Political News: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಅವರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿ, ನ್ಯಾಯಮೂರ್ತಿ ಗಜಾನನ ಭಟ್ ಅವರ ಮುಂದೆ ಹಾಜರುಪಡಿಸಲಿದ್ದಾರೆ.
ಇತ್ತೀಚೆಗೆ ಸತೀಶ್ ಸೈಲ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದಾಗ, ಕೋಟಿ ಕೋಟಿ ಹಣ, ಚಿನ್ನದ ಬಿಸ್ಕೇಟ್ ಪತ್ತೆಯಾಗಿತ್ತು. 1.68 ಕೋಟಿ ನಗದು, 6.75 ಕೆಜಿ ಚಿನ್ನದ ಬಾರ್, 14.13 ಕೋಟಿ ಹಣ ಇರುವ ಬ್ಯಾಂಕ್ ಖಾತೆಯನ್ನು ಇಡಿ ವಶಕ್ಕೆ ಪಡೆದಿತ್ತು.
ಅಕ್ರಮ ಅದಿರು ುಪ್ರಕರಣದಲ್ಲಿ ಜೈಲು ಪಾಲಾಗಿದ್ದ ಸೈಲ್ ಜಾಮೀನಿನ ಮೇಲೆ ಆಚೆ ಬಂದಿದ್ದರು. ಬಳಿಕ ಹೈಕೋರ್ಟ್ ಅದಿರು ಪತ್ತೆ ಪ್ರಕರಣದ ಶಿಕ್ಷೆಯನ್ನು ಅಮಾನತ್ತಿನಲ್ಲಿರಿಸಿ, ಆದೇಶ ಪ್ರಕಟಿಸಿತ್ತು. ಆದರೆ ಈಗ ಇಡಿ ಶಾಕ್ ನೀಡಿದ್ದು, ಮತ್ತೆ ಬಂಧಿಸಲಾಗಿದೆ.




