Political News:
Feb:25: ಹಾಸನದ ಟಿಕೆಟ್ ಕೌತುಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಭವಾನಿ ರೇವಣ್ಣ ನಡೆ ನೋಡಿದ್ರೆ ಟಿಕೇಟ್ ಖಾತ್ರಿಯಾದಂತೆ ಕಾಣುತ್ತಿದೆ.ರಾಜಕೀಯ ವಲಯದಲ್ಲಿಯೂ ಈ ಗುಸುಗುಸು ಈಗ ಸ್ಟಾರ್ಟ್ ಆಗಿದೆ. ಹೌದು ಹೆಚ್ ಡಿ ದೇವೇಗೌಡರ ಸೊಸೆ ಭವಾನಿ ರೇವಣ್ಣ ಹಾಸನ ಮತಕ್ಷೇತ್ರದಲ್ಲಿ ಓಡಾಡುತ್ತಿರುವುದನ್ನು ಗಮನಿಸಿದರೆ ಅವರಿಗೆ ಈಗಾಗಲೇ ಟಿಕೆಟ್ ಸಿಕ್ಕುಬಿಟ್ಟಿದೆ ಅಂತ ಗುಮಾನಿ ಹುಟ್ಟುತ್ತಲಿದೆ. ಅವರು ತಮ್ಮ ಪತಿ ಹೆಚ್ ಡಿ ರೇವಣ್ಣರೊಂದಿಗೆ ಎರಡು ದಿನಗಳಿಂದ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಟಿಕೆಟ್ ಅವರಿಗೆ ನೀಡುವುದು ಅಂತ ಹೆಚ್ ಡಿ ಕುಮಾರಸ್ವಾಮಿ ಅವರು ಈಗಾಗಲೇ ನಿರ್ಧರಿಸಿ ಮಾಧ್ಯಮಗಳ ಮುಂದೆ ಮಾತಾಡುವಾಗ ಮಾತ್ರ ಹಾಸನ ಸೇರಿದಂತೆ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಆಗ ಬಿಡುಗಡೆಯಾಗಲಿದೆ ಈಗ ಬಿಡುಗಡೆಯಾಗಲಿದೆ ಅಂತ ಕಾಗೆ ಹಾರಿಸುತ್ತಿದ್ದಾರೆಯೇ? ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ಭವಾನಿಯವರು ನಾನೇ ಅಭ್ಯರ್ಥಿ ಎಂಬ ಗತ್ತು ಮತ್ತು ಆತ್ಮವಿಶ್ವಾಸದಲ್ಲಿ ಮತದಾರರನ್ನು ಭೇಟಿಯಾಗುತ್ತಿದ್ದಾರೆ, ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿಗಳಲ್ಲಿ ಸಭೆಗಳನ್ನು ನಡೆಸುತ್ತಿದ್ದಾರೆ ಎಂಬುವುದು ತಿಳಿದು ಬಂದಿದೆ. ಇದರಿಂದ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡುತ್ತಿದೆ.
ನಟ ಉಪೇಂದ್ರ ಪಕ್ಷಕ್ಕೆ “ಆಟೋ ರಿಕ್ಷಾ” ಅಧಿಕೃತವಾಗಿ ಚಿಹ್ನೆ ನೀಡಿದ ಕೇಂದ್ರ ಚುನಾವಣೆ ಆಯೋಗ