Thursday, December 26, 2024

Latest Posts

ಕಾಂಗ್ರೆಸ್ ಸೇರಲಿದ್ದಾರಾ ? ಯಡಿಯೂರಪ್ಪ ಸಂಬಂಧಿ

- Advertisement -

ಹುಬ್ಬಳ್ಳಿ:ಬಿಜೆಪಿಯ ಮಾಜಿ ಶಾಸಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸಂಭಂದಿಯಾಗಿರುವ ಕುಂದಗೋಳದ  ಮಾಜಿ ಶಾಸಕ ಎಸ್ ಐ ಚಿಕ್ಕನಗೌಡರು ಅತೀ ಶೀರ್ಘದಲ್ಲೆ ಕಾಂಗ್ರೆಸ್ ಗೆ ಸೇರಲಿದ್ದಾರೆ  ರಾಜ್ಯ ರಾಜಕಾರಣದ ಬೆಳವಣಿಗೆಗೆ ಪುಷ್ಟಿ ನೀಡಲಿದೆ.

ಹೌದು…ಶಿಘ್ರದಲ್ಲಿಯೇ ಯಡಿಯೂರಪ್ಪ ಸಂಬಂದಿ ಎಸ್.ಐ.ಚಿಕ್ಕನಗೌಡರ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ. ಚಿಕ್ಕನಗೌಡರ ಕುಂದಗೋಳ ಮಾಜಿ ಶಾಸಕರಾಗಿದ್ದು, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳದಿದ್ದ ಚಿಕ್ಕನಗೌಡರ ಪರಾಜಿತರಾಗಿದ್ದರು. ಬಿಜೆಪಿ‌ ಟಿಕೆಟ್ ಸಿಗದೆ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದ ಚಿಕ್ಕನಗೌಡರ ಈಗ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಲೋಕಸಭಾ ಚುನಾವಣಾ ದೃಷ್ಟಿಯಿಂದ ಕಾಂಗ್ರೆಸ್ ಸೇರಲಿರುವ ಚಿಕ್ಕನಗೌಡರ, ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎಂಬುವಂತ ಮಾಹಿತಿ ಲಭ್ಯವಾಗಿದ್ದು, ಲೋಕಸಭೆ ಚುನಾವಣೆ ಹಿನ್ನಲೆ ಸದ್ದಿಲ್ಲದೆ ಆಪರೇಶನ್ ಆರಂಭಿಸಿರುವ ಜಗದೀಶ್ ಶೆಟ್ಟರ್, ಬಿಜೆಪಿ ಪ್ರಮುಖ ನಾಯಕರನ್ನು ಕಾಂಗ್ರೆಸ್ ನತ್ತ ಸೆಳೆಯುತ್ತಿದ್ದಾರೆ. ಶೆಟ್ಟರ್ ಜೊತೆ ಒಂದು ಸುತ್ತಿನ ಮಾತುಕತೆ ಮಾಡಿರುವ ಚಿಕ್ಕನಗೌಡರ, ನಿನ್ನೆ ತಮ್ಮ ನಿವಾಸದಲ್ಲಿ ಆಪ್ತರ ಸಭೆ ಕರೆದಿದ್ದ ಸಭೆಯಲ್ಲಿ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ.

ನಾನು ಇಲ್ಲೆ ಪಕ್ಷಕ್ಕೆ ಸೇರಿ ಅಂದರೆ ಸೇರತೀನಿ. ಇಲ್ಲ ಬೆಂಗಳೂರು ಗೆ ಬಂದು ಪಕ್ಷಕ್ಕೆ ಸೇರಿ ಅಂದರೆ ನಾನು ನಿಮಗೆಲ್ಲ ತಿಳಿಸುತ್ತೇನೆ ಎಂದು ಚಿಕ್ಕನಗೌಡರ ಹೇಳಿದ್ದಾರೆ. ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಆಪ್ತರನ್ನು ಕೇಳಿದ ಚಿಕ್ಕನಗೌಡರಿಗೆ ಆಪ್ತರೆಲ್ಲ ಕಾಂಗ್ರೆಸ್ ಸೇರಿ ಎಂದು ಸಲಹೆ ನೀಡಿದ್ದಾರೆ. ಅಧಿವೇಶನ ಮುಗಿಯೋ ಒಳಗಡೆ ಕಾಂಗ್ರೆಸ್ ಸೇರೋಣ ಎಂದು ಆಪ್ತರು ಸಲಹೆ ನೀಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

“ಡೈಮಂಡ್ ಕ್ರಾಸ್ “.. ರಾಮ್ ದೀಪ್ ನಿದೇರ್ಶನದ ಸಿನಿಮಾ

ಮುಖ್ಯಮಂತ್ರಿಗಳೆ ಕ್ಷಮೆ ಕೇಳಿ ಪಾದ ತೊಳೆದರು

ಸರಕಾರ ಕೇವಲ ಮೂರೇ ತಿಂಗಳು..?! ಭವಿಷ್ಯ ನುಡಿದವರಾರು..?!

- Advertisement -

Latest Posts

Don't Miss