ಅರಬ್‌ ಕಂಟ್ರಿಯಲ್ಲಿ ಪ್ರಧಾನಿ ಮೋದಿ: ಬುರ್ಜ್ ಖಲೀಫಾ ಮೇಲೆ ತ್ರಿವರ್ಣ ಧ್ವಜದ ಲೈಟಿಂಗ್ಸ್

International News: ಪ್ರಧಾನಿ ನರೇಂದ್ರ ಮೋದಿ ಅಬುದಾಬಿಗೆ ಭೇಟಿ ನೀಡಿದ್ದು, ಅಲ್ಲಿನ ರಾಜ ಮೋದಿಯನ್ನು ಅಪ್ಪುಗೆ ನೀಡಿ ಸ್ವಾಗತಿಸಿದ್ದಾರೆ. ಇನ್ನು ಇದೇ ವಿಶೇಷವಾಗಿ ಪ್ರಪಂಚದ ಅದ್ಭುತಗಳಲ್ಲಿ ಒಂದಾದ ಬೂರ್ಜ ಖಲೀಫಾ ಮೇಲೆ ತ್ರಿವರ್ಣ ಧ್ವಜದ ಲೈಟಿಂಗ್ ಮಾಡಲಾಗಿದೆ.

ಇಲ್ಲಿ ಇಂದು ಹಿಂದೂಗಳ ದೇವಸ್ಥಾನದ ಉದ್ಘಾಟನೆ ನಡೆಯಲಿದ್ದು, ಪ್ರಧಾನಿ ಮೋದಿಯೇ ಈ ದೇವಸ್ಥಾನವನ್ನು ಉದ್ಘಾಟಿಸಲಿದ್ದಾರೆ. ನಿನ್ನೆ ಈ ಬಗ್ಗೆ ಮಾತನಾಡಿದ್ದ ಮೋದಿ, ಅರಬ್ ದೇಶದಲ್ಲಿರುವ ಭಾರತೀಯರನ್ನು ಕುರಿತು, ನೀವು ಹುಟ್ಟಿ ಬೆಳೆದ ದೇಶದ ಮಣ್ಣಿನ ಘಮವನ್ನು ನಾನು ನಿಮ್ಮಲ್ಲಿಗೆ ತಂದಿದ್ದೇನೆ ಎಂದಿದ್ದರು. ಅಲ್ಲದೇ, ಭಾರತದಲ್ಲಿ ಎಷ್ಟು ಭಾಷೆಗಳು ಮಾತನಾಡುತ್ತಾರೋ, ಅಷ್ಟು ಭಾಷೆಯಲ್ಲಿ ಭಾರತ ನಮ್ಮ ಹೆಮ್ಮೆ ಎಂದಿದ್ದರು.

ನಿನ್ನೆ ದುಬೈ ರಾಜ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಪ್ರಧಾನಿಯನ್ನು ಸ್ವಾಗತಿಸಿದ್ದು, ಉಭಯ ದೇಶಗಳ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಇನ್ನು ಮೋದಿ ಬರೀ ದೇವಸ್ಥಾನ ಉದ್ಘಾಟನೆಗಾಗಿ ಹೋಗದೇ, ಅಲ್ಲಿ ನಡೆಯುವ 2024ನೇ ಶೃಂಗಸಭೆಯಲ್ಲಿ ಕೂಡ ಭಾಗವಹಿಸಲಿದ್ದಾರೆ.

ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್ ಚೌಹಾಣ್ ಬಿಜೆಪಿ ಸೇರ್ಪಡೆ

ಅಯೋಧ್ಯೆ ಶ್ರೀರಾಮನ ದರ್ಶನದ ವೇಳೆ ಭಾವುಕರಾದ ಮಾಜಿ ಸಚಿವ ಸಿ.ಟಿ.ರವಿ

About The Author