Sunday, September 8, 2024

Latest Posts

ರಾಜ್ಯದ ಜನತೆ ಕೊಟ್ಟಿರುವ ಶಕ್ತಿಯನ್ನು ದ್ವೇಷಕ್ಕೆ ಬಳಸಿಕೊಳ್ಳುವುದಿಲ್ಲ: ಹೆಚ್.ಡಿ.ಕುಮಾರಸ್ವಾಮಿ

- Advertisement -

Political News: ಕೇಂದ್ರ ಸಚಿವರಾದ ಬಳಿಕ ಹೆಚ್.ಡಿ.ಕುಮಾರಸ್ವಾಮಿ ಮೊದಲ ಬಾರಿ ಬೆಂಗಳೂರಿನ ಜೆಡಿಎಸ್ ಕಚೇರಿಗೆ ಬಂದಿದ್ದು, ಕುಮಾರಸ್ವಾಮಿ ಅವರಿಗೆ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದ್ದಾರೆ.

ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಹಾಸನದ ಜನತೆ ನಮಗೆ ನೀಡಿರುವ‌ ಶಕ್ತಿಯನ್ನು ನನ್ನ ಕೊನೆಯ ಉಸಿರು ಇರೋವರೆಗೂ ಮರೆಯೊಲ್ಲ. ನನ್ನ ಕುಟುಂಬ ಅಂದರೆ, ನಾನು ನಿಖಿಲ್, ಅನಿತಾ ಇದ್ದೇವೆ. ಅದನ್ನು ದುರಪಯೋಗ ಮಾಡಿಕೊಂಡರು. 82 ವರ್ಷದ ಯಡಿಯೂರಪ್ಪನ್ನು, ನಮ್ಮನ್ನು ಮುಗಿಸಲು ಏನೇನು ಮಾಡಿದ್ರಿ ಅದು‌ ಒಂದು ಭಾಗ. ನಾಲ್ಕು ಬಾರಿ ಮಂತ್ರಿ ಆಗಿರುವ ಯಡಿಯೂರಪ್ಪ ಅವರ ಕುಟುಂಬ ಮುಗಿಸಲು ಹೊರಟಿದ್ದೀರಿ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಿರ್ನಾಮ ಆಗೋದು ಸತ್ಯ ಎಂದು ಕುಮಾರಸ್ವಾಮಿ ಕಾಂಗ್ರೆಸ್ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಪೆಬ್ರವರಿ 2 ರಂದು ಘಟನೆ ಆಗಿದೆ. ನಾಲ್ಕು ತಿಂಗಳು‌ ಏನು ಮಾಡಿದ್ರಿ? ಮುರುಘಾಮಠದ‌ ಸ್ವಾಮೀಜಿ, ತುಮಕೂರು ಸ್ವಾಮಿಜಿಗಳ ಮೇಲೆ ಫೋಸ್ಕೋ ಕೇಸ್ ಹಾಕಿದ್ದಿರಿ. ನಿಮ್ಮುದು ಒಂದು ಇಲಾಖೆಯಾ? ನಿಮ್ಮದು ಒಂದು ಸರ್ಕಾರವಾ? 9 ಸೀಟು ಗೆದ್ದಿರೋದು ನಿಮ್ಮ ಸಾಧನೆ ಅಲ್ಲ. ನಮ್ಮವರು ಮೈಮರೆತಿದ್ದಕ್ಕೆ ಕ್ಷೇತ್ರ ಗೆದ್ದಿದ್ದೀರಿ. ಹಾಸನದಲ್ಲಿ ಏನೇನು ಕುತಂತ್ರ ಮಾಡಿದ್ದೀರಿ. ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ್ದೀರಿ. ಸಿಡಿ ಶಿವು ‌ಅವರದ್ದು ಆಡಿಯೋ ಕಥೆ ಏನಾಯಿತು? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ನಾನು ಸಂಸದನಾಗಿದ್ದೇನೆ, ಅವರ ಮಟ್ಟಕ್ಕೆ ನಾನು ಇಳಿಯಲ್ಲ. ಸಿಎಂ ಮತ್ತೊಂದು ಮೀಟಿಂಗ್ ಮಾಡಿದ್ದಾರೆ. ಕುಮಾರಸ್ವಾಮಿ ಮಂತ್ರಿ ಆಗಿಬಿಟ್ಟ. ಊಟದ ತಟ್ಟೆಯಲ್ಲಿಯೂ ನಾನೇ ಕಾಣುತ್ತಿದ್ದೇನೆ, ಈ‌ ಸಣ್ಣತನ‌ ಬಿಡಿ. ರಾಜ್ಯದ ಜನತೆ ಕೊಟ್ಟಿರೋ‌ ಶಕ್ತಿಯನ್ನು ದ್ವೇಷಕ್ಕೆ ಬಳಸಿಕೊಳ್ಳಲ್ಲ. ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ಬನ್ನಿ ನಮ್ಮ ಕಚೇರಿಗೆ‌, ನಾಡಿನ ಅಭಿವೃದ್ಧಿ ಕೆಲಸ ಮಾಡೋಣ. ನಾನು ಸಿಎಂ ಆದಾಗ್ಯೂ ಅನುಭವ ಇರಲಿಲ್ಲ. ಆದರೆ ರಾಜ್ಯದ ಅಭಿವೃದ್ಧಿಗೆ ಅತ್ಯುನ್ನತ ಕೆಲಸ ಮಾಡಿದ್ದೇನೆ. ಅದೇ ರೀತಿ ಈಗಲೂ ಕೆಲಸ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ದೇಶದ ‌ದೊಡ್ಡ ಖಾತೆ‌ ನರೇಂದ್ರ ಮೋದಿ‌ ನೀಡಿದ್ದಾರೆ. ಗುಜರಾತ್ ‌ನಲ್ಲಿ ಸೆಮಿಕಂಡಕ್ಟರ್ ಕಂಪನಿ ಮಾಡುತ್ತಿದ್ದಾರೆ. ಆ ಕಂಪನಿಯ ಒಟ್ಟು ಹೂಡಿಕೆ 2.75 ಬಿಲಿಯನ್ ಡಾಲರ್ ಇದೆ. ಅದಕ್ಕೆ ರಾಜ್ಯ ಸರ್ಕಾರದ 70% ಸಬ್ಸಿಡಿ ‌ಕೊಡಬೇಕು. 5 ಸಾವಿರ ಉದ್ಯೋಗ ‌ಕೊಡುತ್ತಾರೆ. ನಾವು 2.0 ಲಕ್ಷ ಬಿಲಿಯನ್ ಡಾಲರ್ ‌ಸಬ್ಸಿಡಿ‌ ಅವರಿಗೆ‌ ಕೊಡಬೇಕು. ಒಂದು‌ ಉದ್ಯೋಗಕ್ಕೆ‌ 3.3 ಕೋಟಿ‌ ಕೊಡೋದು ಎಷ್ಟು ಸರಿ ಎಂದು‌ ಪ್ರಶ್ನೆ ಮಾಡಿದೆ. ನನಗೆ 15 ರಿಂದ 20 ದಿನ ಸಮಯ ಬೇಕು. ನಾನು ಎಲ್ಲದರ‌ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ. 2030 ರೊಳಗೆ ಆರ್ಥಿಕವಾಗಿ 3 ಸ್ಥಾನಕ್ಕೆ ಬರಬೇಕು. 2040ರೊಳಗೆ ವಿಶ್ವಸ ನಂಬರ್ ಒನ್ ಆರ್ಥಿಕ ಶಕ್ತಿ ದೇಶವಾಗಿ‌ ಹೊಮ್ಮಬೇಕು. ನರೇಂದ್ರ ಮೋದಿ ಕನಸಿಗೆ ನಾನು ಶ್ರಮಿಸಬೇಕು.

ಅದರ ಜೊತೆಗೆ ಕೃಷಿಕರ ಬಗ್ಗೆ ಕಾಳಜಿ ಮಾಡಬೇಕಿದೆ. ಒಂದು ದಿನದಲ್ಲಿ ಎಲ್ಲ ಸಮಸ್ಯೆ ಬಗೆ ಹರಿಯುವುದಿಲ್ಲ. ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಕೆಲಸ ಆಗಬೇಕಿದೆ. ನಾಡಿನ ತಾಯಂದಿರಿಗೆ 2 ಸಾವಿರ ಕೊಡುವುದು ಸಾಧನೆ ಅಲ್ಲ. ನೀವು ಸ್ವಾಭಿಮಾನದಿಂದ ಬದುಕಬೇಕು ಅದು ನನ್ನ ಕನಸು. ಚಂದ್ರಬಾಬು ನಾಯ್ಡು ಅವರನ್ನು ಎಲ್ಲರೂ ಬಿಟ್ಟು ಹೋದರು. ಅವರನ್ನು ಜೈಲಿಗೆ ಕೂಡ ಕಳುಹಿಸಿದರು. ಈಗ ಅವರಿಗೆ ಅತ್ಯದ್ಭುತ ಗೆಲುವು ಸಿಕ್ಕಿದೆ. ಹಾಗೆ ನಮಗೆ ಒಂದು ಅವಕಾಶ ನಮಗೆ ಕೊಡಿ. ಸಂಪೂರ್ಣ ಬಹುಮತ ನಮಗೆ ನೀಡಿ, ರಾಜ್ಯದ ಅಭಿವೃದ್ಧಿ ಮಾಡುತ್ತೇನೆ ಎಂದೆ. ನನ್ನನ್ನು ಸಂಪೂರ್ಣವಾಗಿ ಕಡಗಣೆನೆ ಮಾಡಿದರು. ಮಂಡ್ಯದ ಜನತೆ ನನಗೆ ಆಶೀರ್ವಾದ ಮಾಡಿದ್ದೀರಿ. ನಿಮ್ಮಿಂದ ನನಗೆ ಗುರುತಿಸಿದ್ದಾರೆ, ನನಗೆ ಸಿನಿಯಾರಿಟಿ ನಿಮ್ಮಿಂದಲೇ ಸಿಕ್ಕಿದೆ. ನನ್ನ ಕಾರ್ಯಕರ್ತರು ನನಗೆ ಗೌರವ ತಂದು ಕೊಟ್ಟಿದ್ದೀರಿ. ನಿಮ್ಮನ್ನು ಉಳಿಸಿ, ಪಕ್ಷ ಕಟ್ಟುವ ಕೆಲಸದ ಜೊತೆಗೆ ನಿಮ್ಮ ಗೌರವ ಉಳಿಸುತ್ತೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಕುಮಾರಣ್ಣ ಮಂತ್ರಿಯಾಗಿ ಹೋದ, ನಮ್ಮ ಕೈಗೆ ಸಿಗಲ್ಲ ಎಂದುಕೊಳ್ಳಬೇಡಿ. ಎಲ್ಲರನ್ನೂ ನಾನು ಸಮಚಿತ್ತವಾಗಿ ನೋಡುತ್ತೇನೆ. ನಾನು ಜಾತಿ‌ಯಿಂದ ಯಾರನ್ನು ಗುರುತಿಸುವುದಿಲ್ಲ. ನಾನು ನಿಮ್ಮ ಮನೆಯ ಅಣ್ಣನೆಂದು ಭಾವಿಸಿ. ನಾವೆಲ್ಲರೂ ಬರಿಗೈಯಲ್ಲಿಯೇ ಹೋಗುದು. ನೀವು ಇಷ್ಟು ಉತ್ಸಾಹದಿಂದ ಬಂದಿದ್ದೀರಿ, ನಿಮಗೆ ಧನ್ಯವಾದಗಳು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಚುನಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರಾಮಾಣಿಕವಾಗಿ ದುಡಿದಿದ್ದಾರೆ. ಅದಕ್ಕೆ ಕ್ಯಾಬಿನೆಟ್ ರ್ಯಾಂಕ್ ಕೊಟ್ಟಿದ್ದಾರೆ. ಇದೆಲ್ಲಾ‌ ನಿಮ್ಮ ದುಡಿಮೆಯಾಗಿದೆ. ಕಾನೂನಿನ ವ್ಯಾಪ್ತಿಯಲ್ಲಿ ಕಾರ್ಯಕರ್ತರನ್ನ ಉಳಿಸಿ ದೇಶದ ಅಭಿವೃದ್ಧಿ ಮಾಡುತ್ತೆನೆ. ಕುಮಾರಣ್ಣ ಕೇಂದ್ರದ ಮಂತ್ರಿ ಅಂತ ಭೇಟಿಗೆ ಅವಕಾಶ ಕೊಡಲ್ಲ ಅಂತ ಅಂದುಕೊಳ್ಳೊದು ಬೇಡ. ಸೆಕ್ಯೂರಿಟಿ ಜಾಸ್ತಿ ಇರುತ್ತೆ. ಭೇಟಿಗೆ ಎಲ್ಲರಿಗೂ ಅವಕಾಶ ಕೊಡುತ್ತೆನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಬಿಎಸ್‌ವೈ ವಿರುದ್ಧ ರಾಜಕೀಯ ವೈಷಮ್ಯ: ಕಾಂಗ್ರೆಸ್ ವಿರುದ್ಧ ಪ್ರಹ್ಲಾದ್ ಜೋಶಿ ಕಿಡಿ

ಹಲವು ಒತ್ತಡಗಳ ನಡುವೆಯೇ ದರ್ಶನ್‌ನನ್ನು ಅರೆಸ್ಟ್ ಮಾಡಿದ ಪೊಲೀಸ್ ಅಧಿಕಾರಿ ಯಾರು ಗೊತ್ತಾ..?

Sandalwood News: ಕೊನೆಗೂ ಸತ್ಯ ಬಾಯ್ಬಿಟ್ಟ ದರ್ಶನ್ ಮತ್ತು ಪವಿತ್ರಾ

- Advertisement -

Latest Posts

Don't Miss