Thursday, July 25, 2024

Latest Posts

ಸ್ವಲ್ಪ ದಿನದ ಮಟ್ಟಿಗೆ ಈಗ್ಲೇ ಪೆಟ್ರೋಲ್ ಹಾಕಿಸ್ಕೊಳ್ಳಿ ನಿಮ್ಮ ಸೇಫ್ಟಿಗೆ..!

- Advertisement -

ಪೆಟ್ರೋಲ್ ಡೀಸೆಲ್ ರೇಟ್ ಹೆಚ್ಚಾಗಿ ಕಂಗಾಲಾಗಿದ್ದ ಜನರಿಗೆ ಇತ್ತೀಚೆಗಷ್ಟೇ ರಿಲೀಫ್ ಸಿಕ್ಕಿತ್ತು. ಕೇಂದ್ರ ಸರ್ಕಾರ ೯.೫ ರುಪಾಯಿ ಪೆಟ್ರೋಲ್ ಬೆಲೆ ೭ ರುಪಾಯಿ ಡೀಸೆಲ್ ಬೆಲೆ ಇಳಿಸಿ ವಾಹನ ಸವಾರರಿಗೆ ಗುಡ್‌ನ್ಯೂಸ್ ನೀಡಿತ್ತು. ಈ ಗುಡ್ ನ್ಯೂಸ್ ಬಂದಿದ್ದರಿAದಲೇ ಈಗ ತಾತ್ಕಾಲಿಕವಾಗಿ ಮತ್ತೊಂದು ಶಾಕ್ ಕೊಡ್ತಿವೆ, ಪೆಟ್ರೋಲ್ ಡೀಸೆಲ್ ಬಂಕ್‌ಗಳು. ನಾಳೆ ಒಂದು ದಿನ ಮುಷ್ಕರ, ನಡೆಸಿದ್ದು ಮುಷ್ಕರದಿಂದ ಪೆಟ್ರೋಲ್, ಡೀಸೆಲ್ ಬಂಕ್‌ಗಳು ಕ್ಲೋಸ್ ಆಗೋದಿಲ್ಲ. ನಾಳೆ ನೋ ಪರ್ಚೆಸ್ ಡೇ. ಹಾಗಾಗಿ ಪೆಟ್ರೋಲ್ ಡೀಸೆಲ್ ಸಿಗಲ್ಲ ಅಂತಲ್ಲ, ಆದ್ರೆ ನಾಳೆ ಪರ್ಚೇಸ್ ಮಾಡದೇ ಇರೋದ್ರಿಂದ ಕೆಲವು ಬಂಕ್‌ಗಳಲ್ಲಿ ನಾಳೆ ಅಥವಾ ನಾಡಿದ್ದಿನಿಂದ ಸ್ಟಾಕ್ ಇಲ್ಲದೇ ತೊಂದರೆಯಾಗಬಹುದು.
ಇನ್ಫಾçಸ್ಟçಕ್ಚರ್ ಸೆಸ್ ಕಡಿಮೆ ಮಾಡಿದೆ ಸರ್ಕಾರ. ಇದು ಪ್ರತಿಯೊಬ್ಬ ಡೀಲರ್‌ಗೂ ೭-೮ ಲಕ್ಷ ಲಾಸ್ ಆಗಿದೆ. ಇದರಿಂದಾಗಿ ಡೀಲರ್ಸ್ಗಳು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸೋಕೆ ಈ ನೋ ಪರ್ಚೇಸ್ ಡೇ ಪ್ಲಾö್ಯನ್ ಮಾಡಿವೆ. ಯಾವುದಕ್ಕೂ ಒಂದೆರಡು ದಿನಕ್ಕಾಗುವಷ್ಟು ಪೆಟ್ರೋಲ್ ಡೀಸೆಲ್ ರೆಡಿಮಾಡ್ಕೊಂಡ್ರೆ ಒಳ್ಳೇದು. ಇದರಿಂದಾಗಿ ಒಂದಷ್ಟು ವಾಹನ ಸವಾರರು ಕ್ಯಾನ್‌ಗಳಲ್ಲಿ ಮತ್ತು ಫುಲ್ ಟ್ಯಾಂಕ್ ಪೆಟ್ರೋಲ್ ಡೀಸೆಲ್‌ಗೆ ಮುಗೀಬೀಳುತ್ತಿದ್ದು, ಹಲವು ಕಡೆ ನೂಕು ನುಗ್ಗಲು ಉಂಟಾಗಿದೆ.
ಹಾಗೆ ನೋಡಿದ್ರೆ ಒಂದು ದಿನದ ನೋ ಪರ್ಚೇಸ್ ಡೇ ಎಲ್ಲಾ ಬಂಕ್‌ಗಳಲ್ಲೂ ಕೊರತೆ ಉಂಟುಮಾಡದಿದ್ದರೂ ಕೆಲವು ಬಂಕ್‌ಗಳಲ್ಲಿ ಸಮಸ್ಯೆಯಾಗಬಹುದು. ಯಾವುದಕ್ಕೂ ಸೇಫ್ಟಿಗೆ ಪೆಟ್ರೋಲ್ ರೆಡಿಮಾಡ್ಕೊಳ್ಳಿ ಹಾಗಂತ ಸಿಕ್ಕಾಪಟ್ಟೆ ಟೆನ್ಶನ್ ಮಾಡ್ಕೊಂಡು ಮುಗಿಬಿದ್ದು ಕೊಂಡುಕೊಳ್ಳೋಕೆ ಹೋಗಿ ಸಮಸ್ಯೆ ಮಾಡ್ಕೋಬೇಡಿ. ಯಾಕಂದ್ರೆ ಒಂದು ಬಂಕ್‌ನಲ್ಲಿ ಸಿಗದಿದ್ದರೂ ಇನ್ನೊಂದು ಬಂಕ್‌ನಲ್ಲಿ ಸಿಗುತ್ತೆ. ಬಂದ್ ಯಾವ್ದೂ ಇಲ್ಲ, ಕೊರತೆ ಆಗಬಹುದು ಅಷ್ಟೇ.
ಓಂ. ಕರ್ನಾಟಕ ಟಿವಿ

- Advertisement -

Latest Posts

Don't Miss