Monday, July 22, 2024

Latest Posts

32 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಸಾರಾಯಿ ವಶಕ್ಕೆ ಪಡೆದ ಪೊಲೀಸರು

- Advertisement -

Dharwad News: ಧಾರವಾಡ : ಕಲಘಟಗಿ ಪೊಲೀಸರ ಮಿಂಚಿನ ಕಾರ್ಯಚರಣೆ ನಡೆಸಿ, ಪ್ರತಿಷ್ಠಿತ ಕಂಪನಿಯ ಮದ್ಯದ ಡುಪ್ಲಿಕೇಟ್ ಕ್ಯಾಪ್ & ಶೀಲ್ ಮಾಡಿ ಅದಕ್ಕೆ ಡುಪ್ಲಿಕೇಟ್ ಇಂಪಿರಿಯಲ್ ಬ್ಲೂ ಕಂಪನಿಯ ಲೇಬಲಗಳು ಅಂಟಿಸಿ, ಅತೀ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ತಯಾರಿಸುತ್ತಿದ್ದಾಗ, 4 ಜನರನ್ನು ಬಂಧಿಸಿ ಬಂಧಿತರಿಂದ 32,00,000 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಸರಾಯಿ ಹಾಗೂ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಧಾರವಾಡ ಜಿಲ್ಲಾಎಸಪಿ ಗೋಪಾಲ ಬ್ಯಾಕೋಡ್, ಡಿಎಸಪಿಗಳಾದ ನಾರಾಯಣ ಬರಮನಿ ಹಾಗೂ ಎಸ್.ಎಮ್
ನಾಗರಾಜ ಮಾರ್ಗದರ್ಶನದಲ್ಲಿ ಕಲಘಟಗಿ ಪೊಲೀಸ್ ಠಾಣೆಯ ಸಿಪಿಐ ಶ್ರೀಶೈಲ್ ಕೌಜಲಗಿ ಹಾಗೂ ಅವರ ತಂಡ ಜುಲೈ 9 ರಂದು ಕಾರ್ಯಾಚರಣೆ ಮಾಡಿ ಆರೋಪಿಗಳ ಬಂಧಿಸಿದ್ದಾರೆ.

ಮಿಶ್ರಿಕೋಟಿ ಕ್ರಾಸ ಹತ್ತಿರ, ಪಾಟೀಲರವರ ಗೋಡೌನ್ ನಲ್ಲಿ ಎಡ್ರಿಯಲ್ ಕಂಪನಿಯ ವಿಸ್ಕಿ, ಓಡ್ತಾ ಬಾಕ್ಸಗಳನ್ನು ತಂದು ಯಾವುದೇ ಪರ್ಮಿಟ್ ಇಲ್ಲದೇ ಗೋಡೌನ್ ನಲ್ಲಿ ಬಾಟಲಿಯಿಂದ ಸರಾಯಿ ತೆಗೆದು ಅದಕ್ಕೆ ಅಮಲು ಬರುವ ಕರ್ನಾಟಕದ ಇಂಪಿರಿಯಲ್ ಬ್ಲೂ ಪ್ರದಾರ್ಥಗಳನ್ನು ಬಳಸಿಕೊಂಡು ಎಸೆನ್ಸ್ ದ್ರವ್ಯ ಹಾಗೂ ಬಣ್ಣಮಿಶ್ರಣ ಮಾಡಿ ಕಂಪನಿಯ ಸರಾಯಿ ಖಾಲಿ ಬಾಟಲಿಗಳಲ್ಲಿ ತುಂಬುವ ಕೆಲಸ ಮಾಡಿಕೊಂಡು ಬಂದಿದ್ದರು. ಕಾರ್ಯಾಚರಣೆ ಮಾಡಿ 4 ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ 183/2024 ಕರ್ನಾಟಕ ಅಬಕಾರಿ ಕಾಯ್ದೆ & ಹೋಸ ಬಿ.ಎನ್.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖಾ ಕಾರ್ಯ ಮುಂದುವರೆಸಿದ್ದಾರೆ.

ಅಕ್ರಮ ಸರಾಯಿ ತಯಾರಿಸುತ್ತಿದ್ದದಂಧೆಯನ್ನು ಬಂಧಿಸಿದ ಪೊಲೀಸರು ತಂಡದಲ್ಲಿ ಕಲಘಟಗಿ ಇನ್ಸಪೇಕ್ಟರ್, ಶ್ರಿಶೈಲ್ ಕೌಜಲಗಿ, ಪಿಎಸ್‌ಐ ಬಸವರಾಜ ಯದ್ಧಲಗುಡ್ಡ, ಆರ್.ಎಮ್ ಸಂಕಿನದಾಸರ ಹಾಗೂ ಸಿಬ್ಬಂದಿ ಜನರಾದ ಲೊಕೇಶ ಬೆಂಡಿಕಾಯಿ, ಶಂಕರ ಕಟ್ಟಿಮನಿ, ಸಿದ್ದು ಹೊಸಳ್ಳಿ, ಗಣೇಶ ಕಾಂಬ್ಳೆ, ಗೋಪಾಲ ಪಿರಗಿ, ಶ್ರೀಧರ ಗುಗ್ಗರಿ, ಮಹಾಂತೇಶ ನಾನಾಗೌಡ, ಶಿವಶರಣ ಕಚನೂರ, ಪ್ರವೀಣ ಅಂಗಡಿ, ಅಭಿನಂದನ ಮಾದಪ್ಪನವರ, ಮಹಮ್ಮದ ಹುಸೇನ, ಸಂಜು ಜಾಲಗಾರ, ಈಶ್ವರ ಡೊಣ್ಣಿ, ಮಹೇಶ ಧರೆಪ್ಪನವರ ರವರ ಕರ್ತವ್ಯನಿಷ್ಠೆಯನ್ನು ಪ್ರಶಂಶಿಸಿ, ಎಸಪಿ ಧಾರವಾಡದ ಇವರು, ವಿಶೇಷ ತಂಡಕ್ಕೆ ಸೂಕ್ತ ಬಹುಮಾನ ಘೋಷಿಸಿರುತ್ತಾರೆ.

- Advertisement -

Latest Posts

Don't Miss