Political News: ವಿಜಯಪುರದಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಬಿಜಿಪಿ ಮಾಜಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಯಡಿಯೂರಪ್ಪ ಅವರದ್ದು ಮನೆಯಲ್ಲಿರುವ ವಯಸ್ಸು ಎಂದು ಹೇಳಿದ್ದಾರೆ.
ವೀರಶೈವ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನಿಸುತ್ತಿರುವ ಬಿಎಸ್ವೈಗೆ ಯತ್ನಾಳ್ ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಶಾಮನೂರು ಶಿವಶಂಕರಪ್ಪ ಅವರು ರಾಜಕೀಯದಲ್ಲಿ ಹೆಚ್ಚು ಆ್ಯಕ್ಟೀವ್ ಇದ್ದರು. ಆದರೆ ಶಾಮನೂರು ಜತೆ ಯಡಿಯೂರಪ್ಪ ಅವರನ್ನು ಹೋಲಿಕೆ ಮಾಡಲಾಗುವುದಿಲ್ಲ.
ರಾಜಕೀಯದಲ್ಲಿದ್ದು ಸ್ಥಾನ ಮಾನಕ್ಕಾಗಿ ಪ್ರಯತ್ನಿಸುವರು ವೀರಶೈವ ಮಹಾಸಭಾ ಅಧ್ಯಕ್ಷರಾಗಬಾರದು. ಸ್ವಾರ್ಥ ಮನಸ್ಥಿತಿ ಇದ್ದವರಿಗೆ ಆ ಸ್ಥಾನ ಸಿಗಬಾರದು. ರಾಜಕೀಯದಿಂದ ಸಂಪೂರ್ಣ ನಿವೃತ್ತಿ ಆದವರಿಗೆ ಮಾತ್ರ ಆ ಸ್ಥಾನ ಸಿಗಬೇಕು. ಅಥವಾ ಸ್ವಾಮೀಜಿಗಳಿಗೆ ಆ ಸ್ಥಾನ ಸಿಗಬೇಕು ಎಂದು ಯತ್ನಾಳ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ ಅವರು ಇಷ್ಟು ದಿನ ಎಲ್ಲರನ್ನೂ ಬಳಕೆ ಮಾಡಿಕ“ಂಡಿದ್ದು ತಮ್ಮ ಸ್ವಾರ್ಥಕ್ಕಾಗಿ. ಈಗ ಅವರದ್ದು ಮನೆಯಲ್ಲಿ ಇರುವ ವಯಸ್ಸು, ಹಾಗಾಗಿ ಅವರು ಈ ಸ್ಥಾನಕ್ಕೆ ಬರಬಾರದು ಅನ್ನೋದು ನನ್ನ ಅಭಿಪ್ರಾಯ ಅಂತಾರೆ ಯತ್ನಾಳ್.




