Political News: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಭಾಷಣದ ವೇಳೆ ಮೋದಿ ಹೀ ಈಸ್ ಎ ಟೆರರಿಸ್ಟ್ ಎಂದಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸೋಲಿನ ಹತಾಶೆ ಕಾಂಗ್ರೆಸ್ ಪಕ್ಷವನ್ನ ಯಾವ ಕೀಳು ಮಟ್ಟಕ್ಕೆ ಇಳಿಸಿದೆ ಅಂದರೆ ಮೌತ್ ಕಾ ಸೌದಾಗರ್, ನೀಚ್, ಚಾಯ್ ವಾಲಾ, ರಾವಣ, ಚೌಕಿದಾರ್ ಚೋರ್ ಹೇ, ವಿಷಸರ್ಪ, ಕಾಂಗ್ರೆಸ್ ಪಕ್ಷದ ನಾಯಕರು ಹೀಗೆಲ್ಲ ಬಾಯಿಗೆ ಬಂದಂತೆ ಪ್ರಧಾನಿ ಮೋದಿ ಅವರನ್ನ ನಿಂದನೆ ಮಾಡಿದಾಗಲೆಲ್ಲಾ, ಪ್ರಧಾನಿ ಮೋದಿ ವಿರುದ್ಧ ತಮ್ಮ ನಾಲಿಗೆ ಹರಿಬಿಟ್ಟಾಗಲೆಲ್ಲಾ ದೇಶದ ಜನ ಅವರಿಗೆ ಛೀಮಾರಿ ಹಾಕಿ, ಪಾಠ ಕಲಿಸಿದ್ದಾರೆ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಆದರೆ ಇನ್ನೂ ಬುದ್ಧಿ ಕಲಿಯದ ಕಾಂಗ್ರೆಸ್ ಪಕ್ಷ ಸೋಲು, ತಿರಸ್ಕಾರದ ಹತಾಶೆಯಿಂದ ಅದನ್ನೇ ಮುಂದುವರೆಸಿ, ಶತಕೋಟಿ ಭಾರತೀಯರಿಂದ ಮೂರನೇ ಬಾರಿಗೆ ಪ್ರಧಾನಿ ಆಗಿ ಆಯ್ಕೆಯಾಗಿರುವ ಪ್ರಧಾನಿ ಮೋದಿ ಅವರನ್ನ “ಟೆರರಿಸ್ಟ್” ಎಂದು ಕರೆಯುವ ಮೂಲಕ ತನ್ನ ಸಮಾಧಿ ತಾನೇ ತೋಡಿಕೊಳ್ಳುತ್ತಿದೆ.
ದೇಶದ ಪ್ರಧಾನಿಯನ್ನು “ಟೆರರಿಸ್ಟ್” ಎಂದು ಕರೆಯುವುದು ಕೇವಲ ಒಬ್ಬ ವ್ಯಕ್ತಿಯ ನಿಂದನೆ ಅದು ಇಡೀ ದೇಶದ, ದೇಶವಾಸಿಗಳ, ಪ್ರಜಾಪ್ರಭುತ್ವದ, ಸಂವಿಧಾನದ ನಿಂದನೆ. ಭಾರತದ ಪ್ರಜ್ಞಾವಂತ ನಾಗರಿಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಇದೆಲ್ಲದಕ್ಕೂ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಬೆಲೆ ತೆತ್ತಲೇಬೇಕು ಎಂದು ಆರ್.ಅಶೋಕ್ ಕಾಂಗ್ರೆಸ್ ನಾಯಕರ ಹೇಳಿಕೆಯ ವಿರುದ್ಧ ಕಿಡಿಕಾರಿದ್ದಾರೆ.
ಸೋಲಿನ ಹತಾಶೆ ಕಾಂಗ್ರೆಸ್ ಪಕ್ಷವನ್ನ ಯಾವ ಕೀಳು ಮಟ್ಟಕ್ಕೆ ಇಳಿಸಿದೆ ಅಂದರೆ
ಮೌತ್ ಕಾ ಸೌದಾಗರ್
ನೀಚ್
ಚಾಯ್ ವಾಲಾ
ರಾವಣ
ಚೌಕಿದಾರ್ ಚೋರ್ ಹೇ
ವಿಷಸರ್ಪಕಾಂಗ್ರೆಸ್ ಪಕ್ಷದ ನಾಯಕರು ಹೀಗೆಲ್ಲ ಬಾಯಿಗೆ ಬಂದಂತೆ ಪ್ರಧಾನಿ ಮೋದಿ ಅವರನ್ನ ನಿಂದನೆ ಮಾಡಿದಾಗಲೆಲ್ಲಾ, ಪ್ರಧಾನಿ ಮೋದಿ ವಿರುದ್ಧ ತಮ್ಮ ನಾಲಿಗೆ ಹರಿಬಿಟ್ಟಾಗಲೆಲ್ಲಾ ದೇಶದ ಜನ ಅವರಿಗೆ… pic.twitter.com/I8pATI0XBS
— R. Ashoka (@RAshokaBJP) April 21, 2026




