Hubli Political News: ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಧಾರವಾಡ ಸೇರಿ ರಾಜ್ಯದ ಐದು ಕಡೆ ಪ್ರಧಾನಿ ಮೋದಿ ಬರಲಿದ್ದಾರೆ. ನಿನ್ನೆ ರಾತ್ರಿ ಮಾಹಿತಿ ಬಂದಿದೆ. ಎರಡು ದಿನದಲ್ಲಿ ಜಾಗ ಫೈನಲ್ ಮಾಡ್ತೀವಿ ಎಂದು ಹೇಳಿದ್ದಾರೆ.
ಹಿಂದೆ ಮೋದಿ ಧಾರವಾಡಕ್ಕೆ ಬಂದಾಗ ಐತಿಹಾಸಿಕ ಕಾರ್ಯಕ್ರಮ ಆಗಿವೆ. ಹಿಂದೆ ನ ಭುತೋ ನ ಭವಿಷ್ಯ ಅನ್ನೋ ತರಹ ರ್ಯಾಲಿ ಆಗಿದೆ. ಟಿಕೆಟ್ ಘೋಷಣೆ ಆದ ಬಳಿಕ ಬರ್ತಾರೆ. ನಾನು ಇವತ್ತು ದೆಹಲಿಗೆ ಹೋಗತೀದಿನಿ. ಇವತ್ತು ಚರ್ಚೆ ಬಳಿಕ ಅಂತಿಮ ತೀರ್ಮಾನವಾಗಲಿದೆ. ನಾನು ದೆಹಲಿಗೆ ಹೋದ ಬಳಿಕ ನಿಮಗೆ ಬೇಕಿದ್ರೆ ಹೇಳತೀನಿ. ನಿಮಗೆ ಬಹಳ ಕಾತುರ ಇದೆ ಅನ್ನೋದ ನನಗೆ ಗೊತ್ತಿದೆ ಎಂದು ಜೋಶಿ ಹೇಳಿದ್ದಾರೆ.
ಅನಂತಕುಮಾರ್ ಹೇಳಿಕೆಗೆ ಬಿಜೆಪಿ ಪ್ರತಿಕ್ರೀಯೆ ನೀಡಿದ ಜೋಶಿ, ಆ ಕುರಿತು ನಾನ ಮಾತಾಡಲ್ಲ. ಮೈತ್ರಿ ಇಂದ ಇಬ್ಬರಿಗೂ ಲಾಭ ಆಗತ್ತೆ. ಕೆಲವು ಕಡೆ ಜೆಡಿಎಸ್ ಸ್ಟ್ರಾಂಗ್ ಇದೆ. ಕೆಲವು ಕಡೆ ನಮ್ಮ ವೋಟ್ ಬ್ಯಾಂಕ್ ಇದೆ.
ಹೀಗಾಗಿ ನಾವು 28 ಗೆಲ್ತೀವಿ . ಜೆಡಿಎಸ್ ಗೆ ಎಷ್ಟು ಟಿಕೆಟ್ ಅನ್ನೋದು ತೀರ್ಮಾನ ಆಗತ್ತೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಮಂಡ್ಯ ಕೊಡಬೇಕೋ,ಯಾವ ಕ್ಷೇತ್ರ ಅನ್ಮೋದು ರಾಷ್ಟ್ರೀಯ ನಾಯಕರು ತೀರ್ಮಾನ ಮಾಡ್ತಾರೆ.
ಎಲ್ಲವೂ ಚರ್ಚೆಯ ಬಳಿಕವೇ ಅಂತಿಮ. ರಾಷ್ಟ್ರೀಯ ನಾಯಕರು ಇಂದು ನಮ್ಮೊಂದಿಗೆ ಚರ್ಚೆ ಮಾಡ್ತಾರೆ. ಎಲ್ಲ ಕಡೆ ಬಿಜೆಪಿ ಗೆಲ್ಲತ್ತೆ ಅಂತಿದೆ. ಕಾಂಗ್ರೆಸ್ ನಲ್ಲಿ ಅಭ್ಯರ್ಥಿ ಗಳೇ ಇಲ್ಲ. ನಮ್ಮಲ್ಲಿ ಸ್ವಲ್ಪ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿ ಇದೆ. ಯಾರೇ ಇದ್ರೂ ನಾವ ಸಂಭಂದಿಸಿದವರ ಜೊತೆ ಮಾತಾಡ್ತೀವಿ ಎಂದ ಜೋಶಿ.. ಜನ ಮೋದಿಗೆ ವೋಟ್ ಹಾಕಲು ತೀರ್ಮಾನ ಮಾಡೀದಾರೆ ಎಂದ ಜೋಶಿ. ಟಿಕೆಟ್ ಕಗ್ಗಂಟು ಇಲ್ಲ, ಅಲ್ಲಲ್ಲಿ ಗಂಟ ಇದೆ ಅದನ್ನು ಬಿಚ್ಚತೀವಿ ಎಂದು ಜೋಶಿ ಹೇಳಿದ್ದಾರೆ.
ಶೆಟ್ಟರ್ ಸರಪ್ರೈಸ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ಎಲ್ಲದಕ್ಕೂ ಏನ ಉತ್ತರ ಕೊಡೋದು..? ಎಂದು ಹೇಳಿದ್ದಾರೆ. ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪೋ ವಿಚಾರದ ಬಗ್ಗೆ ಮಾತನಾಡಿದ ಜೋಶಿ, ಆ ತರಹ ಏನಿಲ್ಲ, ಸಂಸದರ ಕೆಲಸ , ಸಂಘಟನೆ, ಪಕ್ಷ ಸಂಘಟನೆ ಎಲ್ಲವನ್ನೂ ನೋಡ್ತಾರೆ. ನಾನು ರಾಷ್ಟ್ರೀಯ ನಾಯಕ ಅಲ್ಲ,ನಾನು ಸಾಮಾನ್ಯ ಕಾರ್ಯಕರ್ತ ಎಂದು ಜೋಶಿ ಹೇಳಿದ್ದಾರೆ.
ಮುಸ್ಲಿಮರ ಬಗ್ಗೆ ಆ ಪೊಲೀಸರಿಗೆ ಎಷ್ಟು ದ್ವೇಷವಿದೆ ಅನ್ನೋದು ಇದರಲ್ಲೇ ಗೊತ್ತಾಗುತ್ತದೆ: ಓವೈಸಿ
ಮಂಡ್ಯದಲ್ಲಿ ಮುಂದಿನ ವರ್ಷದ ಬಜೆಟ್ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ