Hubballi News: ಹುಬ್ಬಳ್ಳಿ: ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಕೊನೆಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನಿನ್ನೆ ನಡೆದ ಸಾಮಾನ್ಯ ಸಭೆಯಲ್ಲಿ ಮಹಾನಗರ ಪಾಲಿಕೆ ಮೇಯರ್ ವೀಣಾ ಬರದ್ವಾಡ್ ಠರಾವು ಪಾಸ್ ಮಾಡಿದ್ದಾರೆ.
ಈದ್ಗಾ ಮೈದಾನದಲ್ಲಿ ಗಣೇಶೋತಗಸವ ಆಚರಣೆಗೆ ಅನುಮತಿ ನೀಡುವ ಕುರಿತು ವಿಷಯ ಮಂಡಿಸಲಾಯಿತು. ಆದ್ರೆ ಪರ- ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಿ ಹೊರ ನಡೆದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹು-ಧಾ ಮಹಾನಗರ ಪಾಲಿಕೆ ಮೇಯರ್ ವೀಣಾ ಬರದ್ವಾಡ್,
ಕಳೆದ ವರ್ಷದಂತೆ ಈ ವರ್ಷವು ಗಣೇಶ ಪ್ರತಿಷ್ಟಾಪನೆ ಗೆ ಪರವಾನಿಗೆ ಕೋಡಲಾಗಿದೆ. ಕಳೆದ ವರ್ಷ ಯಾರಿಗೆ ಪರವಾನಿಗೆ ಕೊಡಲಾಗಿತ್ತೋ ಅವರಿಗೆ ಕೊಡಲಾಗುತ್ತದೆ. ರಾಣಿ ಚನ್ನಮ್ಮ ಗಜಾನನ ಮಂಡಳಿಗೆ ಪ್ರತಿಷ್ಠಾಪನೆಗೆ ಅವಕಾಶ ಕೊಡಲಾಗಿದೆ ಎಂದರು.
ಈ ಬಗ್ಗೆ ವಿರೋಧ ಪಕ್ಷದವರು ವಿರೋಧ ಮಾಡುವುದು ಸಹಜ. ಮಹಾನಗರ ಪಾಲಿಕೆಯ ಆಸ್ತಿ ಆಗಿದ್ದರಿಂದ ಪಾಲಿಕೆ ನಿರ್ಧಾರ ತೆಗೆದುಕೊಳ್ಳುತ್ತದೆ. ಹೈಕೋರ್ಟ್ ಆದೇಶದಂತೆ ಪಾಲಿಕೆ ಆಯುಕ್ತರು ನಿರ್ಧಾರ
ತೆಗೆದುಕೊಳ್ಳುವ ಬಗ್ಗೆ ಪಾಲಿಕೆ ಆಯುಕ್ತರಿಗೆ ಈಗಾಗಲೆ ಹೇಳಲಾಗಿದೆ. ಈದ್ಗಾ ಮೈದಾನ ಪಾಲಿಕೆ ಆಸ್ತಿ ಅಗಿದ್ದರಿಂದ ಪಾಲಿಕೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
ಪ್ರತಿ ವರ್ಷ ನಮಾಜ್, ಧ್ವಜಾರೋಹಣಕ್ಕೆ ಅವಕಾಶ ಕೋಡಲಾಗುತ್ತದೆ. ಅದೇ ರೀತಿ ಗಣೇಶ ಪ್ರತಿಷ್ಟಾಪನೆ ಗೆ ಅವಕಾಶ ಕೊಡಲಾಗಿದೆ. ಈ ವರ್ಷವು ಮೂರು ದಿನ ಪ್ರತಿಷ್ಟಾಪನೆ ಗೆ ಅವಕಾಶ ಕೊಡಲಾಗಿದೆ ಎಂದರು.
HDK Fans: ಎಚ್.ಡಿ.ಕೆ ಆರೋಗ್ಯ ಚೇತರಿಕೆಗಾಗಿ ಅಭಿಮಾನಿಯಿಂದ ಉರುಳು ಸೇವೆ
ಮಂತ್ರಾಲಯದಲ್ಲಿ ರಾಯರ 352ನೇ ಆರಾಧನೆಗೆ ಶೇಷವಸ್ತ್ರ ಸಮರ್ಪಣೆ.. ಏನಿದರ ವಿಶೇಷ..?