National news:
ಹೆತ್ತವರಿಗೆ ಮಕ್ಕಳ ಸಾಧನೆ ಕಾಣುವುದಕ್ಕಿಂತ ಮತ್ತೊಂದು ಸಂತೋಷ ಬೇರೆಲ್ಲೂ ಇಲ್ಲ. ಅದೇ ಒಬ್ಬ ತಂದೆಗೆ ತನ್ನ ಮಗಳ ಉನ್ನತ ಸ್ಥಾನದಲ್ಲಿದ್ದಾಳೆ ಎಂಬುದನ್ನ ಕೇಳೋದೋ ಸಂತಸ. ಅಂತಹದ್ರಲ್ಲಿ ಮಗಳು ಪೈಲಟ್ ಆಗಿರುವ ವಿಮಾನಕ್ಕೆ ತಾನೇ ಪ್ರಯಾಣಿಕನಾಗಿ ಹೋಗುವುದು ಅಂದರೇ ಅದೊಂದು ಭಾವನಾತ್ಮಕ ಕ್ಷಣ. ಇಂತಹ ಭಾವನಾತ್ಮಕ ದೃಶ್ಯಗಳು ಅರೆಕ್ಷಣದಲ್ಲಿ ನಮ್ಮನ್ನು ಸೆಳೆಯುತ್ತವೆ. ಜತೆಗೆ, ಹೃದಯದಲ್ಲೂ ಖುಷಿಯ ಬುಗ್ಗೆಗಳು ಏಳುವಂತೆ ಮಾಡುತ್ತವೆ. ಇದು ಕೂಡಾ ಅಂತಹದ್ದೇ ಒಂದು ಹೃದಯಸ್ಪರ್ಶಿ ದೃಶ್ಯ. ಪೈಲಟ್ ಪುತ್ರಿಯೊಬ್ಬರು ತನ್ನ ತಂದೆಗೆ ನಮಸ್ಕರಿಸುವ, ಪುತ್ರಿಯ ಸಾಧನೆ ಕಂಡು ತಂದೆ ಭಾವುಕರಾಗುವ ಕ್ಷಣ ಇದು. pilot_krutadnya ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸಮವಸ್ತ್ರದಲ್ಲಿರುವ ಪೈಲಟ್ ಪುತ್ರಿ ತನ್ನ ತಂದೆಯ ಬಳಿ ಹೋಗುತ್ತಿರುವ ದೃಶ್ಯದಿಂದ ಆರಂಭವಾದ ವಿಡಿಯೋ ತಂದೆಯ ಪಾದಗಳನ್ನ ಸ್ಪರ್ಶಿಸಿ ಆಕೆ ಆಶೀರ್ವಾದ ಪಡೆದು ತಂದೆಯ ಬಿಗಿದು ಅಪ್ಪುಗೆ ನೀಡುತ್ತಾಳೆ. ಈ ದೃಶ್ಯ ಎಂಥವರನ್ನು ಕರಗಿಸುವ ಹೃದಯಸ್ಪರ್ಶಿ ದೃಶ್ಯವಾಗಿದೆ.
https://www.instagram.com/reel/CnHpT56qNhb/?utm_source=ig_web_button_share_sheet
ವಜ್ರ ವ್ಯಾಪಾರಿ ಮಗಳು ಐಷಾರಾಮಿ ಜೀವನ ತೊರೆದು 9ನೇ ವಯಸ್ಸಿಗೆ ಸನ್ಯಾಸಿಯಾದಳು..!