Political News: ಉತ್ತರಪ್ರದೇಶದಲ್ಲಿ ಗೂಂಡಾಗಿರಿ ಮಾಡುವವರ, ಲವ್ ಜಿಹಾದ್ ಮಾಡುವವರ ಮತ್ತು ಅಕ್ರಮ ಭೂಮಿ ಇರುವವರ ಮನೆಗೆ ಬುಲ್ಡೋಜರ್ ನುಗ್ಗಿಸುವ ಕಾರ್ಯ ಇನ್ನೂ ಪ್ರಗತಿಯಲ್ಲಿದೆ. ಅದೇ ರೀತಿ, ಬಿಜೆಪಿ ಕಚೇರಿಯೊಂದು ಅಕ್ರಮವಾಗಿ ಕಟ್ಟಲಾಗಿದ್ದು, ಅದನ್ನು ಬುಲ್ಡೋಜರ್ ಮೂಲಕ, ನೆಲಸಮ ಮಾಡಲಾಗಿದೆ.
ಉತ್ತರಪ್ರದೇಶದಲ್ಲಿರುವ ಬಲ್ಲಿಯಾದಲ್ಲಿರುವ ಬಿಜೆಪಿ ಕಚೇರಿಯನ್ನು ಬಿಜೆಪಿ ಅತಿಕ್ರಮಣ ಮಾಡಿಕೊಂಡಿತ್ತು ಎಂಬ ಆರೋಪವಿತ್ತು. ಹಾಗಾಗಿ ಈ ಮೊದಲು ಎರಡು ಬಾರಿ ಕಟ್ಟಡ ತೆರವುಗೊಳಿಸಲು ಬಂದಿದ್ದರು ಕೂಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಂದ್ರ ಸಿಂಗ್ ಇದನ್ನು ವಿರೋಧಿಸಿದ್ದರು. ಆದರೆ ಇದೀಗ ಬಿಜೆಪಿ ಕಚೇರಿ ನೆಲಸಮ ಗೊಳಿಸಲಾಗಿದೆ.
ಅತಿಕ್ರಮಣ ಮಾಡಿದ ಜಾಗ ಯಾರದ್ದೇ ಆಗಿರಲಿ, ಆ ಜಾಗವನ್ನು ತೆರವುಗೊಳಿಸಬೇಕು ಎಂಬ ಅಭಿಯಾನ ಶುರುವಾಗಿದೆ. ಹೀಗಾಗಿ ಬಿಜೆಪಿ ಆ ಸ್ಥಳವನ್ನು ಅತಿಕ್ರಮಣ ಮಾಡಿದ ಬಗ್ಗೆ ದಾಖಲೆ ಇರುವ ಕಾರಣಕ್ಕೆ, ಯೋಗಿ ಸರ್ಕಾರ, ತನ್ನ ಪಕ್ಷದ ಕಚೇರಿಯನ್ನೇ ನೆಲಸಮಗೊಳಿಸಿದೆ. ಈ ಮೊದಲು ಅತೀ ಹೆಚ್ಚು ಗೂಂಡಾಗಿರಿ, ಲವ್ ಜಿಹಾದ್ ನಡೆಯುತ್ತಿದ್ದ ರಾಜ್ಯ ಎಂದರೆ, ಅದು ಉತ್ತರಪ್ರದೇಶವಾಗಿತ್ತು. ಸಂಜೆ ಬಳಿಕ ಪೊಲೀಸ್ ಠಾಣೆಯಲ್ಲಿ ಪೊಲೀಸರು ಮನೆಗೆ ಹೋಗಿ, ರೌಡಿಗಳು ಪೊಲೀಸ್ ಠಾಣೆಯನ್ನು ಅಳುತ್ತಿದ್ದರು.
ಆದರೆ ಯೋಗಿ ಸರ್ಕಾರ ಬಂದ ಬಳಿಕ, ಎಲ್ಲ ಗೂಂಡಾಗಿರಿ ಬಂದ್ ಮಾಡಿಸಲಾಗಿದೆ. ಗೂಂಡಾಗಿರಿ ಮಾಡುವವರು ಯಾರೇ ಆಗಿರಲಿ, ಎಷ್ಟೇ ಪ್ರಭಾವಿಗಳೇ ಆಗಿರಲಿ, ಅಂಥವರ ಮನೆಗೆ ಬುಲ್ಡೋಜರ್ ನುಗ್ಗಿಸಿ, ಪಾಠಕಲಿಸಲಾಗುತ್ತಿದೆ. ಅಲ್ಲದೇ ಉಗ್ರರ ಪಟ್ಟಿಯಲ್ಲಿ ಕೇಳಿಬಂದಿರುವ ಹೆಸರುಗಳಿರುವ ಮನೆಗಳಿಗೂ ಬುಲ್ಡೋಜರ್ ನುಗ್ಗಿಸುವ ಕೆಲಸವಾಗಿದೆ.