Political News: ಹಾಸನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಮಾಜಿ ಸಚಿವ ರೇವಣ್ಣ, ಜಿಲ್ಲೆಯಲ್ಲಾಗುತ್ತಿರುವ ಹೃದಯಾಘಾತದ ಸಾವಿನ ಬಗ್ಗೆ ಮಾತನಾಡಿದ್ದಾರೆ.
ಹಾಸನದಲ್ಲಿ ಲಂಚಾವತಾರ, ಭ್ರಷ್ಟಾಚಾರ ಜೋರಾಗಿ ನಡೆಯುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಅವರೇನಾದರೂ ಕ್ರಮ ಕೈಗ“ಳ್ಳುತ್ತಾರಾ ಅಂತಾ ಕಾದು ನೋಡೋಣವೆಂದು ರೇವಣ್ಣ ಹೇಳಿದ್ದಾರೆ.
ಇನ್ನು ಹಾಸನದಲ್ಲಿ ಹೃದಯಾಘಾತ ಸಮಸ್ಯೆ ಜೋರಾಗಿ, ಸಾವು ಹೆಚ್ಚಾಗುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರೇವಣ್ಣ, ಸುಮ್ಮನೆ ಜಿಲ್ಲಾಸ್ಪತ್ರೆಯನ್ನು ಮುಚ್ಚಿಸುವುದು ಉತ್ತಮ. ಯಾಕಿರಬೇವು ಅವು..? ಕರ್ನಾಟಕದಲ್ಲಿ ನಮಗೆ ಸರ್ಕಾರ ನಡೆಸಲು ಆಗುತ್ತಿಲ್ಲ ಎಂದು ಹೇಳಲಿ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಗ್ಗೆ ನಮಗೆ ಗೌರವವಿದೆ. ಅವರ ಬಗ್ಗೆ ನಾನೇನು ಹೇಳಲು ಹೋಗುವುದಿಲ್ಲ. ಆದರೆ ಜಿಲ್ಲಾಸ್ಪತ್ರೆಗಳು ಕೆಲಸಕ್ಕೆ ಬಾರದ ಹಾಗೆ ಆಗಿದೆ. ನಮ್ಮ ಸರ್ಕಾರವಿದ್ದಾಗ, ನಾವು ಹೃದಯ ಸಮಸ್ಯೆಗಳಿಗೆ ಚಿಕಿತ್ಸೆಗಾಗಿಯೇ 50 ಕೋಟಿ ಖರ್ಚು ಮಾಡಿ, ಆಸ್ಪತ್ರೆ ಕಟ್ಟಿಸುವ ನಿರ್ಧಾರ ಮಾಡಿದ್ದೆವು. ಆದರೆ ನಮ್ಮ ಸರ್ಕಾರ ಹೋಯ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನೀವು ಬೇರೆ ಜಿಲ್ಲೆಗಳ ಆಸ್ಪತ್ರೆಗೆ ಹೋದರೆ, ಬರೀ ಚೆಕ್ ಮಾಡಿಸಿದ್ರೆ ಲಕ್ಷ ಲಕ್ಷ ಪಡೆಯುತ್ತಾರೆ. ಹಾಗಾಗಿ ನಾನು ನಮ್ಮ ಜಿಲ್ಲೆಯಲ್ಲಿ ಹೃದಯ ಸಂಬಂಧಿ ಖಾಯಿಲೆಗೆಂದೇ ಆಸ್ಪತ್ರೆ ಸ್ಥಾಪಿಸಲು ಮನವಿ ಮಾಡುತ್ತೇನೆ. ಆ ಬಗ್ಗೆ ಚರ್ಚೆ ನಡೆಸಲಿದ್ದೇನೆ ಎಂದು ರೇವಣ್ಣ ಹೇಳಿದ್ದಾರೆ.