Mandya Political News: ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಶಾಸಕರಾದ ನರೇಂದ್ರ ಸ್ವಾಮಿ ಮತ್ತು ಮಾಜಿ ಶಾಸಕರಾದ ಅನ್ನದಾನಿ ನಡುವೆ ಜಿದ್ದಾಜಿದ್ದಿನ ವಾಕ್ಸಮರ ಏರ್ಪಟ್ಟಿದೆ.
ಮಾಜಿ ಶಾಸಕ ಅನ್ನದಾನಿಯವರನ್ನು ಹಾಡಿನ ಗಿರಾಕಿ ಎಂದು ಕರೆದಿದ್ದು, ಹಾಲಿ ಶಾಸಕ ನರೇಂದ್ರ ಸ್ವಾಮಿ ಅವರನ್ನು ಇಸ್ಪೀಟ್ ಗಿರಾಕಿ ಎಂದು ಸಾರ್ವಜನಿಕವಾಗಿಯೇ ವೇದಿಕೆಯಲ್ಲಿ ವಾಾಗ್ದಾಳಿ ನಡೆಸಲಾಗಿದೆ.
ಇತ್ತೀಚೆಗೆ ಮಳವಳ್ಳಿಯಲ್ಲಿ ನಡೆದಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ್ದ ಹಾಲಿ ಶಾಸಕ ನರೇಂದ್ರ ಸ್ವಾಮಿ, ಮಳವಳ್ಳಿ ಕ್ಷೇತ್ರದಲ್ಲಿ ನಡೆದಿದ್ದ ಸರ್ಕಾರಿ ಭೂಮಿ ಲೂಟಿ ನಡೆದ ಬಗ್ಗೆ ಚರ್ಚಿಸಿ, ನೇರವಾಗಿ ಅನ್ನದಾನಿಯವರ ಹೆಸರು ಹೇಳದಿದ್ದರೂ, ಅಕ್ರಮಗಳಿಗೆಲ್ಲ ಗೆಸ್ಟ್ ಹೌಸ್‌ನಲ್ಲಿ ಕೂತು ಹಾಡು ಹಾಡುತ್ತಿದ್ದ ದುಷ್ಟ ಕೂಟಗಳೇ ಕಾರಣ ಎಂದು ಹೇಳಿದ್ದರು. ಶಾಸಕ ನರೇಂದ್ರ ಸ್ವಾಮಿ ಹೇಳಿಕೆಯಿಂದ ಅನ್ನದಾನಿ ಕೆಂಡಾಮಂಡಲರಾಗಿದ್ದರು.
ಬಳಿಕ, ನಾನು ಹಾಡಿನ ಗಿರಾಕಿ ಎಂದು ಹೇಳಿದ್ದೀರಿ. ಹೌದು ನಾನು ಹಾಡು ಹಾಡುತ್ತೇನೆ. ಜನಪದದಲ್ಲಿ ಪಿಹೆಚ್‌ಡಿ ಮಾಡಿದ್ದೇನೆ. ಜನಪದ ಹಾಡನ್ನಲ್ಲದೇ, ನಾನು ಡಿಸ್ಕೋ ಹಾಡು ಹಾಡಿದ್ದನ್ನು ನೀವು ಎಂದಾದರೂ ನೋಡಿದ್ದೀರಾ..? ಎಂದು ಅನ್ನದಾನಿ ಪ್ರಶ್ನಿಸಿದ್ದಾರೆ.
ಅಲ್ಲದೇ ನನ್ನ ಕ್ಷೇತ್ರದಲ್ಲಿ ಲೂಟಿ ಮಾಡಿದ ಬಗ್ಗೆ ನಾನೇ ವಿರೋಧ ವ್ಯಕ್ತಪಡಿಸಿದ್ದೇನೆ. ಈಗಲೂ ನನ್ನ ಬಳಿ ಈ ಬಗ್ಗೆ ಸಾಕಷ್ಟು ದಾಖಲೆಗಳಿದೆ. ನಾನು ನಿನ್ನಂಗೆ ಐಬಿಯಲ್ಲಿ ಮೋಜು ಮಸ್ತಿ ಮಾಡಲ್ಲ. ರೌಡಿಸಂ ಮಾಡಲ್ಲವೆಂದು ಅನ್ನದಾನಿ, ಹಾಲಿ ಶಾಸಕ ನರೇಂದ್ರ ಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೇ ಕೋರೋನಾ ಸಂದರ್ಭದಲ್ಲಿ ನೀನು ಎಲ್ಲಿದ್ದೆ..? ನಾನು ಜನರ ಮಧ್ಯೆ ಇದ್ದು, ಅವರಿಗೆ ಹಾಡು ಹಾಡಿ ಸ್ಪೂರ್ತಿ ತುಂಬಿದ್ದೆ. ನೀನು ಆಗ ಇಸ್ಪೀಟ್ ತಿಂದ್ಕಂಡ್ ಇದ್ದೆ. ಜತೆಗೆ ನದಿಯಿಂದ ಕದ್ದ ಮರಳು ಹ“ಡೆಯುತ್ತಿದ್ದ ಗಿರಾಕಿ ನೀನು ಎಂದು ಅನ್ನದಾನಿ, ಶಾಸಕ ನರೇಂದ್ರ ಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ನಾನು ಹಾಡಿನ ಗಿರಾಕಿ, ನೀನು ಇಸ್ಪೀಟ್ ಗಿರಾಕಿ. ನನ್ನನ್ನು ಮತ್ತೆ ಮತ್ತೆ ಕೆಣಕಬೇಡ. ಗೆದ್ದಿದ್ದೀಯಾ ಕೆಲಸ ಮಾಡು ಎಂದು ಅನ್ನದಾನಿ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು ತನ್ನಿಂದಲೇ ಅಭಿವೃದ್ಧಿಯಾಗಿದೆ ಎಂದು ಹೇಳುತ್ತಾರೆ. ಹಾಗಾದ್ರೆ ಏನೇನು ಅಭಿವೃದ್ಧಿ ಮಾಡಿದ್ದಾರೆಂದು ದಾಖಲೆ ತಂದು ಕ`ಡಲಿ ಎಂದು ಅನ್ನದಾನಿ ಸವಾಲ್ ಹಾಕಿದ್ದಾರೆ.
ಕುಮಾರಸ್‌ವಾಮಿಯವರು ತಾವು ಶಾಸಕರಾಗಿದ್ದಾಗ ಏನೇನು ಅಬಿವೃದ್ಧಿ ಮಾಡಿದ್ದರು ಎಂದು ದಾಖಲೆ ನೀಡಿದ್ದರು. ನರೇಂದ್ರ ಸ್ವಾಮಿಯವರು ಕೂಡ ತಾವು ಏನೇನು ಅಭಿವೃದ್ಧಿ ಮಾಡಿದ್ದಾರೆಂದು ದಾಖಲೆ ನೀಡಲಿ, ಚರ್ಚೆಗೆ ಬರಲಿ ಎಂದು ಅನ್ನದಾನಿ ಹೇಳಿದ್ದಾರೆ.
ಅಲ್ಲದೇ ಇದೇ ವೇಳೆ ತಮ್ಮ ಅವಧಿಯಲ್ಲಿ ಅನ್ನದಾನಿ ಏನೇನು ಅಭಿವೃದ್ಧಿ ಮಾಡಿದ್ದರು. ಅದರಿಂದ ಯಾರ್ಯಾರಿಗೆ ಸಹಾಯವಾಗಿದೆ ಎನ್ನುವ ಬಗ್ಗೆ ಅನ್ನದಾನಿ ದಾಖಲೆ ತೋರಿಸಿದ್ದಾರೆ.