Sunday, April 27, 2025

Latest Posts

ಟ್ರೋಫಿ ಗೆದ್ದ WPL ಚಾಂಪಿಯನ್ಸ್‌ಗೆ ವಿಶ್ ಮಾಡಿದ ರಾಜಕೀಯ ಗಣ್ಯರು..

- Advertisement -

Political News: ಮೊದಲ ಬಾರಿ ಎರಡನೇಯ ಆವೃತ್ತಿಯಲ್ಲೇ ಮಹಿಳಾಮಣಿಗಳು ಐಪಿಎಲ್ ಟ್ರೋಫಿ ಗೆದ್ದು, ಕನ್ನಡಿಗರಿಗೆಲ್ಲ ಈ ಸಲ ಕಪ್ ನಮ್ದು ಅನ್ನೋ ಅವಕಾಶ ಮಾಡಿಕೊಟ್ಟಿದ್ದಾರೆ. ಇವರಿಗೆ ಸಿಎಂ ,ಡಿಸಿಎಂ ಸೇರಿ, ಹಲವು ರಾಜಕೀಯ ಗಣ್ಯರು ಅಭಿನಂದನೆ ಸಲ್ಲಿಸಿ, ಟ್ವೀಟ್ ಮಾಡಿದ್ದಾರೆ.

ಇಂದಿನ #TATAWPL ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಮಣಿಸಿ ಆರ್.ಸಿ.ಬಿ ತಂಡ ಚಾಂಪಿಯನ್‌ಶಿಪ್ ಅನ್ನು ಮುಡಿಗೇರಿಸಿಕೊಂಡಿದೆ. ಇಡೀ ಪಂದ್ಯಾಕೂಟದುದ್ದಕ್ಕೂ ಸಂಘಟಿತ ಪ್ರದರ್ಶನ ನೀಡಿರುವ ನಮ್ಮ ಹುಡುಗಿಯರ ಆಟ ಅಭಿನಂದನಾರ್ಹ. ಕ್ರಿಕೆಟ್ ಪ್ರೇಮಿಯಾದ ನನಗೆ ಈ ಗೆಲುವು ಅತ್ಯಂತ ಖುಷಿಕೊಟ್ಟಿದೆ. ಆರ್.ಸಿ.ಬಿ ಅಭಿಮಾನಿಗಳ ದಶಕಗಳ ಕನಸು ಇಂದು ಈಡೇರಿದೆ. ಐಪಿಎಲ್ ನಲ್ಲಿಯೂ ನಮ್ಮ ಹುಡುಗರು ಕಪ್ ಗೆಲ್ಲಲಿ ಎಂಬ ಹಾರೈಕೆ ನನ್ನದು. ಈ ಸಲ ಕಪ್ ನಮ್ದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಕಪ್‌ ಗೆದ್ದಾಯ್ತು, ಕನಸು ನನಸಾಯ್ತು! ಹೆಣ್ಮುಮಕ್ಕಳೇ ಮೊದಲು ಎನ್ನುವುದನ್ನು ಆರ್‌ಸಿಬಿ ವನಿತೆಯರ ತಂಡ ನಿರೂಪಿಸಿದೆ. ಇತಿಹಾಸ ಸೃಷ್ಟಿಸಿದ ಸಿಂಹಿಣಿಯರಿಗೆ ಹೃದಯಪೂರ್ವಕ ಅಭಿನಂದನೆಗಳು. ಅದರಲ್ಲೂ ನಮ್ಮ ಉತ್ತರ ಕರ್ನಾಟಕದ ಹುಡುಗಿ ಶ್ರೇಯಾಂಕಾ ಪಟೇಲ್ ಗೆ ಧನ್ಯವಾದಗಳು. ನಿಮ್ಮ ಗೆಲುವಿನ ಓಟ ಹೀಗೇ ಮುಂದುವರಿಯಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹಾರೈಸಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ, ತೇಜಸ್ವಿ ಸೂರ್ಯ, ಪ್ರೀತಂಗೌಡ ಸೇರಿ ಹಲವು ಗಣ್ಯರು ಆರ್‌ಸಿಬಿ ತಂಡಕ್ಕೆ ಅಭಿನಂದಿಸಿ, ಟ್ವೀಟ್ ಮಾಡಿದ್ದಾರೆ. ಎಲ್ಲ ಟ್ವೀಟ್‌ಗಳು ಇಲ್ಲಿದೆ ನೋಡಿ..

- Advertisement -

Latest Posts

Don't Miss