Monday, July 22, 2024

Latest Posts

Horoscope: ಸಿಕ್ಸ್ತ್ ಸೆನ್ಸ್ ಅತ್ಯುತ್ತಮವಾಗಿ ಇರುವ ರಾಶಿಯವರು ಇವರು

- Advertisement -

Horoscope: ನಾವು ಆದಾಗಲೇ ನಿಮಗೆ ಕೆಲವು ರಾಶಿಗಳ ಗುಣಗಳ ಬಗ್ಗೆ ವಿವರಣೆ ನೀಡಿದ್ದೇವೆ. ಯಾವಾಗಲೂ ಖುಷಿಯಾಗಿರುವವರು, ಸಿಟ್ಟಾಗುವವರು, ನಾಚಿಕೆ ಸ್ವಭಾವದವರು, ಆತ್ಮ ವಿಶ್ವಾಸ ಕಡಿಮೆ ಇರುವವರು, ಹೀಗೆ ಹಲವು ರಾಶಿಯವರ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಇಂದು ನಾವು, ಯಾವ ರಾಶಿಯವರ ಸಿಕ್ಸ್ತ್ ಸೆನ್ಸ್ ಅತ್ಯುತ್ತಮವಾಗಿರುತ್ತದೆ ಅಂತಾ ಹೇಳಲಿದ್ದೇವೆ.

ಕಟಕ ರಾಶಿ: ಕಟಕ ರಾಶಿಯವರು ಆದಷ್ಟು ಸ್ವಾಭಿಮಾನಿಯಾಗಿರಲು ಇಚ್ಛಿಸುತ್ತಾರೆ. ಏಕೆಂದರೆ, ಅವರಿಗೆ ಎದುರಿನವರು ಯಾರೇ ಆಗಿದ್ದರೂ, ಅವರ ಬಳಿ ಸಹಾಯ ಕೇಳಲು ಇಷ್ಟವಿರುವುದಿಲ್ಲ. ಅಪ್ಪ ಅಮ್ಮ ಬಿಟ್ಟರೆ, ಸಹೋದರರ ಬಳಿಯೂ ಅವರು ಪುಕ್ಕಟೆಯಾಗಿ ಸಹಾಯ ತೆಗೆದುಕೊಳ್ಳುವುದಿಲ್ಲ. ಏಕೆಂದರೆ, ಅವರಿಗೆ ಎದುರಿನವರ ಮನಸ್ಥಿತಿ ಗೊತ್ತಿರುತ್ತದೆ. ಒಂದಲ್ಲ ಒಂದು ದಿನ, ಮುಂದೆ ಇರುವವರು ತಾವು ಮಾಡಿದ ಸಹಾಯದ ಬಗ್ಗೆ ಹೀಯಾಳಿಸುತ್ತಾರೆಂದು. ಇದು ಬರೀ ಉದಾಹರಣೆ ಮಾತ್ರ. ಆದರೆ ಕಟಕ ರಾಶಿಯವರಿಗೆ ಎದುರಿನವರು ಮಾತನಾಡಿದಾಗಲೇ, ಎಲ್ಲ ರೀತಿಯ ಜನರ ಮನಸ್ಥಿತಿ, ಅರಿವಾಗುತ್ತದೆ. ಅಲ್ಲದೇ, ಈ ಕೆಲಸ ಮಾಡಿದರೆ, ಭವಿಷ್ಯದಲ್ಲಿ ಇದೇ ರೀತಿಯಾಗಬಹುದು ಎಂದು ಅವರಿಗೆ ಗೊತ್ತಾಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಬುದ್ಧಿವಂತರು. ಅವರೇ ಖುದ್ದಾಗಿ ನೋಡಲು, ಜೀವನದಲ್ಲಿ ಏನೋ ಗೊಂದಲದಲ್ಲಿ ಇರುವಂತೆ ಕಾಣುತ್ತಾರೆ. ಆದರೆ ಎದುರಿನವರು ನಡೆದುಕೊಳ್ಳುವ ರೀತಿಯಿಂದಲೇ, ಅವರು ಎಂಥಥವರು ಎಂಬುದನ್ನು ಗುರುತು ಹಿಡಿಯುತ್ತಾರೆ. ಅಲ್ಲದೇ, ಯಾವ ಕೆಲಸ ಮಾಡಿದರೆ, ಏನು ಫಲಿತಾಂಶ ಬರುತ್ತದೆ ಎಂಬ ಬಗ್ಗೆ ಅವರಿಗೆ ಗೊತ್ತಿರುತ್ತದೆ.

ಮೀನ ರಾಶಿ: ಮೀನ ರಾಶಿಯವರು ಭಾವುಕ ಸ್ವಭಾವದವರು. ಹಾಗಾಗಿ ಇನ್ನೊಬ್ಬರ ಭಾವನೆಯನ್ನು ಅರಿಯುವುದು ಇವರಿಗೆ ಸುಲಭದ ಕೆಲಸ. ಮುಂದೇನಾಗಬಹುದು ಎಂದು ಅರಿತು ಇವರು ಕೆಲಸ ಮಾಡುತ್ತಾರೆ. ಹಾಗಾಗಿ ಇವರು ಎಡವಟ್ಟು ಮಾಡುವುದು ಕಡಿಮೆ.

- Advertisement -

Latest Posts

Don't Miss