ಪೊಲೀಸ್ ವ್ಯವಸ್ಥೆ ಕುಸಿದಿದೆ, ರಾಜ್ಯ ಈಗ ಸಂಪೂರ್ಣ ಗೂಂಡಾ ರಾಜ್ಯವಾಗಿದೆ: ಮಾಜಿ ಸಿಎಂ ಶೆಟ್ಟರ್ ಕಿಡಿ

Hubli News: ಹುಬ್ಬಳ್ಳಿ: ಕರ್ನಾಟಕ ರಾಜ್ಯ ಈಗ ಸಂಪೂರ್ಣ ಗೂಂಡಾ ರಾಜ್ಯವಾಗಿದೆ. ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಪೊಲೀಸ್ ವ್ಯವಸ್ಥೆ ಕುಸಿದಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಸಮಾಧಾನ ಹೊರಹಾಕಿದರು.

ಅಂಜಲಿ ಅಂಬಿಗೇರ ನಿವಾಸದ ಬಳಿಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಇತ್ತೀಚಿಗೆ ನೇಹಾ ಹಿರೇಮಠ ಕೊಲೆಯಾದಾಗ ರಾಜ್ಯ ತಲ್ಲಣಗೊಂಡಿತ್ತು. ಕಾಲೇಜ್ ಕ್ಯಾಂಪಸ್ ‌ನಲ್ಲಿ‌ ಕೊಲೆಯಾಗಿದೆ. ಕಾನೂನು ಸುವ್ಯವಸ್ಥೆ ಇಲ್ಲ ಅನ್ನೋ ಚರ್ಚೆ ನಡೆದಿತ್ತು. ಸರ್ಕಾರ ಇದನ್ನು ಗಂಭಿರವಾಗಿ ತಗೆದುಕೊಳ್ಳಬೇಕಿತ್ತು. ಕೊಲೆ ಸುಲಿಗೆ ದರೋಡೆ ನಡೀತಿದೆ. ಇದನ್ನು ಸರ್ಕಾರ ಕಂಟ್ರೋಲ್ ಮಾಡೋಕೆ ಆಗತಿಲ್ಲ.‌ ಸಚಿವರು ನೇಹಾ ಹತ್ಯೆಯಾದಾಗ ಬೇಜಾವ್ದಾರಿಯಾಗಿ ಮಾತನಾಡಿದ್ದರು. ಆದರೇ ಈಗ ಅಂಜಲಿ ಮರ್ಡರ್ ಕೇಸ್ ಆಗಿದೆ ಎಂದರು.

ನಾನು ಅವರ ಅಮ್ಮನ ಜೊತೆ ಮಾತಾಡಿದೆ, ಮೊದಲೆ ಅವರಿಗೆ ಥ್ರಟ್ ಇತ್ತು. ಅವರ ಅಮ್ಮ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ರು. ಪೊಲೀಸರು ಕುಚೇಷ್ಠೆ ಮಾಡಿ ಕಳಸಿದ್ರು. ಸರ್ಕಾರದ ವ್ಯವಸ್ಥೆ ಕುಸಿದು ಹೋಗಿದೆ. ಹುಬ್ಬಳ್ಳಿ ಧಾರವಾಡದಲ್ಲಿ ಸಂಪೂರ್ಣವಾಗಿ ಕುಸಿದು ಹೋಗಿದೆ. ವ್ಯವಧಾನದಿಂದ ಹೇಳೋ ಮಾತೆ ಇಲ್ಲ. ಇವತ್ತು ಕರ್ನಾಟಕ ಗುಂಡಾ ರಾಜ್ಯ ಆಗಿದೆ. ಜನರ ನೆಮ್ಮದಿ ಕೆಡಿಸೋ ಕೆಲಸ ಸರ್ಕಾರ ಮಾಡಿದೆ. ಗಿರೀಶ್ ಇವತ್ತು ಅರೆಸ್ಟ್ ಆಗಿದಾನೆ,ಆದ್ರೆ ಕುಟುಂಬಕ್ಕೆ ನ್ಯಾಯ ಸಿಗಬೇಕು. ಅಂಜಲಿ ಆತ್ಮಕ್ಕೆ ಶಾಂತಿ ಸಿಗಬೇಕು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಸಿಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರವಾಸಿಯ ಕಳೆದುಹೋಗಿದ್ದ ವಾಚ್ ಹಿಂದಿರುಗಿಸಿದ ಭಾರತೀಯ ಹುಡುಗ: ದುಬೈ ಪೊಲೀಸರಿಂದ ಸನ್ಮಾನ

ವಿಶ್ವಕಪ್‌ನಲ್ಲಿ ರಾರಾಜಿಸಲಿದೆ ನಂದಿನಿ, ಕಂಗೊಳಿಸಲಿದೆ ಕನ್ನಡ

ಕೊ* ಪ್ರಕರಣಗಳಲ್ಲಿ ಸರ್ಕಾರದ ಲೋಪ ಹೆಚ್ಚಾಗಿ ಕಾಣುತ್ತಿದೆ: ಶಾಸಕ ಟೆಂಗಿನಕಾಯಿ

About The Author