Saturday, January 18, 2025

Latest Posts

ಈ ರಾಶಿಯವರು ಸದಾ ಸ್ವಾಭಿಮಾನಿಯಾಗಿರಲು ಬಯಸುವವರು

- Advertisement -

Spiritual: ಇಂದಿನ ಕಾಲದಲ್ಲಿ ಸ್ವಾಭಿಮಾನಿಯಾಗಿ ಇರೋದು ತುಂಬಾ ಕಠಿಣ ಕೆಲಸ. ಯಾಕಂದ್ರೆ ನಮ್ಮಷ್ಟಕ್ಕೆ ನಾವು ಇರೋದಕ್ಕೂ ಈ ಸಮಾಜ ಬಿಡಲ್ಲ ಅನ್ನುತ್ತೆ. ಅಲ್ಲದೇ ಹಣೆಬರಹ ಕೆಟ್ಟರೆ, ಒಂದರ ಮೇಲೊಂದರಂತೆ ಕಷ್ಟ ಓಡೋಡಿ ಬರುತ್ತದೆ. ಆದರೆ ಜೀವನದಲ್ಲಿ ಏನೇ ಸಮಸ್ಯೆ ಬರಲಿ, ಎಷ್ಟೇ ಕಷ್ಟ ಬರಲಿ, ದೇವರ ದಯೆಯೊಂದಿದ್ದರೆ, ಸಾಕು. ನಾನು ಸದಾ ಸ್ವಾಭಿಮಾನಿಯಾಗಿರುತ್ತೇನೆ ಎನ್ನುವ ರಾಶಿಯವರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.

ಮೇಷ: ಮೇಷ ರಾಶಿಯವರು ಸ್ವಾಭಿಮಾನಿ ಗುಣ ಹೊಂದಿದವರು. ಅಪ್ಪ-ಅಮ್ಮ, ಪತಿ ಯಾರೇ ಎಷ್ಟೇ ಶ್ರೀಮಂತರಾಗಿದ್ದರೂ, ತನ್ನ ಅನ್ನ ತಾನೇ ದುಡಿದುಕೊಳ್ಳಬೇಕು ಎನ್ನುವ ಗುಣ ಇವರದ್ದಾಗಿರುತ್ತದೆ. ಹಾಗಾಗಿಯೇ ಕಷ್ಟ ಪಟ್ಟಾದರೂ ಉತ್ತಮ ಶಿಕ್ಷಣ ಪಡೆದು, ಜೀವನದಲ್ಲಿ ಮುಂದೆ ಸಾಗುತ್ತಾರೆ. ಅಲ್ಲದೇ, ಏನೇ ಕಷ್ಟ ಬಂದರೂ, ಅದನ್ನು ಎದುರಿಸಿ ನಿಲ್ಲುವ ಧೈರ್ಯ ಇವರಲ್ಲಿ ಇರುತ್ತದೆ.

ಕರ್ಕ: ಕರ್ಕ ರಾಶಿಯವರು ಶಿಕ್ಷಣದಲ್ಲಿ ಅಷ್ಟು ಜಾಣರೂ, ಚೆನ್ನಾಗಿ ದುಡಿಯಬಲ್ಲವರು ಅಲ್ಲದಿದ್ದರೂ, ತನ್ನವರ ಕಷ್ಟಗಳಿಗೆ ಸ್ಪಂದಿಸುವ ಭಾವನೆ ಹೊಂದಿರುತ್ತಾರೆ. ಅಲ್ಲದೇ, ಉಳಿತಾಯ ಮಾಡುವ ಜಾಣತನವೂ ಇವರಲ್ಲಿರುತ್ತದೆ. ಒಂದು ವೇಳೆ ಉಳಿತಾಯ ಮಾಡಲಾಗದಿದ್ದಲ್ಲಿ, ದುಡಿಯುವುದನ್ನು ಮಾತ್ರ ಬಿಡುವುದಿಲ್ಲ. ಯಾರ ದುಡ್ಡಲ್ಲಿ ಜೀವನ ಸಾಗಿಸಲು ಇಚ್ಚಿಸದ ಇವರು, ಯಾರ ಮುಂದೆಯೂ ಕೈ ಚಾಚಲು ಇಷ್ಟಪಡುವುದಿಲ್ಲ.

ತುಲಾ: ತುಲಾ ರಾಶಿಯವರು ಸದಾ ಕಷ್ಟಪಟ್ಟು ದುಡಿದು, ತಮ್ಮ ಆಸೆಗಳನ್ನು ಪೂರೈಸಿಕೊಳ್ಳುವ ಸ್ವಭಾವ ಹೊಂದಿರುತ್ತಾರೆ. ಇವರಲ್ಲಿರುವ ಜಾಣತನ, ಚುರುಕುತನವೇ, ಎಂಥ ಪರಿಸ್ಥಿತಿಯಲ್ಲೂ ಮೈಕೊಡವಿ ಎದ್ದು ನಿಲ್ಲುವಂತೆ ಮಾಡುತ್ತದೆ. ಅಲ್ಲದೇ, ಇವರು ಒಮ್ಮೆ ಏನನ್ನಾದರೂ ಮಾಡಬೇಕು ಎಂದು ಪಣ ತೊಟ್ಟರೆ, ಜೀವ, ಜೀವನದ ಬಗ್ಗೆಯೂ ಯೋಚಿಸದೇ, ತಮ್ಮ ಕೆಲಸ ತಾವು ಮಾಡುತ್ತ ಸಾಗುತ್ತಾರೆ.

ವೃಶ್ಚಿಕ, ಸಿಂಹ: ವೃಶ್ಚಿಕ ರಾಶಿಯವರು ಮತ್ತು ಸಿಂಹ ರಾಶಿಯವರದ್ದು ಒಂದೇ ಬುದ್ಧಿ. ಇಬ್ಬರಿಗೂ ನಾಯಕತ್ವದ ಗುಣವಿರುತ್ತದೆ. ಇಬ್ಬರೂ ಮಹಾ ಸ್ವಾಭಿಮಾನಿಗಳು, ಶಿಕ್ಷಣದಿಂದ ಮುಂದುವರಿದು ಅಥವಾ ಶಿಕ್ಷಣವಿಲ್ಲದಿದ್ದರೂ, ಶ್ರಮವಹಿಸಿ ದುಡಿದಾದರೂ, ತಮ್ಮ ಜೀವನವನ್ನು ತಾವು ಕಟ್ಟಿಕೊಳ್ಳುತ್ತಾರೆ. ಎರಡೂ ರಾಶಿಯವರಿಗೂ ಇನ್ನೊಬ್ಬರ ಎದುರು ಕೈಚಾಚುವ ಮನಸ್ಸು ಎಂದಿಗೂ ಆಗುವುದಿಲ್ಲ.

- Advertisement -

Latest Posts

Don't Miss