Wednesday, October 15, 2025

Latest Posts

Political News: ಮೆಟ್ರೋದಲ್ಲಿ ಬೆಂಗಳೂರು ಸಿಟಿ ರೌಂಡ್ಸ್ ನಡೆಸಿದ ಸಿಎಂ ಸಿದ್ದರಾಮಯ್ಯ

- Advertisement -

Political News: ಇಂದು ಸಿಎಂ ಸಿದ್ದರಾಮಯ್ಯ ಬೆಂಗಳೂರು ರೌಂಡ್ಸ್ ಹಾಾಕಿದ್ದು, ಬಸ್, ಮೆಟ್ರೋನಲ್ಲಿ ಓಡಾಡಿ, ಜನರ ಕಷ್ಟ, ಅನಿಸಿಕೆಗಳನ್ನು ವಿಚಾರಿಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ಬೆಂಗಳೂರು ಸಿಟಿ ರೌಂಡ್ಸ್‌ನ ಅಂಗವಾಗಿ ಇಂದು ನಗರದ ವಿವಿಧೆಡೆ ಬಸ್‌ನಲ್ಲಿ ಸಂಚರಿಸಿ, ರಸ್ತೆ, ಸೇತುವೆ, ಮೆಟ್ರೋ ಮುಂತಾದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ ಬಳಿಕ ನಮ್ಮ ಮೆಟ್ರೋ ಏರಿ ವಿಧಾನಸೌಧಕ್ಕೆ ಪ್ರಯಾಣ ಬೆಳೆಸಿದೆ.

ಕೆಲಕ್ಷಣಗಳ ಈ ಪಯಣದಲ್ಲಿ ನಿತ್ಯ ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರನ್ನು ಭೇಟಿಯಾಗಿ ಅವರ ಅನುಭವ ಕೇಳಿದೆ. ಯಾವುದೇ ತ್ರಾಸವಿಲ್ಲದೆ ನಿಗದಿತ ಸಮಯಕ್ಕೆ ಸರಿಯಾಗಿ ತಲುಪಬಹುದಾದ ಮೆಟ್ರೋ ರೈಲು ಬೆಂಗಳೂರಿಗರ ಸಂಚಾರ ಜೀವನಾಡಿಯಾಗಿ ಬದಲಾಗುತ್ತಿದೆ. ಹೀಗಾಗಿ ಕಾಮಗಾರಿಗಳಿಗೆ ವೇಗ ನೀಡಿ, ನಗರದ ಬಹುತೇಕ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಕಲ್ಪಿಸುವುದು ನಮ್ಮ ಗುರಿಯಾಗಿದೆ ಎಂದು ಸಿಎಂ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

https://youtu.be/uqBkJ-j2y4Y

- Advertisement -

Latest Posts

Don't Miss