Tuesday, April 8, 2025

Latest Posts

Political Special: ಮೋದಿ ಬ್ರ್ಯಾಂಡ್‌ಗೆ ಏಟು ಬಿದ್ದಿದೆ: ಚೇತನ್ ಅಹಿಂಸಾ ವಿಶೇಷ ಸಂದರ್ಶನ

- Advertisement -

Political News: ನಟ ಚೇತನ್ ಅಹಿಂಸಾ ಕರ್ನಾಟಕ ಟಿವಿಗೆ ಸಂದರ್ಶನ ನೀಡಿದ್ದು, ಈ ವೇಳೆ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆ ಬಗ್ಗೆ ಮಾತನಾಡಿದ್ದಾರೆ.

ಮೋದಿ ಅನ್ನೋ ಹೆಸರಿನ ಬ್ರ್ಯಾಂಡ್‌ಗೆ ಏಟಾಗಿದೆ ಅನ್ನೋದು ನಮ್ಮೆಲ್ಲರಿಗೂ ಮುಂಚೆನೇ ಗೊತ್ತಿತ್ತು. 2014ರಲ್ಲಿ ಮತ್ತು 2019ರಲ್ಲಿ ಮೋದಿ ನಮ್ಮ ಜೀವನವನ್ನೇ ಚೇಂಜ್ ಮಾಡುತ್ತಾರೆ. ಮೋದಿ ಅದಿಕಾರಕ್ಕೆ ಬಂದ್ರೆ, ಎಲ್ಲವೂ ಬದಲಾಗುತ್ತೆ ಅನ್ನೋ ಆಲೋಚನೆ ಇತ್ತೋ, ಆ ಆಲೋಚನೆ ಜನರಿಗೆ ಈಗಿಲ್ಲಾ ಅಂತಾರೆ ಚೇತನ್ ಅಹಿಂಸಾ.

ಆದರೆ ಅದರಿಂದ ಇವರಿಗೆ ಬರುವ ಓಟ್‌ಗಳಿಗೆ ಏಟಾಗತ್ತಾ..? ಎನ್‌ಡಿಎ ಪರವಾಗಿ ಜನ ಬರುತ್ತಾರಾ ಅನ್ನೋ ಅನುಮಾನ ಜನರಿಗಿತ್ತು. ಆದರೆ ವಿರೋಧ ಪಕ್ಷದವರು ಕೂಡ ಕೆಲ ಕೆಲಸಗಳನ್ನು ಬೆಟರ್ ಆಗಿ ಮಾಡಿದ್ದರು. ಭಾರತ್ ಜೋಡೋ ಯಾತ್ರೆ, ಕಾಂಗ್ರೆಸ್ಸಿಗರ ಫೋಟೋ ಶೂಟ್, ಸೋಶಿಯಲ್ ಮೀಡಿಯಾದಲ್ಲಿ ಮೋದಿ ಪೋಸ್ಟ್‌ಗಳಿಗೆ, ಬಿಜೆಪಿ ಹೇಳಿಕೆಗಳಿಗೆ ಕೌಂಟರ್ ಕೊಡುವ ಕೆಲಸ ಮಾಡಿದ್ದರು. ಇದು ಕೂಡ ಎಲೆಕ್ಷನ್‌ ಮೇಲೆ ಪರಿಣಾಮ ಬೀರಿತ್ತು ಅಂದಿದ್ದಾರೆ ಚೇತನ್.

ಬರೀ 60 ಪರ್ಸೆಂಟ್ ಜನ ಅಷ್ಟೇ ಬಿಜೆಪಿ ಮತ್ತು ಕಾಂಗ್ರೆಸ್ ಪರವಾಗಿ ಇದ್ದಾರೆ. ಆದರೆ ಉಳಿದ 40 ಪರ್ಸೆಂಟ್ ಜನ ಈ ಎರಡು ಪಕ್ಷಗಳನ್ನು ಒಪ್ಪುವುದಿಲ್ಲ. ನನ್ನ ಪ್ರಕಾರ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಕೂಡ ಸರಿ ಇಲ್ಲ. ಇವರೆಡೂ ಪಕ್ಷಗಳು ಅಸಮಾನತೆಯ ಪಕ್ಷಗಳು. ಬೇಧ ಭಾವದ ವ್ಯವಸ್ಥೆಯನ್ನು ಬೆಳೆಸುವ ಪಕ್ಷಗಳು. ಇವರಿಬ್ಬರೂ ಸಂವಿಧಾನವನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಚೇತನ್ ತಮ್ಮ ಅನಿಸಿಕೆ ಹೇಳಿದ್ದಾರೆ.

ಇನ್ನು ನಿರೂಪಕರು, ಕಾಂಗ್ರೆಸ್ ಇನ್ನೂ ಬೆಟರ್ ಆಗಿ ಪರ್ಫಾರ್ಮ್ ಮಾಡಬಹುದಿತ್ತಾ ಅಂತಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಚೇತನ್, ನನ್ನ ಪ್ರಕಾರ, ಕಾಂಗ್ರೆಸ್ ಕೂಡ ಪರಿಹಾರವಲ್ಲ. ಸಮಾಜಕ್ಕೆ ಬೇಕಾದ ಉತ್ತಮ ಸಿದ್ಧಾಂತ ಬೇಕಾಗಿದೆ. ಆದರೆ ಕಾಂಗ್ರೆಸ್ ಆ ಉತ್ತಮ ಸಿದ್ಧಾಂತ ಎಂದಿಗೂ ಆಗಿಲ್ಲಾ, ಬಿಜೆಪಿ ಕೂಡ ಉತ್ತಮ ಸಿದ್ಧಾಂತವಲ್ಲ ಅಂತಾ ಹೇಳಿದ್ದಾರೆ. ಈ ಸಂದರ್ಶನ ನೋಡಲು ಈ ವೀಡಿಯೋ ಕ್ಲಿಕ್ ಮಾಡಿ.

- Advertisement -

Latest Posts

Don't Miss