Political News: ಯಡಿಯೂರಪ್ಪನವರ ಬಗ್ಗೆ ಸಚ್ಚಿದಾನಂದ ಏನಂದ್ರು?: Induvalu Sachidananda Podcast

Political News: ಬಿಜೆಪಿ ನಾಯಕ ಇಂಡುವಾಳು ಸಚ್ಚಿದಾನಂದ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ.

ಯಡಿಯೂರಪ್ಪ ಸಾಹೇಬ್ರು ಅಂದ್ರೆ ಅವರು ರೈತ ನಾಯಕ, ರೈತ ಹೋರಾಟಗಾರರು, ಅಹೋರಾತ್ರಿ ಧರಣಿ. ವಿಶೇಷವಾಗಿ ಈ ರಾಜ್ಯದಲ್ಲಿ ರೈತನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ, ಕೃಷಿ ವಿಚಾರದಲ್ಲಿ ಉತ್ತಮ ಬಜೆಟ್ ಮಂಡಿಸಿದ ಧೀಮಂತ ನಾಯಕರು ಯಾರಾದ್ರೂ ಇದ್ರೆ ಅವರು ಬಿ.ಎಸ್.ಯಡಿಯೂರಪ್ಪ ಎಂದು ಸಚ್ಚಿದಾನಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈಗ ರೈತರಿಗೆ ಪಂಪ್ ಸೆಟ್ ಹಾಕಿಸಬೇಕು ಅಂದ್ರೆ ಲಕ್ಷ ಲಕ್ಷ ದುಡ್ಡು ಬೇಕು. ಆದರೆ ಯಡಿಯೂರಪ್ಪ ಕಾಲದಲ್ಲಿ ಅವರು ರೈತರಿಗೆ ಫ್ರೀಯಾಗಿ ಪಂಪ್‌ಸೆಟ್ ನೀಡುತ್ತಿದ್ದರು. ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದರು. ಹೈಸ್ಕೂಲ್ ಮಕ್ಕಳಿಗೆ ಉಚಿತ ಸೈಕಲ್ ವಿತರಿಸಿದರು. ಅವರು ಹುಟ್ಟು ಹೋರಾಟಗಾರರು. ದಕ್ಷಿಣ ಭಾರತದಲ್ಲಿ ಬಿಜೆಪಿಗೆ 1 ಸ್ಥಾನಮಾನ ಇದೆ ಅಂದ್ರೆ ಅದು ಯಡಿಯೂರಪ್ಪ ಅವರಿಂದ ಅಂತಾರೆ ಇಂಡುವಾಳು ಸಚ್ಚಿದಾನಂದ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

About The Author