Uttar Pradesh : ಜೀವಂತ ಹಾವನ್ನೇ ಕಚ್ಚಿ ತಿಂದ! ;ಭಯಾನಕ ಕೃತ್ಯ.. ಬೆಚ್ಚಿಬಿದ್ದ ಜನರು!

ಹಾವು ಎಂದರೆ ಸಾವು ಜನರು ಮಾರುದ್ದ ಓಡ್ತಾರೆ.. ಅಂತಹದ್ರಲ್ಲಿ ಇಲ್ಲೊಬ್ಬ ವ್ಯಕ್ತಿ ಜೀವಂತ ಹಾವನ್ನೇ ಕಚ್ಚಿಕಚ್ಚಿ ತಂದಿದ್ದಾರೆ..

ಹೌದು …ಈ ಸಂಗತಿ ನಿಜಕ್ಕೂ ಅಚ್ಚರಿ ಎನ್ನಿಸಿದ್ರೂ ಸತ್ಯ. ನದಿಯಲ್ಲಿ ಜೀವಂತ ಹಾವನ್ನು ಹಿಡಿದು ಡಕಾಯಿತನೊಬ್ಬ ತಿಂದಿರುವ ಘಟನೆ ಉತ್ತರ ಪ್ರದೇಶದ ಫತೇಪುರದ ಕಿಶನ್‍ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಕಾ ಕ್ಯಾಂಪ್ ಬಳಿ ನಡೆದಿದೆ. ವಿಚಿತ್ರ ಮತ್ತು ವಿಲಕ್ಷಣ ಎಂದು ಕರೆಯಬಹುದಾದ ಘಟನೆ ಇದಾಗಿದೆ.
ಹಾವನ್ನು ತಿಂದ ವ್ಯಕ್ತಿಯನ್ನು ಡಕಾಯಿತ ಗಂಗಾ ಪ್ರಸಾದ್ ಅಲಿಯಾಸ್ ಫೌಜಿ (55) ಎಂದು ಗುರುತಿಸಲಾಗಿದೆ. ಇವನು ಒಂದು ಟೈಮ್‍ನಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದ ಶಂಕರ್ ಗ್ಯಾಂಗ್‍ಗೆ ಸೇರಿಕೊಂಡಿದ್ದವನು ಎಂದು ಹೇಳಲಾಗುತ್ತಿದೆ.

ಈ ಗ್ಯಾಂಗ್ ಜನರನ್ನು ಬೆದರಿಕೆ ಹಾಕಿ ಲೂಟಿ ಮಾಡುವ ಕೃತ್ಯಗಳಿಗೆ ಕುಖ್ಯಾತವಾಗಿತ್ತು. ಶಂಕರ್ ಗ್ಯಾಂಗ್ ಎಂದರೆ ಜನರಿಗೆ ಫುಲ್ ಭಯವಿತ್ತು. ಸದ್ಯ ಈ ಗ್ಯಾಂಗ್ ಅನ್ನು ಬಿಟ್ಟು ಬಂಡಾ ಜಿಲ್ಲೆಯ ಕಮಾಸಿನ್‍ನ ಕಾಗರ್ ಗ್ರಾಮದ ತನ್ನ ಸಂಬಂಧಿಕರ ಮನೆಯಲ್ಲಿ ಈತ ವಾಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಗಂಗಾ ಪ್ರಸಾದ್ ಒಬ್ಬ ಭಯಂಕರ ಡಕಾಯಿತ. ಈತ ಜೈಲಿನಲ್ಲಿ ಹಲವು ವರ್ಷಗಳ ಕಲ ಇದ್ದ ಎನ್ನಲಾಗಿದೆ. ಇನ್ನು ವೈರಲ್ ಆದ ವೀಡಿಯೊದಲ್ಲಿ, ನದಿಯಿಂದ ಹಾವನ್ನು ಹಿಡಿದುಕೊಂಡು ಬರೋ ಕಿರಾತಕ ಅದರ ತಲೆಯನ್ನು ಬಾಯಿಯಿಂದ ಕಚ್ಚಿ ಹಾಗೇ ತಿನ್ನುತ್ತಾನೆ. ಈ ಎಲ್ಲ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರು ವಿಡಿಯೋದಲ್ಲಿ ಸೆರೆಯಾಗಿವೆ. ಇದಕ್ಕೆ ಸಾಕಷ್ಟು ಜನರು ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ

About The Author