Hubli News: ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಹುಟ್ಟಿದ ಮಕ್ಕಳು ಕೂಡ ಮೊಬೈಲ್ ಹುಚ್ಚು ಹೆಚ್ಚಾಗಿದೆ. ಮೊಬೈಲ್ ಕೊಡದಿದ್ರೆ ಊಟ ಮಾಡುವುದಿಲ್ಲ ಎನ್ನುವುದು ಕಂಡಿದ್ದೇವೆ. ಆದರೆ ಹುಬ್ಬಳ್ಳಿಯಲ್ಲಿ 14 ವರ್ಷದ ಬಾಲಕ ಮೊಬೈಲ್ ಕೊಡದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘೋರ ಘಟನೆಯೊಂದು ನಡೆದಿದೆ.
ಹೌದು,,, ಹುಬ್ಬಳ್ಳಿಯ ಉದಯ ನಗರ ನಿವಾಸಿ ಸಮರ್ಥ ಎಂಬ ಬಾಲಕ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಈ ಬಾಲಕ ಮೊಬೈಲ್‌ನಲ್ಲಿ ಫ್ರೀ ಫೈರ್ ಗೇಮ್ ಗೆ ಅಡಿಕ್ಟ್ ಆಗಿದ್ದನಂತೆ, ನಿನ್ನೆ ರಾತ್ರಿ ಗೇಮ್ ಆಡದಂತೆ ಹೇಳಿದ್ದ ತಾಯಿ ಬೈದಿದ್ದಾರೆ. ತಾಯಿ ಮಾತಿನಿಂದ ಮನನೊಂದಿದ್ದ ಬಾಲಕ, ರಾತ್ರಿ ಮನೆಯೊಳಗೆ ಕೋಣೆಗೆ ಹೋಗಿ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈಗ ಆ ಬಾಲಕ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಈ ಬಗ್ಗೆ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು, ಪ್ರಕರಣ ಕುರಿತು ತನಿಖೆ ನಡೆಸಿದ್ದಾರೆ. ಮೊದಲಿನಿಂದಲೂ ಮಕ್ಕಳಿಗೆ ಮೊಬೈಲ್ ಬಳಕೆ ಮಾಡುವುದನ್ನು ನಿಲ್ಲಿಸಬೇಕು, ಬುಕ್ಸ್ ಓದಲು ಕೊಡಬೇಕು. ಮೊಬೈಲ್ ಅಡಿಕ್ಟ್ ಆದರೆ ಮಕ್ಕಳು ತೊಂದರೆ ಅನುಭವಿಸುವಂತಾಗುತ್ತದೆಂದು ಪಾಲಕರಿಗೆ ಕಿವಿ ಮಾತನ್ನು ಹೇಳಿದ್ದಾರೆ.
ಇನ್ನು ಈ ಬಾಲಕ ಮೊಬೈಲ್ ಕೊಡದೆ ಇರುವುದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದು ದುರ್ದೈವದ ಸಂಗತಿ. ಯಾರೇ ಪಾಲಕರು ಆಗಲಿ ನಿಮ್ಮ ಮಕ್ಕಳನ್ನು ಮುದ್ದಾಗಿ ಸಾಕುವುದು ಬದಲು ಶಿಸ್ತು ಬದ್ಧವಾಗಿದೆ ಬೆಳೆಸುವುದು ಮುಖ್ಯವಾಗಿದೆ.
ಸಂಗಮೇಶ್ ಸತ್ತೀಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ




