Hubli News: ಹುಬ್ಬಳ್ಳಿ: ಸರ್ಕಾರವನ್ನು ಟೀಕಿಸೋ ಭರದಲ್ಲಿ ಅರವಿಂದ ಬೆಲ್ಲದ್ ವಿವಾದಾಾತ್ಮಕ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮೈಕ್ರೋ ಫೈನಾನ್ಸ್ ನಿಂದ ಊರ ಬಿಡ್ತೀದಾರೆ. ಆತ್ಮಹತ್ಯೆ ಮಾಡಕೋತಿದಾರೆ. ಕಿರಕುಳ ಹೆಚ್ಚಾದಾಗ ಅವರ ಹೆಂಡತಿಯರನ್ನು ಮಾರೋ ಸ್ಥಿತಿ ಸರ್ಕಾರ ತಂದಿದೆ ಎಂದು ಸರ್ಕಾರದ ವಿರುದ್ಧ ವಾಾಗ್ದಾಳಿ ನಡೆಸುವ ಭರದಲ್ಲಿ ಬೆಲ್ಲದ್, ಎಡವಟ್ಟು ಹೇಳಿಕೆ ನೀಡಿದ್ದಾರೆ.
ಮೀಟರ್ ಬಡ್ಡಿ, ಡ್ರಗ್ಸ್, ಇಸ್ಪಿಟ್ ಒಂದಕ್ಕೊಂದು ಕನೆಕ್ಟ್ ಇರೋ ವ್ಯವಹಾರ. ಡ್ರಗ್ಸ್ ಡೀಲಿಂಗ್, ಶುರುವಾಗತ್ತೆ. ಕಾನೂನು ಕುಂಠಿತವಾದಾಗ ಇಲ್ಲಿ ಶುರುವಾಗತ್ತೆ. ಪೊಲೀಸರಿಗೆ ಕೋಟಿಗಟ್ಟಲೆ ದುಡ್ಡು ತಗೊಂಡು ಪೊಸ್ಟಿಂಗ್ ಕೊಡ್ತಾರೆ. ಅವರು ಕಳ್ಳರು, ಡ್ರಗ್ಸ್ ಡೀಲರ್ ಗಳು, ಪ್ರಾಸ್ಟಿಟ್ಯೂಟ್ ಕಡೆ ಹಣ ವಸೂಲಿ ಮಾಡೋಕೆ ಶುರು ಮಾಡ್ತಾರೆ.
ಪೊಲೀಸ್ ಠಾಣೆಯಲ್ಲಿ ರಕ್ಷಣೆ ಸಿಗ್ತಿಲ್ಲ. ಇದಕ್ಕೆಲ್ಲ ಮೂಲ ಕಾರಣ ಭ್ರಷ್ಟಾಚಾರ. ಸಿಎಮ್ ವಿಧಾನಸೌಧದಲ್ಲಿ ಮೀಟಿಂಗ್ ಮಾಡಿದ್ರೆ ನಿಲ್ಲಲ್ಲ. ಸರ್ಕಾರದಲ್ಲಿ ಬ್ರಷ್ಟಾಚಾರ ಮುಗಿಲು ಮುಟ್ಟಿದೆ. ಮೊದಲು ಅದನ್ನು ನಿಲ್ಲಿಸಬೇಕು. ಹುಬ್ಬಳ್ಳಿಯಲ್ಲಿ ಪ್ರತಿಯೊಂದು ಕಾಲೇಜ್ ಅಲ್ಲಿ ಡ್ರಗ್ಸ್ ಸಿಗತಿದೆ. ಚಾಕು ಚೂರಿತ ಹೆಚ್ಚಾಗಿವೆ ಎಂದು ಬೆಲ್ಲದ್ ಆರೋಪಿಸಿದ್ದಾರೆ.