Political News: ಜಮೀರ್ ಪುತ್ರ ಜೈದ್ ಖಾನ್ ನಟನೆಯ ಕಲ್ಟ್ ಸಿನಿಮಾ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ

Political News: ಸಚಿವ ಜಮೀರ್ ಅಹಮದ್ ಪುತ್ರ ಜೈದ್ ಖಾನ್, ರಚಿತಾ ರಾಮ್ ಮತ್ತು ಮಲೈಕಾ ವಸುಪಾಲ್ ಅಭಿನಯದ ಕಲ್ಟ್ ಸಿನಿಮಾ ರಿಲೀಸ್ ಆಗಿದ್ದು, ಹಲವರು ಸಿನಿಮಾ ನೋಡಿ, ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೀಗ ಸಿಎಂ ಸಿದ್ದರಾಮಯ್ಯ ಮತ್ತು ಕೆಲ ಕಾಂಗ್ರೆಸ್ ನಾಯಕರು ಥಿಯೇಟರ್‌ಗೆ ಹೋಗಿ, ಕಲ್ಟ್ ಸಿನಿಮಾ ನೋಡಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ ತಮ್ಮ ಅನಿಸಿಕೆ ಹೇಳಿರುವ ಸಿಎಂ, ಸಂಪುಟ ಸಹೋದ್ಯೋಗಿಗಳು, ಆತ್ಮೀಯರು ಆದ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ನಾಯಕ ನಟನಾಗಿ ಅಭಿನಯಿಸಿರುವ “ಕಲ್ಟ್ ” ಸಿನಿಮಾವನ್ನು ನಿನ್ನೆ ಸಂಜೆ ಚಿತ್ರಮಂದಿರದಲ್ಲಿ ವೀಕ್ಷಿಸಿದೆ.

ಚಿತ್ರದ ಕತೆ, ಸಂಭಾಷಣೆ, ಸಂಗೀತ, ಕಲಾವಿದರ ಅಭಿನಯ ಈ ಎಲ್ಲವೂ ಇಡೀ ಚಿತ್ರವನ್ನು ಅತ್ಯಂತ ಸೊಗಸಾಗಿ ಕಟ್ಟಿಕೊಟ್ಟಿದೆ. ಕುಟುಂಬ ಸಮೇತರಾಗಿ ಬಂದು ನೋಡಬಹುದಾದ ಒಂದು ಸಿನಿಮಾ. ಚಿತ್ರತಂಡಕ್ಕೆ ಶುಭವಾಗಲಿ, ಚಿತ್ರ ಯಶಸ್ವಿ ಪ್ರದರ್ಶನ ಕಂಡು ಶತದಿನ ಪೂರೈಸಲಿ ಎಂದು ಹಾರೈಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

About The Author