Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಫೆ04 ರಂದು ಬಸವನ ಬಾಗೇವಾಡಿಯಲ್ಲಿ ಕ್ರಾಂತಿ ವೀರ ರಾಯಣ್ಣ ಬ್ರಿಗೇಡ್ ಉದ್ಘಾಟನೆಗೊಂಡಿದೆ. 1008 ಸಂತರ ಪಾದ ಪೂಜೆ ಮಾಡಿ ಬ್ರಿಗೇಡ್ ಉದ್ಘಾಟನೆ ಮಾಡುವ ಉದ್ದೇಶ ಇತ್ತು. ಆದರೆ ಅಂದು ಕಾರ್ಯಕ್ರಮದಲ್ಲಿ 1200 ಸಾಧು ಸಂತರು ಭಾಗವಹಿಸಿದ್ದರು. ಬ್ರಿಗೇಡ್ ದೊಡ್ಡ ಸಂಘಟನೆ ಆಗಿ ಬೆಳೆಯಬೇಕು ಎನ್ನುವುದು ನಮ್ಮ ಗುರಿ. ಹಿಂದುಳಿದ ವರ್ಗಗಳ, ದಲಿತರ ಪರವಾಗಿ ಬ್ರಿಗೇಡ್ ಕಾರ್ಯ ನಿರ್ವಹಣೆ ಮಾಡಲಿದೆ. ಈ ನಿಟ್ಟಿನಲ್ಲಿ ಸಂಘಟನೆಗೆ ಕೈ ಜೋಡಿಸಿದ ವಿವಿಧ ಶ್ರೀಗಳ ಮತ್ತು ಕಾರ್ಯಕರ್ತ ಅಭಿಪ್ರಾಯ ಸಂಗ್ರಹಿಸಿ ಚರ್ಚೆ ಮಾಡುತ್ತಿದ್ದೆವೆ. ಸಂಘಟನೆ ಮುಂದಿನ ರೂಪುರೇಷೆಗಳೆನು , ಬ್ರಿಗೇಡ್ ಹೇಗೆ ಕಾರ್ಯನಿರ್ವಹಿಸಬೆಕೆಂಬವುದು ಇಂದು ಚರ್ಚೆ ಮಾಡಲಾಗಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಹಿಂದುತ್ವ ಎಂದ್ರೆ ಒಂದೇ ಜಾತಿಗೆ, ಒಂದೇ ಧರ್ಮಕ್ಕೆ ಸೇರಿದ್ದಲ್ಲಾ. ಯಾರೆಲ್ಲ ಇಲ್ಲಿಯ ಅನ್ನ ತಿಂದಿದ್ದಾರೆ, ಇಲ್ಲಿಯ ಗಾಳಿ ಉಸಿರಾಡುತ್ತಾರೋ ಅವರೇಲ್ಲಾ ಹಿಂದುತ್ವದವರೇ. ದೇಶದ ಮೇಲೆ ಅಭಿಮಾನ, ಗೌರವ ಇರುವವರೆಲ್ಲರೂ ಹಿಂದುತ್ವಕ್ಕೆ ಸೇರಿದವರೇ. ಈ ಮಾತನ್ನು ಸುಪ್ರೀಂ ಕೋರ್ಟ್ ಹೇಳಿದೆ. ದೇಶದ ಮೇಲೆ ಅಭಿಮಾನ, ಗೌರವ ಇರುವವರೆಲ್ಲರನ್ನು ಬ್ರಿಗೇಡ್ ಸೇರಿಸಿಕೊಳ್ಳುತ್ತೆವೆ. ಯಾರನ್ನು ನಾವು ಕೊಂಡಿಕೊಂಡಿಲ್ಲ, ಯಾರಿಗೆ ಆಸಕ್ತಿ ಇದ್ದವರು ಸಂಘಟನೆ ಬರಬಹುದು ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಮೊಘಲರಿಂದ ಭಾರತೀಯ ಸಂಸ್ಕೃತಿ, ಸಂಸ್ಕಾರ ಹಾಳಾಗಿದೆ ಅಂತ ಎಲ್ಲರೂ ಜೊತೆಗೂಡಿ, ಹಳೇ ಕಾಂಗ್ರೆಸ್ ನವರು ಸ್ವಾತಂತ್ರ್ಯ ಹೋರಾಟ ಮಾಡಿದರು. ಹಳೇ ಕಾಂಗ್ರೆಸ್ ರಿಗ ರಕ್ತ ಈಗಲೂ ಕೆಲವೊಬ್ಬರ ಬಳಿ ಇದೆ. ಅದರಲ್ಲಿ ಡಿ.ಕೆ.ಶಿವಕುಮಾರ್ ಒಬ್ಬರು ಇದರಿಂದ ಡಿಕೆ ಶಿವಕುಮಾರ್ ಹೊರ ಬಂದಿದ್ದಾರೆ. ಡಿ.ಕೆ.ಶಿವಕುಮಾರ್ ಅನುಸರಿಸುತ್ತಿರುವ ಮಾರ್ಗವೇ ಹಿಂದುತ್ವ. ಹಳೇ ಕಾಂಗ್ರೆಸಗಿರ ಮತ್ತು ಮಹಾತ್ಮ ಗಾಂಧಿ ಆತ್ಮಕ್ಕೆ ಡಿಕೆ ಶಿವಕುಮಾರ್ ಮಾದರಿಯಾಗಿದ್ದಾರೆ..
ಹಿಂದು ಆಗಿ ಹುಟ್ಟಿ ಹಿಂದು ಆಗಿಯೇ ಸಾಯಿತ್ತಿನಿ ಅಂತ ಡಿಕೆ ಶಿವಕುಮಾರ್ ಹೇಳಿದ್ದಾರೆ. ಹಿಂದುತ್ವ ಬಿಜೆಪಿ ಸ್ವತ್ತಲ್ಲಾ, ಬಿಜೆಪಿ ಆಸ್ತಿ ಹಿಂದುತ್ವ ಹೇಗೆ ಆಗುತ್ತೆ. ಮಹಾತ್ಮ ಗಾಂಧಿ ಸಹ ಹೇ ರಾಮ್ ಅಂತ ಪ್ರಾಣ ಬಿಟ್ಟಿದ್ದಾರೆ.. ಗಾಂಧಿ ಸಮಾಧಿ ಮೇಲೆ ಹೇ ರಾಮ್ ಅಂತಯಿದೆ, ಅಲ್ಲಾ ಹೋ ಅಬ್ಬರ ಅಂತ ಇಲ್ಲ. ಹೀಗಾಗಿ ಹಳೇ ಕಾಂಗ್ರೆಸ್ ರಕ್ತದಲ್ಲಿ ಹಿಂದುತ್ವ ಇದೆ. ಆದರೆ ಈಗಿರುವ ಹೊಸ ಕಾಂಗ್ರೆಸ್ ನಲ್ಲಿ ಇದು ಇಲ್ಲ. ಕೆಲವರು ಬೇರೆಯವರನ್ನು ಮೆಚ್ಚಿಸಲು ಏನೋನೋ ಮಾತನಾಡುತ್ತಾರೆ. ಡಿ.ಕೆ.ಶಿವಕುಮಾರ್ ಹಿಂದುತ್ವ ಪ್ರತಿಪಾಧನೆ ನಾಟಕ ನೋ ಏನೋ ದೇವರ ನೋಡಿಕೊಳ್ಳತ್ತಾನೆ. ಈಗಲಾದ್ರು ಬುದ್ಧಿ ಬಂದಿದೆ ಸಂತೋಷ ಈ ಬುದ್ಧಿ ಸಿದ್ದರಾಮಯ್ಯರಿಗೂ ಬರಲಿ ಎಂದು ಈಶ್ವರಪ್ಪ ಹೇಳಿದ್ದಾರೆ.
ರಾಜ್ಯ ಸರ್ಕಾರ ಮುತಾಲಿಕರನ್ನು ಶಿವಮೊಗ್ಗ ಜಿಲ್ಲೆಗೆ ನಿಷೇಧ ಮಾಡಿರುವುದು ಅಕ್ಷಮ್ಯ ಅಪರಾಧ ಎಂದಿರುವ ಈಶ್ವರಪ್ಪ, ಈ ರಾಜ್ಯದಲ್ಲಿ ಹೆಣ್ಣು ಮಕ್ಕಳು ಉಳಿಯಬೇಕು. ಈ ನಿಟ್ಟಿನಲ್ಲಿ ಮುತಾಲಿಕ್ ಒಳ್ಳೆಯ ಕೆಲಸ ಮಾಡಿದೆ. ಹೀಗಾಗಿ ಶಿವಮೊಗ್ಗದ ಸಚಿವರು, ಅಧಿಕಾರಿಗಳು ಯಾರನ್ನೋ ಮೆಚ್ಚಿಸಲು ಈ ರೀತಿಯಲ್ಲಿ ಮಾಡಬಾರದು ಎಂದಿದ್ದಾರೆ.




