ನವದೆಹಲಿ : ಪಿಎಂ ಮೋದಿ (PM Modi) ಅವರು ರಷ್ಯಾ ,ಉಕ್ರೇನ್ (Russia, Ukraine) ಆಕ್ರಮಣದ ಮಧ್ಯ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು (Indian students) ಸ್ಥಳಾಂತರ ಸಂಭಂದ ಪಟ್ಟಂತೆ ಇಂದು ಎರಡನೇ ಸಭೆಯನ್ನು ನಡೆಸಿದ್ದಾರೆ. ಉಕ್ರೇನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಸ್ಥಳಾಂತರ ಗೊಂಡಿರುವರನ್ನು ಸಂಘಟಿಸಲು ನಾಲ್ವರು ಹಿರಿಯ ಸಚಿವರು (Four are senior ministers) ಉಕ್ರೇನ್ನ ಗಡಿ ರಾಷ್ಟ್ರಗಳಿಗೆ ಕಳುಹಿಸಲಿದ್ದಾರೆ. ಉಕ್ರೇನ್ ಬಿಕ್ಕಟ್ಟುನಿಂದ ಉಕ್ರೇನ್ ತೊರೆಯಲು ಪ್ರಯತ್ನಿಸುತ್ತಿರುವ ಭಾರತೀಯರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಉನ್ನತ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಚಿವರಾದ ಹರ್ದೀಪ್ ಪುರಿ (Hardeep Puri, Minister), ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ವಿಕೆ ಸಿಂಗ್ ಅವರು ಉಕ್ರೇನ್ ಸುತ್ತಮುತ್ತಲಿನ ದೇಶಗಳಿಗೆ ಭಾರತದ ವಿಶೇಷ ರಾಯಭಾರಿಗಳಾಗಿ ಭೇಟಿ ನೀಡಿ ವಿದ್ಯಾರ್ಥಿಗಳು ಸ್ಥಳಾಂತರಕ್ಕೆ ಸಹಾಯ ಮಾಡಲಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಅವರು ರೊಮೇನಿಯಾ ಮತ್ತು ಮೊಲ್ಡೊವಾಗಳ (Romania and Moldova) ಉಸ್ತುವಾರಿ ವಹಿಸಲಿದ್ದಾರೆ, ಕಿರಣ್ ರಿಜಿಜು ಸ್ಲೋವಾಕಿಯಾಕ್ಕೆ ಉಸ್ತುವಾರಿ ವಹಿಸಲಿದ್ದಾರೆ, ಹರ್ದೀಪ್ ಪುರಿ ಹಂಗೇರಿಗೆ (Hungary) ತೆರಳಲಿದ್ದು, ವಿಕೆ ಸಿಂಗ್ ಪೋಲೆಂಡ್ನಲ್ಲಿದ್ದಾರೆ (VK Singh of Poland ) ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರವು ನಮ್ಮ ಆದ್ಯತೆಯಾಗಿದೆ ಎಂದು ಪ್ರಧಾನಿ ಹೇಳಿದರು” ಎರಡು ದಿನಗಳಲ್ಲಿ ಪಿಎಂ ಮೋದಿ ಅವರು ಕರೆದ ಎರಡನೇ ಸಭೆ ಎಂದು ಮೂಲಗಳು ತಿಳಿಸಿವೆ. ಭಾನುವಾರ ಸಂಜೆ, ಪ್ರಧಾನಿ ಅವರು ವಿದೇಶಾಂಗ ಸಚಿವ ಎಸ್ ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಮತ್ತು ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ (Rajiv Gouba, Cabinet Secretary) ಅವರನ್ನು ಭೇಟಿ ಮಾಡಿದರು.