- Advertisement -
ರಾಜಕೀಯ ಸುದ್ದಿ: ಕೆಳೆದ ಒಂದು ವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು ಶುಕ್ರವಾರ ಬಜೆಟ್ ಘೋಷಣೆ ಕಾರ್ಯ ಕೂಡಾ ಜರುಗಿರು ಬಜೆಟ್ ಮಂಡನೆ ಸಮಯದಲ್ಲಿ ಅಪರಿಚಿತರೊಬ್ಬರು ವಿಧಾನಮಂಡಲ ಅಧಿವೇಶನದೊಳಗೆ ಪ್ರವೇಶಿಸಿ ಭದ್ರತಾ ಲೋಪವನ್ನು ಎತ್ತಿ ತೋರಿಸಿದರು ಹಾಗೂ ಈಗ ಬಾರಿ ಚರ್ಚೆಯಲ್ಲಿರವ ಪೆನ್ ಡ್ರೈವ್ ವಿಚಾರಕ್ಕೆ ಇಂದು ತೆರೆ ಎಳೆಯಲಿದ್ದಾರೆ
ಜೆಡಿಯಸ್ ಶಾಸಕರಾಗಿರುವ ಶಾಸಕ ಶರಣುಗೌಡ ಕಂದಕೂರ್ (Sharana gowda Kandhahur) ಪೋಸ್ಟರ್ ಪ್ರದರ್ಶನ ಮಾಡಿದ್ದಕ್ಕೆ ಸ್ಪೀಕರ್ ಯುಟಿ ಖಾದರ್ (UT Kadhar) ಕೋಪಗೊಂಡರು. ಈ ತರಹ ಎಲ್ಲಾ ಭಿತ್ತಿಪತ್ರ, ಪೋಸ್ಟರ್ ಪ್ರದರ್ಶಿಸಬಾರದು. ಹೊಸ ಶಾಸಕರು ಬಿಟ್ಟಿ ಪ್ರಚಾರಕ್ಕಾಗಿ ಈ ರೀತಿ ಮಾಡಬಾರದು ಎಂದು ಸಿಟ್ಟಾದರು.
ಹೊಸ ಶಾಸಕರು ನೀವು ಸದನ ನಿಯಮಗಳನ್ನ ತಿಳಿದುಕೊಳ್ಳಿ. ಮೊದಲು ಬರಹದಲ್ಲಿ ಕೊಟ್ಟು, ನಂತರ ಶೂನ್ಯವೇಳೆಯಲ್ಲಿ ಪ್ರಸ್ತಾಪ ಮಾಡಿ. ಅದನ್ನ ಬಿಟ್ಟು ಹೀಗೆ ಪೋಸ್ಟರ್ ಹಿಡಿಯಬೇಡಿ ಎಂದು ಸ್ಪೀಕರ್ ಗರಂ ಆದರು.ಈ ವೇಳೆ ಸ್ಪೀಕರ್ ಮಾತಿಗೆ ಜೆಡಿಎಸ್ ಶಾಸಕರ ಆಕ್ಷೇಪ ವ್ಯಕ್ತಪಡಿಸಿದರು. ನೀವು ಪೋಸ್ಟರ್ ಹಿಡಿದಿರಲಿಲ್ವಾ ಎಂದು ಪ್ರಶ್ನೆ ಮಾಡಿದರು.ಈ ವೇಳೆ ಬಿಟ್ಟಿ ಪ್ರಚಾರಕ್ಕೆ ಎಂದು ಬಳಸಿದ ಪದ ಕಡತದಿಂದ ಕೈಬಿಡುವಂತೆ ಸ್ಪೀಕರ್ ಸೂಚನೆ ನೀಡಿದರು.
ಹೀಗೆ ದಿನೇ ದಿನೇ ಒಂದೊಂದು ಘಟನೆಗಳು ಅಧಿವೇಶನದಲ್ಲಿ ಆಶ್ಚರ್ಯ ತರುವಂತಹ ಘಟನೆಗಳು ನಡೆಯುತ್ತಿವೆ.
https://karnatakatv.net/c-m-nimbannanavr-life-end-burrial/
- Advertisement -