Political News: ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಪ್ರಖರ ಹಿಂದುತ್ವವಾದಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೊಲೆಗೆ ಸಂಚನ್ನು ರೂಪಿಸಲಾಗಿತ್ತು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆರೋಪದಲ್ಲಿ ಈಗಾಗಲೇ ಅವರ ವಿರುದ್ಧ ದೂರನ್ನು ನೀಡಲಾಗಿದೆ. ಆದರೆ ಇದೀಗ ಇದೇ ವಿಚಾರಕ್ಕೆ ಯತ್ನಾಳ್ ಅವರನ್ನು ಕೊಲೆ ಮಾಡುವ ಸಂಚಿನ ಕುರಿತು ಆಡಿಯೋ ಒಂದು ಭಾರೀ ಸದ್ದು ಮಾಡುತ್ತಿದೆ. ಇದರಿಂದ ಇದೀಗ ವಿಜಯಪುರದಲ್ಲಿ ಆತಂಕ ಶುರುವಾಗಿದೆ.
ಇನ್ನೂ ಯತ್ನಾಳ್ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಲು ವಿಜಯಪುರದ ಆಲಂಗಿರ್ ಹಾಲ್‌ನಲ್ಲಿ ಮುಖಂಡರು ನಡೆಸಿದ್ದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ ಏಪ್ರಿಲ್ 15 ರಂದು ಮುಸ್ಲಿಂ ಸಮಾಜದ ವತಿಯಿಂದ ದೊಡ್ಡ ಮಟ್ಟದ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಆದರೆ ಈ ಪ್ರತಿಭಟನೆಯ ವಿಚಾರವಾಗಿ ಯುವಕನೋರ್ವ ಮಾತನಾಡಿರುವ ಅಡಿಯೋದಲ್ಲಿ ಯತ್ನಾಳ್ ಕುರಿತು ಪ್ರಸ್ತಾಪಿಸಿ, 15 ರಂದು ಅಂಬೇಡ್ಕರ್ ವೃತ್ತದಲ್ಲಿ ಎಲ್ಲರೂ ಸೇರಬೇಕು. ಅವತ್ತೇ ಯತ್ನಾಳ್‌ಗೆ ಕಡೇ ದಿನ ಎಂದು ಮಾತನಾಡಿದ್ದಾನೆ.
ಅಲ್ಲದೆ ವಿಜಯಪುರದಲ್ಲಿ ನಡೆದ ಸಭೆಯಲ್ಲಿ ದೊಡ್ಡ ಮುಸ್ಲಿಂ ನಾಯಕರು ಇದ್ದರು, ಉಲ್ಮಾಗಳೂ ಸಹ ಭಾಗಿಯಾಗಿದ್ದರು. ಇದೇ 15ರಂದು ವಿಜಯಪುರ ಬಂದ್ ಮಾಡಲಾಗುವುದು. ಮೊಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಮಾತನಾಡಿರುವ ಯತ್ನಾಳ್‌ಗೆ ಅದೇ ಫೈನಲ್ ಡೇ. ಅವನ ಹೇಳಿಕೆ ವಿರೋಧಿಸಿ 1 ಲಕ್ಷ ಜನರು ರ‍್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ. ಏಪ್ರಿಲ್ 15ರಂದು ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿ ಎಲ್ಲರೂ ಸೇರಬೇಕು. ಈ ಸಲ ಅವನದು ಕೊನೆಯ ದಿನ ಅಂತ ಎಲ್ಲರೂ ತೀರ್ಮಾನಿಸಿದ್ದಾರೆ. ಅವನು ಅರೆಸ್ಟ್ ಆಗಬೇಕು, ನಮ್ಮ ರ‍್ಯಾಲಿ ನೇರವಾಗಿ ಅವನ ಮನೆಗೆ ಹೋಗಬೇಕು. ಇದಕ್ಕಾಗಿ ಸಹೋದರ, ಸಹೋದರಿಯರೆಲ್ಲ ಅಧಿಕ ಸಂಖ್ಯೆಯಲ್ಲಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಬೇಕು. ನಿಮ್ಮ ಸುತ್ತಮುತ್ತಲಿನ ಎಲ್ಲರಿಗೂ ಈ ವಿಚಾರ ಹೇಳಿ ಎಂದು ಯುವಕ ಮಾತನಾಡಿರುವ ಆಡಿಯೋ ಜಿಲ್ಲೆಯಾದ್ಯಂತ ಬಿರುಗಾಳಿ ಎಬ್ಬಿಸಿದೆ.
ಈ ಸಲ ಅವನದು ಫೈನಲ್ ಡೇ ಇದೆ. ನಾವು ಇಲ್ಲಿತನಕ ಅವನ ವಿರುದ್ಧ ಕಂಪ್ಲೇಂಟ್ ಕೊಡುತ್ತಿದ್ದೇವು. ಅವನು ಬೇಲ್ ಮೇಲೆ ಹೊರಗೆ ಬರುತ್ತಿದ್ದನು, ಆದರೆ ಈ ಬಾರಿ ಹಾಗೆ ಆಗಲ್ಲ, ಅವನು ಅರೆಸ್ಟ್ ಆಗಲೇಬೇಕು. ಇಲ್ಲವಾದರೆ ಅವನ ತಲೆ ದೇಹದಿಂದ ಹೊರಗೆ ಇರಬೇಕು. ಇದಕ್ಕಾಗಿ ಮುಸ್ಲಿಂ ಸಮುದಾಯದವರು ಎಲ್ಲರೂ ತಯಾರಾಗಿ ಕುಳಿತಿದ್ದಾರೆ. ಏನೇ ಕೆಲಸ ಇದ್ದರೂ ಅದನ್ನು ಬಿಟ್ಟು ಅಂಬೇಡ್ಕರ್ ಸರ್ಕಲ್‌ನಲ್ಲಿ ಎಲ್ಲರೂ ಸೇರಿ. ಎಲ್ಲರೂ ಅಲ್ಲೇ ಭೇಟಿಯಾಗೋಣ.. ಇನ್ ಷಾ ಅಲ್ಲಾ ಎಂದು ಯುವಕ ಕೊಲೆಯ ಸಂಚಿನ ಕುರಿತು ಸ್ಪೋಟಕ ಮಾತುಗಳನ್ನು ಹೇಳಿದ್ದಾನೆ.
ಇನ್ನೂ ಈ ಆಡಿಯೋ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಶಾಸಕ ಯತ್ನಾಳ್ ಹತ್ಯೆಗೆ ದೊಡ್ಡ ಮಟ್ಟದಲ್ಲಿ ಸಂಚು ನಡೆದಿತ್ತಾ ಎನ್ನುವ ಅನುಮಾನಗಳು ಮೂಡುತ್ತಿವೆ. ಆದರೆ ಪೊಲೀಸರು ಇದರ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಆದರೆ ಈ ವಿಡಿಯೋ ಯತ್ನಾಳ್ ಅಭಿಮಾನಿಗಳು ಹಾಗೂ ಹಿಂದೂರ ನಾಯಕರಿಗೆ ಶಾಕ್ ನೀಡಿದೆ. ಅಲ್ಲದೆ ಈ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದಲೇ ಬಯಲಾಗಬೇಕಿದೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಯತ್ನಾಳ್..
ಇನ್ನೂ ಕಳೆದ ಏಪ್ರಿಲ್ 7 ರಂದು ಹುಬ್ಬಳ್ಳಿಯಲ್ಲಿ ನಡೆದ ರಾಮನವಮಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಯತ್ನಾಳ್, ಪ್ರವಾದಿ ಮೊಹಮ್ಮದ್ ಬಾಳಾ ಸಾಹೇಬ್ ಠಾಕ್ರೆ ಅವರ ಮನೆಯಲ್ಲಿ ಜನಿಸಿದ್ದಾರೆ ಎಂದು ಆಧಾರರಹಿತ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡಿ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ತೀವ್ರ ಆಘಾತ ಉಂಟು ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಅಲ್ಲದೆ ಈ ಕುರಿತು ದೂರು ದಾಖಲಾಗಿದೆ. ಆದರೆ ಮುಸ್ಲಿಂ ಸಮುದಾಯ ಯತ್ನಾಳ್ ವಿರುದ್ಧ ಹೋರಾಟಕ್ಕೆ ಸಜ್ಜಾಗಿದೆ.




