Thursday, April 17, 2025

Latest Posts

Poitical News: ನಾವು ಮಾಡಬೇಕಾದ್ದನ್ನು ಮಾಡ್ಲಿಲ್ಲ : ರಾಗಾ ಹೀಗಂದಿದ್ಯಾಕೆ..?

- Advertisement -

Political News: ಇಷ್ಟು ವರ್ಷಗಳ ಕಾಲ ಬಿಹಾರದಲ್ಲಿ ಕಾಂಗ್ರೆಸ್ ಮಾಡಬೇಕಾದ್ದನ್ನು ಮಾಡಲಿಲ್ಲ ಎಂದು ಒಪ್ಪಿಕೊಳ್ಳುವ ಮೊದಲ ವ್ಯಕ್ತಿ ನಾನೇ. ನಾವು ನಮ್ಮ ಹಿಂದಿನ ತಪ್ಪುಗಳಿಂದ ಕಲಿಯುತ್ತಿದ್ದೇವೆ ಎಂದು ಕಾಂಗ್ರೆಸ್‌ ನಾಯಕ ಹಾಗೂ ಸಂಸದ ರಾಹುಲ್‌ ಗಾಂಧಿ ಹೇಳಿದ್ದಾರೆ. ಪಟ್ನಾದಲ್ಲಿ ನಡೆದ ಸಂವಿಧಾನ ಉಳಿಸಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಹಾರದಲ್ಲಿ ರಾಜ್ಯ ಕಾಂಗ್ರೆಸ್‌ ಘಟಕದಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡುವ ನಿಟ್ಟಿನಲ್ಲಿ ಪಕ್ಷವು ಕ್ರಮ ಕೈಗೊಳ್ಳಲಿದೆ. ಅಲ್ಲದೆ ಜಿಲ್ಲಾ ಮಟ್ಟದಲ್ಲೂ ಪಕ್ಷದ ಪುನರ್‌ ರಚನೆಗೆ ರೂಪುರೇಷೆ ಸಿದ್ದಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನೂ ಮುಖ್ಯವಾಗಿ ಈ ಹಿಂದೆ ಪಕ್ಷದಲ್ಲಿ ಮೂರನೇ ಎರಡರಷ್ಟು ಮೇಲ್ಜಾತಿಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ ಅಷ್ಟೇ ಪ್ರಮಾಣದಲ್ಲಿ ವಂಚಿತ ಸಮುದಾಯಗಳಿಗೆ ಪ್ರಾತಿನಿಧ್ಯತೆ ನೀಡುತ್ತೇವೆ. ಇದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ನಾನು ಸಂಘಟನೆಗಾಗಿ ನೀಡುತ್ತಿರುವ ವಿಶೇಷ ಕಾಳಜಿಯಾಗಿದೆ. ಈಗಾಗಲೇ ತೆಲಂಗಾಣದಲ್ಲಿ ನಾವು ಜಾತಿ ಗಣತಿ ಮಾಡಿದ್ದೇವೆ, ವರದಿಯಲ್ಲಿನ ಮಾಹಿತಿಯನ್ನು ಯಾರೂ ಸಹ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಗಾಂಧಿ, ನೆಹರೂ ಸತ್ಯವನ್ನು ಪ್ರೀತಿಸುತ್ತಿದ್ದರು..

ಅಲ್ಲದೆ ಸರ್ಕಾರಿ ಅಥವಾ ಖಾಸಗಿ ಬ್ಯಾಂಕುಗಳಲ್ಲಿ ಯಾರು ಸಾಲ ಪಡೆದುಕೊಂಡಿದ್ದಾರೆ ಎನ್ನುವ ಪಟ್ಟಿ ನೋಡಿದರೆ, ಇಲ್ಲಿ ಒಬ್ಬರೂ ಹಿಂದುಳಿದ ವರ್ಗ, ಎಸ್‌ಸಿ, ಎಸ್‌ಟಿ, ಆಸಿವಾಸಿ ಜನರು ಇಲ್ಲ. ಬದಲಿಗೆ ದೊಡ್ಡ ದೊಡ್ಡ ಕಂಪನಿಗಳ ಮಾಲೀಕರು, ಸಿಇಒಗಳ ಪಟ್ಟಿಯಲ್ಲೂ ಬಲಾಢ್ಯ ಜಾತಿಯವರಿದ್ದಾರೆ. ಇತ್ತೀಚಿಗೆ ನಾನು ಸಂದೀಪ್‌ ದೀಕ್ಷಿತ್‌ ನಡೆಸಿಕೊಡುವ ಪಾಡ್‌ಕಾಸ್ಟ್‌ ನಲ್ಲಿ ಭಾಗವಹಿಸಿದ್ದೆ, ನಿಮ್ಮ ಪ್ರಕಾರ ನಿಮ್ಮ ಮುತ್ತಾತ ನೆಹರೂ ಏನಾಗಿದ್ದರು. ಅವರು ಪ್ರಧಾನಿಯೇ, ಸ್ವಾತಂತ್ರ್ಯ ಸೇನಾನಿಯೇ ಅಥವಾ ರಾಜಕೀಯ ನಾಯಕರೇ ಅಲ್ಲದೆ ನೀವು ಅವರಿಂದ ಏನನ್ನು ಕಲಿಯಲು ಸಾಧ್ಯವಾಗಿದೆ ಎಂದು ಪ್ರಶ್ನಿಸಿದ್ದರು. ಆಗ ನೆಹರೂ ಹಾಗೂ ಗಾಂಧಿ ಇಬ್ಬರೂ ಸಹ ಸತ್ಯವನ್ನು ಪ್ರೀತಿಸುತ್ತಿದ್ದರು ಎಂದು ಉತ್ತರಿಸಿದ್ದೇನೆ ಎಂದು ರಾಹುಲ್‌ ಗಾಂಧಿ ತಿಳಿಸಿದ್ದಾರೆ.

ಬಿಹಾರದಲ್ಲಿ ತಾಲೀಮು ಶುರು..!

ಇನ್ನೂ ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದ್ದು, ಗೃಹ ಸಚಿವ ಅಮಿತ್‌ ಶಾ ಬಳಿಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿ ನೀಡಿ ತಮಗೆ ಬೇಕಾಗುವ ಹಾಗೆ ತಾಲೀಮು ನಡೆಸಿ ಮೈದಾನವನ್ನು ಸಿದ್ಧಪಡಿಸುವ ಕೆಲಸ ಮಾಡಿದ್ದಾರೆ. ಅಲ್ಲದೆ ಈ ಬಾರಿ ಹೇಗಾದರೂ ಮಾಡಿ ಹಾಲಿ ಸಿಎಂ ನಿತೀಶ್‌ ಕುಮಾರ್‌ ಅವರನ್ನು ಮಣಿಸಲೇಬೇಕೆಂದು ಇಂಡಿಯಾ ಕೂಟದ ಮಿತ್ರಪಕ್ಷಗಳು ಅದರಲ್ಲೂ ಆರ್‌ಜೆಡಿಯ ತೇಜಸ್ವಿ ಯಾದವ್‌ ಟೊಂಕಕಟ್ಟಿ ನಿಂತಿದ್ದಾರೆ. ಆದರೆ ಇದಕ್ಕೆ ಕೌಂಟರ್‌ ಆಗಿ ಈಗಾಗಲೇ ಚುನಾವಣಾ ರಣ ಕಹಳೆ ಮೊಳಗಿಸಿರುವ ಎನ್‌ಡಿಎ ಮತ್ತೊಮ್ಮೆ ಅಧಿಕಾರಕ್ಕೇರಲು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದೆ.

- Advertisement -

Latest Posts

Don't Miss