Political News: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಆರೋಪದಲ್ಲಿ ಸಿಲುಕಿದ್ದ ನಿಗಮದ ಮಾಜಿ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ, ಅವರ ಪುತ್ರ ಪ್ರಶಾಂತ್ ಮಾಡಾಳ್ ಅವರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಮಾಡಾಳ್ ವಿರೂಪಾಕ್ಷಪ್ಪ ಕರ್ನಾಟಕ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 2023ರಲ್ಲಿ ಲೋಕಾಯುಕ್ತ ರೇಡ್ ಮಾಡಿತ್ತು. ಮಾಡಾಳ್ ಅವರ ಪುತ್ರ ಪ್ರಶಾಂತ್ ನಿಗಮಕ್ಕೆ ಸುಗಂಧ ದ್ರವ್ಯ ಪೂರೈಸುವವರಿಂದ 40 ಲಕ್ಷ ರೂಪಾಯಿ ತೆಗೆದುಕೊಳ್ಳುವಾಾಗ ಸಿಕ್ಕಿ ಬಿದ್ದಿದ್ದರು. ಆದರೆ ಹಣ ಪಡೆದ ಮಾತ್ರಕ್ಕೆ ಪ್ರಶಾಂತ್ ದೋಷಿಯಲ್ಲ. ಏಕೆಂದರೆ ಹಣ ಏಕೆ ಪಡೆದರು ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ಕೋರ್ಟ್ ಪ್ರಶಾಂತ್‌ರನ್ನು ದೋಷಮುಕ್ತಗೊಳಿಸಿದೆ.
ದಾಳಿ ಬಗ್ಗೆ ಪ್ರಶ್ನಿಸಿ ಪ್ರಶಾಂತ್ ಯಾವ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರೋ, ಆ ನ್ಯಾಯಾಲಯದಲ್ಲೇ ವಿಚಾರಣೆ ನಡೆದು, ಈ ಆದೇಶ ಸಿಕ್ಕಿದ್ದು. ಪ್ರಶಾಂತ್ ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪವಿತ್ತು, ಆದರೆ ಯಾಕೆ ಲಂಚ ಪಡೆದರು..? ಲಂಚವೇ ಪಡೆದಿದ್ದಾ, ಬೇರೆ ದುಡ್ಡು ಪಡೆದಿದ್ದಾ ಎಂಬುದಕ್ಕೆ ಯಾವುದೇ ಸಾಕ್ಷ್ಯ ಸಿಗಲಿಲ್ಲ. ಹಾಗಾಗಿ ಸದ್ಯ ಪ್ರಶಾಂತ್ ದೋಷಮುಕ್ತರೆನ್ನಿಸಿಕೊಂಡಿದ್ದಾರೆ.