಾಜ ಮತ್ತು ಸರ್ಕಾರದ ಮಧ್ಯೆ ಸೇತುವೆಯಾಗಿ ಕೆಲಸ ಮಾಡುತ್ತಿರುವ ನಿಮಗೆ ದೇವರು ಸಕಲ ಶಕ್ತಿ ನೀಡಲಿ ಎಂದು ಹಾರೈಸಿದ್ದಾರೆ.

ಇದೇ ವೇಳೆ ಮಾತನಾಡಿರುವ ನಿಖಿಲ್ ಕುಮಾರ್, ಬಿ.ಆರ್.ಪಾಟೀಲ್ ಲಾಟರಿ ಸಿಎಂ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬಿ.ಆರ್.ಪಾಟೀಲ್ ಅವರು ಹಿರಿಯ ಶಾಸಕರು, ಅನುಭವಿಗಳು. ಸಿದ್ದರಾಮಣ್ಣ ಅವರು ನಮ್ಮ ಪಕ್ಷವನ್ನು ಬಿಟ್ಟು ಹೋದ ಸಂದರ್ಭದಲ್ಲಿ, ಬಿ.ಆರ್.ಪಾಟೀಲ್ ಅವರು ಕೂಡ ಪಕ್ಷವನ್ನು ಬಿಟ್ಟು ಹೋದದ್ದು ಇತಿಹಾಸ. ಅಲ್ಲದೇ ಸಿದ್ದರಾಮಣ್ಣ ಅವರ ಆಪ್ತ ಬಣದಲ್ಲಿ ಗುರುತಿಸಿಕ“ಂಡಿದ್ದರೂ,ಇಂದು ಅವರೇ ಸಿಎಂ ಅವರನ್ನು ಲಾಟರಿ ಸಿಎಂ ಎಂದಿದ್ದಾರೆ.

ಇದರಿಂದಲೇ ತಿಳಿಯುತ್ತದೆ. ಶಾಸಕರ ಪರಿಸ್ಥಿತಿ ಯಾವ ರೀತಿ ಇದೆ ಎಂದು. ಜನ ಸಾಮಾನ್ಯರು ಅವರನ್ನು ಆಶೀರ್ವದಿಸಿ, ಶಾಸಕರನ್ನಾಗಿ ಮಾಡಿದ್ದಾರೆ. ಆದರೆ ಸರ್ಕಾರ ಶಾಸಕರಿಗೆ 1 ರೂಪಾಯಿ ಅನುದಾನ ನೀಡದೇ, ಅಭಿವೃದ್ಧಿ ಕೆಲಸಗಳಿಗೆ ಬೆಂಬಲಿಸದೇ, ಶಾಸಕರು ಜನರಿಗೆ ಉತ್ತರ ನೀಡಲಾಗದಂಥ ಸಂದಿಗ್ಧ ಪರಿಸ್ಥಿತಿಗೆ ತಂದಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ನಿಖಿಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ವಿರೋಧ ಪಕ್ಷದವರೇನು ಸಿದ್ದರಾಮಣ್ಣ ಅವರಿಗೆ ಲಾಟರಿ ಮುಖ್ಯಮಂತ್ರಿ ಅಂತ ಹೇಳಲಿಲ್ಲ. ಸ್ವಂತ ಪಕ್ಷದವರೇ ಹೇಳುತ್ತಿದ್ದಾರೆ. ಅದಕ್ಕೆ ಸಿದ್ದರಾಮಣ್ಣ ಅವರೇ ಉತ್ತರಿಸಬೇಕು.

- Advertisement -

Latest Posts

Don't Miss