Saturday, January 18, 2025

Latest Posts

Political News: ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ ಆಗುವ ಭರವಸೆ ಇದೆ: ವಿನಯ್ ಗುರೂಜಿ

- Advertisement -

Political News: ಡಿಸಿಎಂ ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ ಆಗುವ ಎಲ್ಲ ಭರವಸೆ ಇದೆ ಎಂದು ವಿನಯ್ ಗುರೂಜಿ ಹೇಳಿದ್ದಾರೆ. ವಿನಯ್ ಗುರೂಜಿ ಆಧ್ಯಾತ್ಮದ ಬಗ್ಗೆ ಮಾತನಾಡುವವರಲ್ಲದೇ, ಜ್ಯೋತಿಷ್ಯವನ್ನು ಕೂಡ ಉತ್ತಮವಾಗಿ ಬಲ್ಲವರು. ಹಲವರ ಬಗ್ಗೆ ಅವರು ನುಡಿದ ಭವಿಷ್ಯ ಸತ್ಯವಾಗಿದೆ. ಹಾಗಾಗಿ ಹಲವು ಸೆಲೆಬ್ರಿಟಿಗಳು, ರಾಜಕಾರಣಿಗಳು ಅವರ ಬಳಿಯೇ ಭವಿಷ್ಯ ಕೇಳುತ್ತಾರೆ. ಮತ್ತು ಪರಿಹಾರವನ್ನೂ ಕೇಳುತ್ತಾರೆ.

ಇದೀಗ ಮಾಧ್ಯಮದವರ ಜೊತೆ ಮಾತನಾಡಿರುವ ವಿನಯ್ ಗುರೂಜಿ, ಡಿಸಿಎಂ ಡಿ.ಕೆ.ಶಿವಕುಮಾಾರ್ ಬಗ್ಗೆ ಅತ್ಯುತ್ತಮವಾದ ಭವಿಷ್ಯ ನುಡಿದಿದ್ದು, ಅವರು ಮುಂದಿನ ಸಿಎಂ ಆಗುವ ಎಲ್ಲ ಸಾಧ್ಯತೆಗಳಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ.ಶಿವಕುಮಾಾರ್ ಬಹಳಷ್ಟು ಮಾಡಿದ್ದಾರೆ. ಅವರೊಬ್ಬ ನಾಟಕ ಮಾಡದೇ, ಸತ್ಯವಾಗಿಯೂ ರಾಜಕಾರಣ ಮಾಡುವ ರಾಜಕಾರಣಿ. ಅವರು ಸಿಎಂ ಆದರೆ ಖುಷಿ ಪಡುತ್ತೇವೆ. ಅವರು ಮುಂದಿನ ಸಿಎಂ ಆಗಲಿ ಎಂದು ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ ಎಂದು ಗುರೂಜಿಿ ಹೇಳಿದ್ದಾರೆ.

ದೇವರಲ್ಲಿ, ಅಜ್ಜನಲ್ಲಿ ಅವರು ಹೆಚ್ಚು ಭಕ್ತಿ ಮಾಡುತ್ತಾರೆ. ಗುರುವಿನ ಅನುಗ್ರಹದಿಂದಲೇ, ಅವರು ಸಿಎಂ ಸೀಟ್‌ ಮೇಲೆ ಕೂರುವ ಭರವಸೆ ಇದೆ ಎಂದು ವಿನಯ್ ಗುರೂಜಿ ಹೇಳಿದ್ದಾರೆ. ಅದರಂತೆ ನಿನ್ನೆ ಡಿಕೆಶಿ ಪತ್ನಿ ಸಮೇತರಾಗಿ ಪ್ರತ್ಯಂಗೀರಾ ದೇವಿ ದರ್ಶನ ಮಾಡಿ, ಪೂಜೆ ಸಲ್ಲಿಸಿ ಬಂದಿದ್ದಾರೆ. ಪ್ರತ್ಯಂಗೀರಾ ದೇವಿಯನ್ನು ಶತ್ರು ಸಂಹಾರಕ್ಕಾಗಿ, ಕಾರ್ಯಸಿದ್ಧಿ, ಯಶಸ್ಸಿಗಾಗಿ ಪ್ರಾರ್ಥಿಸಲಾಗುತ್ತದೆ. ಅಧಿಕಾರ ಸಿಗಬೇಕು ಎಂದರೆ, ಪ್ರತ್ಯಂಗೀರಾ ದೇವಿಯನ್ನು ಆರಾಧಿಸಬೇಕು ಎಂದು ಹೇಳಲಾಗುತ್ತದೆ.

- Advertisement -

Latest Posts

Don't Miss