Political News: ಸಿಎಂ ಮನೆಯಿಂದಲೇ ಎಸ್ಐಆರ್ ಪ್ರಕ್ರಿಯೆಯ ಅಕ್ರಮದ ಪೂಜೆ ಆರಂಭವಾಗಿದೆ: ಹೆಚ್.ಡಿ.ಕುಮಾರಸ್ವಾಮಿ

Political News: ಎಸ್‌ಐಆರ್‌ನಲ್ಲಿ ಅಕ್ರಮ ನಡೆದಿದೆ ಎಂದು ಮಾಜಿ ಸಿಎಂ, ಕೇಂದ್ರ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಎಸ್‌ಐಆರ್ ಪ್ರಕ್ರಿಯೆ ಶುರುವಾದ ದಿನ, ಯಾವಾಗ ಸಿಎಂ ಮನೆಗೆ ಹೋಗಿ ಅಧಿಕಾರಿಗಳು ಎಸ್ಐಆರ್ ಪ್ರಕ್ರಿಯೆ ಮಾಡಿದರೋ, ಅಲ್ಲಿಯೇ ಅಕ್ರಮದ ಪೂಜೆ ಶುರುವಾಗಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಕುಮಾರಸ್ವಾಮಿ, ಯಾವ ಕಾಂಗ್ರೆಸ್ ನಾಯಕರು ಸಂವಿಧಾನದ ಬುಕ್ ಹಿಡಿದು ಪ್ರತಿನಿತ್ಯ ಕಥೆ ಹೇಳುತ್ತಾರೋ, ಅವರೆಲ್ಲ ಗಮನವಿರಿಸಿ ಮಾತನಾಡಬೇಕು. ಗೃಹಸಚಿವರಾದ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಅಧ್ಯಕ್ಷರೆಲ್ಲಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡುತ್ತಾರೆ. ಆರೋಪ ಮಾಡುತ್ತಾರೆ. ಹಾಗಾದ್ರೆ ನೀವಿಲ್ಲಿ ಮಾಡುತ್ತಿರುವುದೇನು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಅಕ್ರಮ ಮತದಾರರನ್ನು ಮತಪಟ್ಟಿಯಲ್ಲಿ ಸೇರಿಸಲು ಅಧಿಕಾರಿಗಳನ್ನು ದುರುಪಯೋಗಪಡಿಸಿಕ“ಳ್ಳುತ್ತಿದ್ದೀರಿ. ಇದು ಲಜ್ಜೆಗೆಟ್ಟ ಸರ್ಕಾರ. ವೇದಿಕೆ ಮೇಲೆ ಹೇಳೋದೇ ಬೇರೆ, ಕಾರ್ಯರೂಪಕ್ಕೆ ತರುವಂಥದ್ದೇ ಬೇರೆ. ಸರ್ಕಾರದ ಈ ನಡುವಳಿಕೆಯಿಂದ ಸರ್ಕಾರದ ನಿಜವಾದ ಬಂಡವಾಳ ಬಯಲಾಾಗಲಿದೆ ಎಂದು ಕುಮಾರಸ್ವಾಮಿ ವಾಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿಯವರು ಭಾಷಣ ಮಾಡುವ ಮುನ್ನ, ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವ ಮುನ್ನ, ಇಲ್ಲಿ ಬಂದು ಪರಿಸ್ಥಿತಿ ನೋಡಿ ಮತ್ತೆ ಮಾತನಾಡುವುದು ಉತ್ತಮ. ಎಸ್ಐಆರ್‌ ಪ್ರಕ್ರಿಯೆಯನ್ನು ರಾಜ್ಯದ ಅಧಿಕಾರಿಗಳು ಮಾಡಬಾರದು. ಬೇರೆ ರಾಜ್ಯದ ಅಧಿಕಾರಿಗಳಿಂದ ಮಾಡಿಸಬೇಕು ಅನ್ನೋದು ನನ್ನ ಅಭಿಪ್ರಾಯ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

About The Author