Horoscope: ಈ ಪ್ರಪಂಚದಲ್ಲಿ ಮೋಸ ಹೋಗುವವರು ಇರುವ ತನಕ, ಮೋಸ ಮಾಡುವವರು ಇರುತ್ತಾರೆ ಅಂತಾ ಹೇಳಲಾಗುತ್ತದೆ. ಯಾಕಂದ್ರೆ ಮನುಷ್ಯ ಎಷ್ಟೇ ಬುದ್ಧಿವಂತನಾಗಿದ್ರೂ, ಅವನ ಹಣೆಬರಹ ಸರಿ ಇಲ್ಲದಿದ್ದಾಗ, ಮೋಸ ಹೋಗುತ್ತಾನೆ. ಆದರೆ ಈ ರಾಶಿಯವರಿಗೆ ಎಷ್ಟೇ ಎಚ್ಚರಿಸಿದರೂ, ಈ ರಾಶಿಯವರು ಹೆಚ್ಚಾಗಿ ಮೋಸ ಹೋಗುತ್ತಾರೆ. ಹಾಗಾದ್ರೆ ಯಾವ ರಾಶಿಯವರು ಇವರು ಅಂತಾ ತಿಳಿಯೋಣ ಬನ್ನಿ..
ಮಿಥುನ: ಮಿಥುನ ರಾಶಿಯವರು ಎಲ್ಲಾ ಕೆಲಸಗಳಲ್ಲಿ ಬುದ್ಧಿವಂತರು. ಆದರೆ ಬಹುಬೇಗ ಮೋಸ ಹೋಗುತ್ತಾರೆ. ಹಣದ ವಿಷಯ, ಕೆಲವು ವಸ್ತುವಿನ ವಿಷಯದಲ್ಲಿ ಜನ ಇವರಿಗೆ ಮೋಸ ಮಾಡುತ್ತಾರೆ. ಆದರೆ ಇವರ ವಿಶೇಷವೇನು ಎಂದರೆ, ಇವರು ಲಾಸ್ ಆದ ಬಗ್ಗೆ ಹೆಚ್ಚು ಚಿಂತಿಸದೇ, ಅದನ್ನು ದೇವರಿಗೆ ಬಿಟ್ಟುಬಿಡುತ್ತಾರೆ. ಮತ್ತು ಇವರ ಮೇಲೆ ಶಿವನ ವಿಶೇಷ ಕೃಪೆ ಇರುವ ಕಾರಣ, ಇವರಿಗೆ ಮೋಸ ಮಾಡಿದವರಿಗೆ ಎಂದಿಗೂ ಲಾಭವಾಗುವುದೇ ಇಲ್ಲ.
ಕರ್ಕಾಟಕ: ಕಟಕ ರಾಶಿಯವರನ್ನು ಯಾರೂ ಬೇಕಾದ್ರೂ ಸುಲಭವಾಗಿ ಮೋಸ ಮಾಡಬಹುದು. ಏಕೆಂದರೆ, ಕಟಕ ರಾಶಿಯವರು ಎಲ್ಲರನ್ನೂ ಕಣ್ಣುಮುಚ್ಚಿ ನಂಬಿಬಿಡುತ್ತಾರೆ. ಆದರೆ ಒಮ್ಮೆ ಅವರಿಗೆ ಈ ಮೋಸದ ಬಗ್ಗೆ ಗೊತ್ತಾಗಿ, ನಿಮ್ಮ ಮೇಲಿನ ನಂಬಿಕೆ ಹೊರಟು ಹೋದರೆ, ಮತ್ತೆ ಕೊನೆಯವರೆಗೂ ಅವರೆಂದೂ ನಿಮ್ಮನ್ನು ನಂಬುವುದಿಲ್ಲ.
ಧನು: ಧನು ರಾಶಿಯವರು ಕೂಡ ಓದುವುದರಲ್ಲಿ, ವಿದ್ಯಾಭ್ಯಾಸದಲ್ಲಿ, ಕೆಲಸ ಕಾರ್ಯಗಳಲ್ಲಿ ನಿಪುಣರು. ಆದರೆ, ಎಲ್ಲರನ್ನೂ ಬಹುಬೇಗ ನಂಬಿಬಿಡುತ್ತಾರೆ. ಜೊತೆಗೆ ಇವರ ಜೊತೆ ಮೋಸ ನಡೆದರೆ, ಅದನ್ನು ಪ್ರಶ್ನಿಸುವ ತಾಕತ್ತು ಕೂಡ ಇವರಿಗಿದೆ. ಎಷ್ಟು ಬೇಗ ಮೋಸ ಹೋಗುತ್ತಾರೋ, ಅಷ್ಟೇ ಬೇಗ ಮೋಸ ಮಾಡಿದವರನ್ನೂ ಕಂಡುಹಿಡಿಯುತ್ತಾರೆ.

ಕುಂಭ: ಕುಂಭ ರಾಶಿಯವರು ಎದುರಿಗೆ ಇರುವವರು ಹೇಳಿದ್ದೇ ಸತ್ಯ ಎನ್ನುವಂಥವರು. ಆ ಬಗ್ಗೆ ಎರಡನೇಯವರು ಬಂದು ಸತ್ಯ ಹೇಳಿದರೂ, ಅವರಿಗೆ ಅದು ಸತ್ಯ ಎಂದೆನ್ನಿಸುವುದಿಲ್ಲ. ಏಕೆಂದರೆ, ಅವರು ಮೊದಲು ಬಂದವರ ಮಾತನ್ನೇ ಗಾಢವಾಗಿ ನಂಬಿಬಿಡುತ್ತಾರೆ. ಮತ್ತು ಅದರ ಸತ್ಯಾಸತ್ಯತತೆ ಪರಿಶೀಲಿಸುವ ಗೌಜಿಗೆ ಹೋಗುವುದಿಲ್ಲ. ಹಾಗಾಗಿ ಇವರು ಈಸಿಯಾಗಿ ಮೋಸ ಹೋಗಬಹುದು.




