Thursday, November 30, 2023

Latest Posts

ಬಿಜೆಪಿ ಶಾಸಕನ ವಿರುದ್ಧ ಸಿಡಿದೆದ್ದ ಮೋದಿ..!

- Advertisement -

ನವದೆಹಲಿ: ಪಾಲಿಕೆ ಅಧಿಕಾರಿ ಮೇಲೆ ಕ್ರಿಕೆಟ್ ಬ್ಯಾಟ್ ನಿಂದ ಹಲ್ಲೆ ನಡೆಸಿದ್ದ ಬಿಜೆಪಿ ಶಾಸಕನ ವಿರುದ್ಧ ಪ್ರಧಾನಿ ಮೋದಿ ಸಿಡಿದೆದ್ದಿದ್ದಾರೆ. ಇಂತಹ ಕೃತ್ಯವನ್ನು ಸಹಿಸಲಾಗೋದಿಲ್ಲ. ಇಂತಹವರನ್ನು ಪಕ್ಷದಿಂದ ವಜಾಗೊಳಿಸಬೇಕು ಅಂತ ಹೇಳೋ ಮೂಲಕ ಶಾಸಕನ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶದ ಇಂದೋರ್ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಳೆಯ ಕಟ್ಟಡಗಳನ್ನು ತೆರವುಗೊಳಿಸೋ ಕಾರ್ಯಾಚರಣೆ ವೇಳೆ ಬಿಜೆಪಿ ಶಾಸಕ ಆಕಾಶ್ ವಿಜಯವರ್ಗೀಯ ಏಕಾಏಕಿ ಪಾಲಿಕೆ ಅಧಿಕಾರಿಯ ಮೇಲೆ ಕ್ರಿಕೆಟ್ ಬ್ಯಾಟ್ ನಿಂದ ಹಲ್ಲೆ ಮಾಡಿದ್ರು. ತಮ್ಮ ಸ್ನೇಹಿತನ ಕಟ್ಟಡವನ್ನು ಕೆಡವಲು ಮುಂದಾಗಿದ್ದಕ್ಕೆ ಕುಪಿತಗೊಂಡ ಶಾಸಕ ಈ ಕೃತ್ಯವೆಸಗಿದ್ರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಆಕಾಶ್ ಗೆ ಜಾಮೀನು ಕೂಡ ಸಿಕ್ಕಿದೆ. ಆದ್ರೆ ಈ ಪ್ರಕರಣವನ್ನು ಪ್ರಧಾನಿ ಮೋದಿ ಗಂಭೀರವಾಗಿ ಪರಿಗಣಿಸಿದ್ದಾರೆ.

ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಈ ಪ್ರಕರಣದ ಪ್ರಸ್ತಾಪ ಮಾಡಿದ ಪ್ರಧಾನಿ ಮೋದಿ, ಇಂಥಹ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ. ಅವರು ಎಷ್ಟೇ ದೊಡ್ಡ ನಾಯಕ ಬೇಕಾದರೂ ಆಗಿರಲಿ. ಅತ್ಯಂತ ಪ್ರಭಾವಿ ನಾಯಕರ ಮಕ್ಕಳೇ ಆಗಿರಲಿ. ಅಂತಹವರನ್ನು ಪಕ್ಷದಿಂದ ವಜಾಗೊಳಿಸಬೇಕು ಅಂತ ಗರಂ ಆಗಿದ್ದಾರೆ. ಅಲ್ಲದೆ ಈ ಕೃತ್ಯವನ್ನು ಬೆಂಬಲಿಸುವವರನ್ನೂ ಪಕ್ಷದಿಂದ ಹೊರಹಾಕಿ ಅಂತ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಧ್ಯಾನ ಮಾಡಿದ್ದ ಗುಹೆಗೆ ಭರ್ಜರಿ ಡಿಮ್ಯಾಂಡ್..! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=mqkuBKSmeK8
- Advertisement -

Latest Posts

Don't Miss