Shivamogga News: ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೇರೆ ನಗರಗಳಿಗೆ ( ಇನ್ನು ಹಲವು ಪ್ರದೇಶಗಳಿಗೆ) ವಿಮಾನಯಾನ ಸೌಲಭ್ಯ ಕಲ್ಪಿಸುವಂತೆ ನಾಗರಿಕ ವಿಮಾನಯಾನ ಸಚಿವರಿಗೆ ಜನಪ್ರಿಯ ಸಂಸದ ಅಭಿವೃದ್ಧಿ ಹರಿಕಾರ ಬಿ.ವೈ.ರಾಘವೇಂದ್ರ ಅವರು ಮನವಿ ಮಾಡಿದ್ದಾರೆ.
ಶ್ರೀ ಬಿಎಸ್ ಯಡಿಯೂರಪ್ಪನವರ,ಶ್ರೀ ಬಿ ವೈ ರಾಘವೇಂದ್ರರ ವಿಶೇಷ ಆಸಕ್ತಿ.. ಪರಿಶ್ರಮದಿಂದ..2023 ರಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರಿಂದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೊಂಡಿದ್ದು, ಅಂದಿನಿಂದ ಇಂದಿನ ವರೆಗೂ ಇಂಡಿಗೋ ಏರ್ ಲೈನ್ಸ್ – ಸ್ಪೈಸ್ ಚೆಟ್ ಏರ್ ಲೈನ್ಸ್ – ಸ್ಟಾರ್ ಏರ್ ಲೈನ್ಸ್ ಸಂಸ್ಥೆಗಳು, ಶಿವಮೊಗ್ಗ ದಿಂದ ಬೆಂಗಳೂರು- ತಿರುಪತಿ – ಹೈದರಾಬಾದ್ – ಚೆನ್ನೈ – ಗೋವಾ – ನಗರಗಳಿಗೆ ಪ್ರತಿನಿತ್ಯ ವಿಮಾನಯಾನ ಸೇವೆ ನೀಡುವ ಮೂಲಕ ಪ್ರಯಾಣಿಕರಿಗೆ ಪ್ರಯಾಣದ ಸಮಯ ಉಳಿತಾಯ ಮಾಡುವುದರ ಜೊತೆಗೆ ಪ್ರಯಾಣಿಕರಿಗೆ ಉತ್ತಮ ಆತಿಥ್ಯ ಮತ್ತು ಸೇವೆ ಒದಗಿಸುವುದರ ಮೂಲಕ ಜನ ಮೆಚ್ಚಿಗೆ ಕಳಿಸಿದೆ. ಇನ್ನು ಹಲವು ಪ್ರದೇಶಗಳಿಗೆ ವಿಮಾನಯಾನ ಸೌಕರ್ಯ ಕಲ್ಪಿಸುವಂತೆ, ಸಂಸದ ಬಿ.ವೈ. ರಾಘವೇಂದ್ರ ಮನವಿ ಮಾಡಿದ್ದಾರೆ.
ಇನ್ನು ಹಲವು ಪ್ರದೇಶಗಳಿಗೆ ವಿಮಾನಯಾನ ಸೌಕರ್ಯ ಕಲ್ಪಿಸುವಂತೆ ಜಿಲ್ಲೆಯ ನಾಗರಿಕರು ಮತ್ತು ಶಿವಮೊಗ್ಗ ಅಕ್ಕ ಪಕ್ಕದ ಜಿಲ್ಲೆಯ ನಾಗರಿಕರ ಬೇಡಿಕೆ ಹೆಚ್ಚುತ್ತಿದ್ದು, ಈ ಹಿಂದೆ ಆರ್,ಸಿ,ಎಸ್, ಯೋಜನೆ ಅಡಿ ಶಿವಮೊಗ್ಗ ದೆಹಲಿ ಶಿವಮೊಗ್ಗ ಮಾರ್ಗದಲ್ಲಿ ಅವಕಾಶ ಕಲ್ಪಿಸುವಂತೆ ಕೋರಿದೆ.
ಮುಂಬೈ ಶಿಮೊಗ್ಗ ಮುಂಬೈ ಶಿರಡಿ ಶಿವಮೊಗ್ಗ ಶಿರಡಿ ಮತ್ತು ಬೆಂಗಳೂರು ಶಿವಮೊಗ್ಗ ಮುಂಬೈ ಅಹಮದಾಬಾದ್ ಮಾರ್ಗಗಳು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ, ಸ್ಥಳಗಳು ವಾಣಿಜ್ಯ ವ್ಯವಹಾರ ಹಾಗೂ ತೀರ್ಥಕ್ಷೇತ್ರಗಳಿಗೆ ತೆರಳುವ ಕುರಿತು ಆಂತರಿಕ ಸಮೀಕ್ಷೆಯಿಂದ ತಿಳಿದುಬಂದಿದೆ.
ಹೀಗಾಗಿ ಈ ಸ್ಥಳಗಳಿಗೆ ಶಿವಮೊಗ್ಗದಿಂದ ವಿಮಾನಯಾನ ಸಂಪರ್ಕ ಕಲ್ಪಿಸಬೇಕು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸತ್ ಸದಸ್ಯ ಅಭಿವೃದ್ಧಿ ಹರಿಕಾರ ಶ್ರೀ ಬಿ ವೈ ರಾಘವೇಂದ್ರರವರು ನಾಗರಿಕ ವಿಮಾನಯಾನ ಸಚಿವರಿಗೆ ಮನವಿ ಮಾಡಿದ್ದಾರೆ.