Wednesday, January 22, 2025

Latest Posts

Pakistan ; ಪಾಕ್​ಗೆ ಕುಕ್ಕಿದ ‘ಉಗ್ರ’ ಗಿಣಿ :ಮಾಡಿದ್ದುಣ್ಣೋ ಮಾರಾಯ

- Advertisement -

ಅದೇನೋ ಹೇಳ್ತಾರಲ್ಲ.. ಮಾಡಿದುಣ್ಣೋ ಮಾರಾಯ ಅಂತ.. ಪ್ರಸ್ತುತ ನೆರೆಯ ಶತ್ರುರಾಷ್ಟ್ರದ ಪರಿಸ್ಥಿತಿಯನ್ನ ನೋಡ್ತಾ ಇದ್ರೆ ಈ ಗಾದೆ ಮಾತು ಬಹುಶಃ ಪಾಕಿಸ್ತಾನವನ್ನ ನೋಡೇ ಹೇಳಿರಬೇಕು ಅನ್ನಿಸ್ತಿದೆ.. ಭಯೋತ್ಪಾದನೆ ಅನ್ನೋ ಮುಳ್ಳಿನ ಗಿಡಕ್ಕೆ ಆರಂಭದಿಂದಲೂ ನೀರೆರೆದು ಪೋಷಿಸಿಕೊಂಡು ಬಂದಿರೋ ಪಾಕಿಸ್ತಾನಕ್ಕೆ ಇದೀಗ ಅದೇ ಉಗ್ರವಾದ ಅನ್ನೋ ಮುಳ್ಳಿನ ಗಿಡ ಮಗ್ಗುಲ ಮುಳ್ಳಾಗಿ ಚುಚ್ಚೋಕೆ ಶುರು ಮಾಡಿದೆ..

ನಮ್ಮದು ಭಯೋತ್ಪಾದನಾ ವಿರೋಧಿ ದೇಶ ಅಂತ ಪಾಕಿಸ್ತಾನವೆನೋ ಲಬಲಬೋ ಅಂತ ಬಾಯಿ ಬಡಿದುಕೊಳ್ತಾ ಇದೆ.. ಆದ್ರೆ, ಅದೇ ಪಾಕಿಸ್ತಾನ ಟೆರರಿಸಂನ ಫ್ಯಾಕ್ಟರಿ ಅನ್ನೋ ಸತ್ಯ ಆಡೋ ಮಕ್ಕಳಿಂದ ಹಿಡಿದು ಹಣ್ ಹಣ್ ಮುದುಕರವರೆಗೆ ಎಲ್ರಿಗೂ ಗೊತ್ತಿರೋ ಕಟು ಸತ್ಯ.. ನಾವು ಈ ಸಮಾಜಕ್ಕೆ ಏನ್ ಕೊಡ್ತಿವೋ ಅದೇ ನಮ್ಗೆ ವಾಪಸ್ ಸಿಗುತ್ತೆ ಅನ್ನೋ ಮಾತು ಹಂಡ್ರೆಂಡ್ ಪರ್ಸೆಂಟ್ ನಿಜ.. ಒಂದು ಕಾಲದಲ್ಲಿ ಭಯೋತ್ಪಾದನೆಯನ್ನ ಸಾಕಿ ಸಲುಹಿ ಪೋಷಿಸಿಕೊಂಡೇ ಬಂದ ನೆರೆಯ ಬಿಕಾರಿ ದೇಶ ಪಾಕಿಸ್ತಾನಕ್ಕೆ ಇದೀಗ ಅದೇ ಉಗ್ರವಾದ ಕಂಟಕವಾಗಿ ಕಾಡೋಕೆ ಶುರುವಾಗಿದೆ..

ಕಳೆದ ಕೆಲ ವರ್ಷಗಳಿಂದ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಅನ್ನೋ ರಣರಕ್ಕಸನ ಅಟ್ಟಹಾಸ ಮಿತಿ ಮೀರಿದ್ದು, ಯಾವಾಗ ಎಲ್ಲಿ ಬಾಂಬ್ ಬ್ಲಾಸ್ಟ್​ ಆಗುತ್ತೋ ಅನ್ನೋ ಭಯದಲ್ಲೇ ಅಲ್ಲಿನ ಜನ ದಿನ ದೂಡ್ತಿದ್ದಾರೆ.. ಪಾಕಿಸ್ತಾನದ ಇವತ್ತಿನ ಈ ದುಸ್ಥಿತಿಗೆ ಆ ದೇಶದ ರಾಜಕಾರಣಿಗಳು, ಸಮಾಜಘಾತುಕ ಶಕ್ತಿಗಳೇ ಕಾರಣ.. ವರದಿಯೊಂದರ ಪ್ರಕಾರ ಕಳೆದ 3 ತಿಂಗಳಿನಿಂದ ನೈರುತ್ಯ ಪಾಕಿಸ್ತಾನದಲ್ಲಿ ಪ್ರತ್ಯೇಕವಾದಿಗಳ ಹಾವಳಿ ಇನ್ನಿಲ್ಲದಂತೆ ಹೆಚ್ಚಾಗಿದೆ.. ನಿನ್ನೆ ಒಂದೇ ದಿನ ಬಲೂಚಿಸ್ತಾನದಲ್ಲಿ ನಡೆದ ಪ್ರತ್ಯೇಕ ಉಗ್ರರ ದಾಳಿಯಲ್ಲಿ ಅಪಾರ ಪ್ರಮಾಣದಲ್ಲಿ ಸಾವು-ನೋವು ಸಂಭವಿಸಿವೆ.. ಕಂಡ ಕಂಡಲ್ಲಿ ಗುಂಡಿನ ಸುರಿಮಳೆಯನ್ನ ಸುರಿಸ್ತಾ ಇರೋ ನಿಷೇಧಿತ ಬಲೂಚಿಸ್ತಾನ ಲಿಬರೇಟನ್​ ಆರ್ಮಿಗೆ ಸೇರಿದ ಭಯೋತ್ಪಾದಕರು ನೂರಕ್ಕೂ ಹೆಚ್ಚು ಜನರನ್ನ ಬಲಿ ತೆಗೆದುಕೊಂಡಿದ್ದಾರೆ..

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಜನರನ್ನೇ ಹೆಚ್ಚಾಗಿ ಗುರಿಯಾಗಿಸಿಕೊಳ್ತಾ ಇರೋ ಉಗ್ರವಾದಿಗಳು ರಕ್ತದ ಕೊಡಿಯನ್ನೇ ಹರಿಸ್ತಿದ್ದಾರೆ.. ಬಲೂಚಿಸ್ತಾನದಲ್ಲಿ ಪೊಲೀಸ್​ ಸ್ಟೇಷನ್, ರೈಲ್ವೇ ಸ್ಟೇಷನ್​, ಹೆದ್ದಾರಿಗಳು ಹೀಗೆ ಎಲ್ಲಿ ನೋಡಿದ್ರಲ್ಲಿ ಬಲೂಚಿಸ್ತಾನ ಲಿಬರೇಷನ್ ಆರ್ಮಿಯ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸ್ತಿದ್ದಾರೆ.. ಬಲೂಚಿಸ್ತಾನದ ರಾರಶಮ್ ಜಿಲ್ಲೆಯ ಹಲವು ಹೈವೇಗಳಲ್ಲಿ ಗುರುತಿನ ಚೀಟಿ ತಪಾಸಣೆ ನೆಪದಲ್ಲಿ ವಾಹನಗಳನ್ನ ಅಡ್ಡಗಟ್ಟುತ್ತಿರೋ ರಕ್ತಪಿಪಾಸುಗಳು ಮನಸೋಇಚ್ಛೆ ಗುಂಡಿನ ದಾಳಿ ನಡೆಸಿ ಅಟ್ಟಹಾಸ ಮೆರೆಯುತ್ತಿದ್ದಾರೆ.. ಪ್ರತ್ಯೇಕವಾದಿಗಳ ನೆತ್ತರ ದಾಹಕ್ಕೆ ಪಂಜಾಬ್​ ಪ್ರಾಂತ್ಯಕ್ಕೆ ಸೇರಿದ 30ಕ್ಕೂ ಹೆಚ್ಚು ಪ್ರಾಣ ಕಳ್ಕೊಂಡಿದ್ದಾರೆ..

ಪಾಕಿಸ್ತಾನದ ಕೆಲ ಪ್ರದೇಶಗಳಂತೂ ಸದ್ಯ ಪರಿಸ್ಥಿತಿ ಹೇಗಿದೆ ಅಂದ್ರೆ ಬೆಳಗ್ಗಿನ ಸಮಯದಲ್ಲೇ ಮನೆಯಿಂದ ಆಚೆ ಬರೋಕೂ ಜನ ಎದುರುವಂತಹ ಸ್ಥಿತಿ ನಿರ್ಮಾಣವಾಗಿದೆ.. ಉಗ್ರರ ಅಟ್ಟಹಾಸದಿಮದ ಪತರುಗುಟ್ಟಿ ಹೋಗಿರೋ ಪಾಕಿಸ್ತಾನ ಸರ್ಕಾರ ಪೊಲೀಸ್​ ಠಾಣೆ, ರೈಲ್ವೇ ಸ್ಟೇಷನ್​ ಹೀಗೆ ಜನ ಗುಂಪು ಗುಂಪಾಗಿ ಸೇರೋ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಿದೆ.. ಆದ್ರೆ, ಅದೇ ಪೊಲೀಸ್​ ಸ್ಟೇಷನ್, ರೈಲ್ವೆ ನಿಲ್ದಾಣಗಳ ಮೇಲೆ ದಾಳಿ ನಡೆಸ್ತಾ ಇರೋ ನರರೂಪ ರಾಕ್ಷಸರ ರಕ್ತದಾಹಕ್ಕೆ 50ಕ್ಕೂ ಹೆಚ್ಚು ಭದ್ರತಾ ಪಡೆಗಳ ಸಿಬ್ಬಂದಿ ಬಲಿಯಾಗಿದ್ದಾರೆ.. ಉಗ್ರರ ಗುಂಡಿನ ದಾಳಿಯಲ್ಲಿ ಹತ್ತಾರು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ..

- Advertisement -

Latest Posts

Don't Miss