Tuesday, November 5, 2024

Latest Posts

Political News: ಚನ್ನಪಟ್ಟಣ ಕ್ಷೇತ್ರಕ್ಕೆ ಅಚ್ಚರಿಯ ಅಭ್ಯರ್ಥಿ!

- Advertisement -

Political News: ಚನ್ನಪಟ್ಟಣ ಉಪಚುನಾವಣೆ ಶೀಘ್ರದಲ್ಲೇ ಚುನಾವಣೆ ಘೋಷಣೆಯಾಗಲಿದೆ. ಜೆಡಿಎಸ್ ಭದ್ರಕೋಟೆದಲ್ಲಿ ಅಚ್ಚರಿಯ ಹೆಸರು ಮುನ್ನಲೆಗೆ ಬಂದಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಂದ ಗೆಲುವು ಸಾಧಿಸಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಹೀಗಾಗಿ 14 ದಿನಗಳಲ್ಲಿ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಬೇಕಿದೆ. ಇದರ ಬೆನ್ನಲ್ಲೇ ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ಯಾರು? ಚನ್ನಪಟ್ಟಣದಲ್ಲಿ ಹೆಚ್​ಡಿಕೆ ಅವರ ಉತ್ತರಾಧಿಕಾರಿ ಯಾರು? ಎಂಬುದರ ಕುರಿತ ಚರ್ಚೆ ಜೋರಾಗಿದೆ.

ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಯುತ್ತಿದೆ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಬೇಕೆಂಬ ಅಭಿಪ್ರಾಯ ಪಕ್ಷದೊಳಗೆ ವ್ಯಕ್ತವಾಗಿದೆ. ಹೆಚ್​.ಡಿ.ಕುಮಾರಸ್ವಾಮಿ ಅವರು ಕೂಡ ಪುತ್ರ ನಿಖಿಲ್ ಅಥವಾ ಪತ್ನಿ ಅನಿತಾ ಅವರನ್ನು ಕಣಕ್ಕಿಳಿಸಿ ಕ್ಷೇತ್ರದ ಮೇಲೆ ಹಿಡಿತ ಉಳಿಸಿಕೊಳ್ಳುವ ಆಲೋಚನೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಾವಾಗ ನಿಖಿಲ್ ಹೆಸರು ಮುನ್ನಲೆಗೆ ಬಂತೋ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವ ಬಿಜೆಪಿಯ ಹಾಲಿ ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು, ತಾವು ಕ್ಷೇತ್ರದ ಆಕಾಂಕ್ಷಿ ಎಂಬುದನ್ನು ತಿಳಿಸಿದ್ದಾರೆ. ಸಿಪಿವೈ ಅವರು ಕಳೆದ ಎರಡು ದಿನಗಳಿಂದ ದೆಹಲಿಯ ನಾಯಕರನ್ನು ಭೇಟಿ ಮಾಡಿ, ಕ್ಷೇತ್ರದ ಟಿಕೆಟ್ ತಮಗೇ ನೀಡುವಂತೆ ಮನವೊಲಿಸುವ ಪ್ರಯತ್ನ ಮುಂದುವರಿಸಿದ್ದಾರೆ.

2018ರಲ್ಲಿ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರ ಬೀಳಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಸಿಪಿವೈ, ಕೇಂದ್ರ ನಾಯಕರ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ರಾಜ್ಯ ನಾಯಕ ಮರ್ಜಿಗಿಂತ ಹೈಕಮಾಂಡ್ ಮರ್ಜಿಗೆ ಒಳಗಾಗಿ ಕೆಲಸ ಮಾಡುವ ರಾಜಕಾರಣಿಯಾಗಿದ್ದಾರೆ. ಒಂದು ವೇಳೆ ಉಪಚುನಾವಣೆಯ ಟಿಕೆಟ್ ಸಿಗದೇ ಹೋದಾರೆ ಯೋಗೇಶ್ವರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.

ಸದ್ಯ ಎಂಎಲ್​ಸಿ ಆಗಿರುವ ಯೋಗೇಶ್ವರ್, ಮುಂದೆ ಮೂರು ಮಾರ್ಗಗಳಿವೆ. ಬಿಜೆಪಿ ಟಿಕೆಟ್ ಸಿಗದೇ ಹೋದರೆ ಪಕ್ಷಕ್ಕೆ ಸೆಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿಸುವುದು ಮೊದಲ ದಾರಿಯಾಗಿದೆ. ಇಲ್ಲದಿದ್ದರೆ, ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಸಮರ್ಥ ಅಭ್ಯರ್ಥಿ ಇಲ್ಲದ ಕಾರಣ, ಕಾಂಗ್ರೆಸ್​ನಿಂದ ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ಎರಡೂ ಮಾರ್ಗಗಳನ್ನು ಹೊರತು ಪಡಿಸಿ, ಸದ್ಯಕ್ಕೆ ಎಂಎಲ್​ಸಿ ಆಗಿ ಮುಂದುವರಿಯುವುದಾಗಿದೆ. ಸದ್ಯಕ್ಕೆ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆಯಬಹುದಾಗಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಯೋಗೇಶ್ವರ್ ವಿರುದ್ಧ ಕುಮಾರಸ್ವಾಮಿ ಅವರು 15915 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಹೆಚ್​ಡಿಕೆ 96592 ಮತಗಳನ್ನು ಪಡೆದರೆ, ಯೋಗೇಶ್ವರ್ 80677 ಮತಗಳು ಹಾಗೂ ಕಾಂಗ್ರೆಸ್​ನ ಗಂಗಾಧರ್ 15374 ಮತಗಳನ್ನು ಪಡೆದಿದ್ದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೀನಾಯ ಸೋಲು ಕಂಡಿರುವ ಡಿ.ಕೆ. ಸುರೇಶ್ ಹೆಸರು, ಚನ್ನಪಟ್ಟಣಕ್ಕೆ ಕೇಳಿ ಬರುತ್ತಿದೆ. ನಾನು ಸ್ಪರ್ಧಿಸುವುದಿಲ್ಲ ಎಂದು ಸದ್ಯ ಅವರು ಹೇಳಿದರೂ, ಕಡೆ ಗಳಿಗೆಯಲ್ಲಿ ತೀರ್ಮಾನ ಬದಲಾಗಬಹುದು. ಕ್ಷೇತ್ರದ ಸ್ಥಿತಿ ಮೈತ್ರಿ ಪರವಾಗಿದ್ದರೂ, ಕಾಂಗ್ರೆಸ್ ಚೇತರಿಕೆಯ ಹಾದಿಯಲ್ಲಿದೆ. ಒಮ್ಮತದ ಮೈತ್ರಿ ಅಭ್ಯರ್ಥಿ ಇಲ್ಲದಿದ್ದರೆ ಕ್ಷೇತ್ರ ಕೈ ತಪ್ಪುವ ಭೀತಿ ಇದ್ದೇ ಇದೆ.

ದರ್ಶನ್​ಗೆ ಶಾಕ್! ವಿಜಯಲಕ್ಷ್ಮೀ ಮಹತ್ವ ನಿರ್ಧಾರ

ಕುವೈತ್‌ನಲ್ಲಿ ಬೆಂಕಿ ಅಪಘಾತ: 40ಕ್ಕೂ ಹೆಚ್ಚು ಭಾರತೀಯರ ಸಾವು

ಅಭಿಮಾನಿಗಳನ್ನು ಠಾಣೆಯಿದ ದೂರವಿಡಲು ಅನ್ನಪೂರ್ಣೆಶ್ವರಿ ಠಾಣೆ ಸುತ್ತಮುತ್ತ 144 ಸೆಕ್ಷನ್ ಜಾರಿ

- Advertisement -

Latest Posts

Don't Miss