National Political News: ಮೂರನೇ ಬಾರಿಗೆ ಪ್ರಧಾನಿ ಪಟ್ಟವನ್ನು ಅಲಂಕರಿಸಿದ 24 ಗಂಟೆಯೊಳಗೆ ನರೇಂದ್ರ ಮೋದಿ ಅವರು ದೇಶದ ರೈತರಿಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟಿದ್ದಾರೆ. ಕಿಸಾನ್ ಸಮ್ಮಾನ್ ನಿಧಿಯ ಕಂತು ಬಿಡುಗಡೆ ಮಾಡುವ ಕಡತನಕ್ಕೆ ಮೋದಿ ಸಹಿ ಹಾಕಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ನಿಧಿಯ 17ನೇ ಕಂತನ್ನು ಬಿಡುಗಡೆ ಮಾಡುವ ಕಡತಕ್ಕೆ ಮೋದಿ ಸಹಿ ಹಾಕಿದ್ದು, ರೈತರ ಖಾತೆಗೆ ಎರಡು ಸಾವಿರ ರೂಪಾಯಿ ಜಮೆ ಆಗಿದೆ. ಅಂದಾಜು 20 ಸಾವಿರ ಕೋಟಿ ರೂಪಾಯಿ ರೈತರ ಕಲ್ಯಾಣಕ್ಕೆ ಉಪಯೋಗವಾಗಲಿದೆ.
ಕಡತಕ್ಕೆ ಸಹಿ ಹಾಕಿದ ನಂತರ ಮಾತನಾಡಿದ ಮೋದಿ ಅವರು, ರೈತರ ಕಲ್ಯಾಣಕ್ಕೆ ನಾನು ಬದ್ಧನಾಗಿದ್ದೇನೆ. ರೈತರ ಕಲ್ಯಾಣಕ್ಕಾಗಿ ಸಾಧ್ಯವಾದಷ್ಟು ಕೆಲಸ ಮಾಡಬೇಕೆಂದಿದ್ದೇವೆ. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ ಮತ್ತು ಇದನ್ನು ಮುಂದುವರಿಸಲಿದೆ ಎಂದು ಭರವಸೆ ನೀಡಿದ್ದಾರೆ.
ಕಳೆದ ಫೆಬ್ರವರಿ ತಿಂಗಳಲ್ಲಿ ದೇಶದ ಕೋಟ್ಯಂತರ ರೈತರಿಗೆ 16 ಕಂತಿನ ಕಿಸಾನ್ ಸಮ್ಮಾನ್ ನಿಧಿಯ ಹಣ ಬಿಡುಗಡೆಯಾಗಿತ್ತು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ವರ್ಷಕ್ಕೆ 6 ಸಾವಿರ ನೀಡಲಾಗುತ್ತದೆ.
ದಾಖಲೆ ವೀರನಿಗೆ ಬೆಟ್ಟದಷ್ಟು ಸವಾಲು, ಕೇಳಬೇಕಿದೆ ಜನಸಾಮಾನ್ಯರ ಅಹವಾಲು..!
ದೊಡ್ಮನೆಯ ಕುಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ- ಯುವ ದಾಂಪತ್ಯದಲ್ಲಿ ಬಿರುಗಾಳಿ!