Political News: ಸಿಎಂ ಸಿಹಿ ಸುದ್ದಿ ಕೊಡುತ್ತೇನೆ ಎಂದು ಹೇಳಿದ್ದಾರೆ: ಮಾಜಿ ಸಚಿವ ರಾಜಣ್ಣ ಪುತ್ರ ರಾಜೇಂದ್ರ

Political News: ಸಿಎಂ ಸಿದ್ದರಾಮಯ್ಯನವರು ಮಾಜಿ ಸಚಿವ ರಾಜಣ್ಣ ಅವರ ಮನೆಗೆ ಭೇಟಿ ನೀಡಿದ್ದು, ಈ ಬಗ್ಗೆ ರಾಜಣ್ಣ ಪುತ್ರ ರಾಜೇಂದ್ರ ಮಾತನಾಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಅವರು, ಸಿಎಂ ಮನೆಗೆ ಬರೋದೇನು ವಿಶೇಷವಲ್ಲ. ಅವರು ಭೇಟಿಯಾಗಲು ಬರುತ್ತಿರುತ್ತಾರೆ. ತೂಮಕೂರಿಗೆ ಬಂದಾಗ ಊಟಕ್ಕೆ ಬರುವುದು ಪದ್ಧತಿ. ತುಮಕೂರಿನಲ್ಲಿ ಅಂದು ಕಾರ್ಯಕ್ರಮವಿತ್ತು. ಹಾಗಾಗಿ ತುಮಕೂರಿಗೆ ಬಂದಾಗ, ನಮ್ಮ ಮನೆಗೆ ಬಂದಿದ್ದರು. ಆಗ ಮಾಧ್ಯಮದವರು ಮತ್ತೆ ರಾಜಣ್ಣ ಅವರು ಸಚಿವ ಸಂಪುಟಕ್ಕೆ ತೆಗೆದುಕ“ಳ್ಳುತ್ತೀರಾ ಎಂದು ಪ್ರಶ್ನಿಸಿದಾಗ, ಸಿಹಿ ಸುದ್ದಿ ನೀಡುತ್ತೇನೆ ಎಂದು ಹೇಳಿದ್ದಾರೆ ಎಂದು ರಾಜೇಂದ್ರ ಹೇಳಿದ್ದಾರೆ.

ಮತ್ತೆ ಸಚಿವರಾಗಬೇಕು ಅಂತಾ ನಮಗೂ ಆಸೆ ಇದೆ. ಹಗರಣಕ್ಕೆ ಸಿಲುಕಿ ರಾಜೀನಾಮೆ ನೀಡಿರುವಂಥದ್ದಲ್ಲ. ಕೆಲ ಕೆಲಸವನ್ನು ತಪ್ಪಾಗಿ ಗ್ರಹಿಸಿ, ರಾಜೀನಾಮೆ ಪಡೆದಿದ್ದಾರೆ. ಹಾಗಾಗಿ ಮತ್ತೆ ಸಚಿವರಾಗುವ ನಿರೀಕ್ಷೆ ಇದೆ. ರಾಜಣ್ಣ ಮತ್ತೆ ಸಚಿವರಾಗಬೇಕು ಎಂದು ಹಲವರಿಗೆ ಆಸೆ ಇದೇ, ಅದೇ ರೀತಿ ಸಿಎಂ ಮೇಲೂ ನಮಗೆ ನಿರೀಕ್ಷೆ ಇದೆ ಎಂದು ರಾಜೇಂದ್ರ ಹೇಳಿದ್ದಾರೆ.

About The Author