Friday, October 17, 2025

Latest Posts

Political News: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಕ್ಷಮೆ ಕೇಳಿದ ಸಿಎಂ ಸಿದ್ಧರಾಮಯ್ಯ

- Advertisement -

Political News: ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಿಸಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಸೋಲುಕಂಡಿದ್ದು ಗೊತ್ತೇ ಇದೆ. ಇದರ ಬೆನ್ನಲ್ಲೇ ಮಗನ ಸೋಲಿನ ಬೇಸರದಲ್ಲಿದ್ದ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಸಿಎಂ ಸಿದ್ದರಾಮಯ್ಯ ಅವರು ಕ್ಷಮೆ ಕೇಳಿದ್ದಾರೆ.

ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಇಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಗೆ ಆಗಮಿಸಿದ್ದರು. ಈ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಮುಖ ನೋಡುತ್ತಿದ್ದಂತೆ ಸಿದ್ದರಾಮಯ್ಯ ಅವರು ಸಾರಿ ಕಣಮ್ಮ ಎಂದು ಹೇಳಿದ್ದಾರೆ. ಸಿಎಂ Sorry ಎಂದ ಕೂಡಲೇ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ತುಂಬಾ ಭಾವುಕರಾದರು.

ನಂತರ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಹೂಗುಚ್ಛ ನೀಡಿ, ಕಾಲಿಗೆ ನಮಸ್ಕರಿಸಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಅವರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ 178437 ಮತಗಳ ಅಂತರದಿಂದ ಸೋಲುಕಂಡಿದ್ದಾರೆ. ಶೆಟ್ಟರ್ 7,62,029 ಮತಗಳನ್ನು ಪಡೆದರೆ, ಮೃಣಾಲ್ 5,83,592 ಮತಗಳ ಪಡೆದು ಸೋಲುಕಂಡಿದ್ದರು.

ದಾಖಲೆ ವೀರನಿಗೆ ಬೆಟ್ಟದಷ್ಟು ಸವಾಲು, ಕೇಳಬೇಕಿದೆ ಜನಸಾಮಾನ್ಯರ ಅಹವಾಲು..!

ಉಪಚುನಾವಣೆ ದಿನಾಂಕ ಘೋಷಣೆ

ದೊಡ್ಮನೆಯ ಕುಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ- ಯುವ ದಾಂಪತ್ಯದಲ್ಲಿ ಬಿರುಗಾಳಿ!

- Advertisement -

Latest Posts

Don't Miss