ಬಿಹಾರ ವಿಧಾನಸಭೆ ಚುನಾವಣೆ ರಾಜಕೀಯ ಕಗ್ಗಂಟಿನ ಬಿಸಿ ಸಿಕ್ಕಾಪಟ್ಟೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಸೀಟು ಹಂಚಿಕೆಯ ನೈಜ ಒಪ್ಪಂದ ಮಾಡಿಕೊಂಡಿದೆ. ಬಿಜೆಪಿ 71 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಿಸಿದ್ದು, ಎನ್‌ಡಿಎ ಶಕ್ತಿಯಾಗಿ ಕಟ್ಟಿ ಹಾಕಲಾಗಿದೆ.
ಆದರೆ ಕಾಂಗ್ರೆಸ್ ಮತ್ತು RJD ನಡುವಿನ ಟಿಕೆಟ್ ಹಂಚಿಕೆ ವ್ಯವಹಾರದಲ್ಲಿ ತೀವ್ರ ಗಲಾಟೆ ಎದುರಾಗಿದೆ. ‘ಅಪ್ಪ’ ಲಾಲೂ ಪ್ರಸಾದ್ ಯಾದವ್ ಮತ್ತು ‘ಮಗು’ ತೇಜಸ್ವಿ ಯಾದವ್ ನಡುವಿನ ಸೀಟು ಹಂಚಿಕೆಯ ವಿಚಾರದಲ್ಲಿ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ತೇಜಸ್ವಿ ಯಾದವ್ ಅಪ್ಪ ಹಂಚಿಕೆ ಮಾಡಿದ್ದ ಕ್ಷೇತ್ರಗಳ ಅಭ್ಯರ್ಥಿಗಳಿಗೆ ನಾನು ಹೇಳೋವರೆಗೂ ಸುಮ್ಮನಿರಿ ಅಂತ ಪಕ್ಷದ ಚಿಹ್ನೆಗಳನ್ನ ಬಳಸದಂತೆ ತಾಕೀತು ಮಾಡಿದ್ದಾರೆ.
ಬಿಹಾರದಲ್ಲಿ ಒಟ್ಟು 243 ಕ್ಷೇತ್ರಗಳಿಗೂ ಜೆಡಿಯು, ಬಿಜೆಪಿ ಮತ್ತು ಎಲ್‌ಜೆಪಿ ಮಧ್ಯೆ ನಡೆದ ಸೀಟು ಹಂಚಿಕೆ ಮಾತುಕತೆ ಸೌಹಾರ್ದಯುತವಾಗಿ ಮುಕ್ತಾಯಗೊಂಡಿದೆ. ಈ ಒಪ್ಪಂದದ ಮೂಲಕ NDA ಗೆ ಬಲಿಷ್ಠ ಸ್ಥಾನಮಾನ ದೊರೆತಿದ್ದು, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ಭದ್ರವಾಗಿದೆ.
ಬಿಜೆಪಿ 101 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. ನಿತೀಶ್ ನೇತೃತ್ವದ JDU ಪಕ್ಷನೂ 101 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇನ್ನು ಚಿರಾಗ್ ಪಾಸ್ವಾನ್ ಲೋಕಜನಶಕ್ತಿ ಪಕ್ಷ 29 ಸ್ಥಾನಗಳಲ್ಲಿ ಪಾಲು ಪಡೆದಿದೆ. ಹಾಗೇ ಜಿತನ್ ರಾಮ್ ಮಾಂಝಿ ಅವರ HAM 6 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ರೆ, ಉಪೇಂದ್ರ ಕುಶ್ವಾ ಅವರ ರಾಷ್ಟ್ರೀಯ ಲೋಕ ಮೋರ್ಚಾ ಪಕ್ಷಕ್ಕೂ 6 ಸೀಟುಗಳನ್ನ ಎನ್‌ಡಿಎ ಕೂಟ ಹಂಚಿಕೆ ಮಾಡಿದೆ.
ಬಿಹಾರ ವಿಧಾನಸಭೆ ಅಖಾಡಕ್ಕೆ NDA ಮೈತ್ರಿಕೂಟದ ಮಧ್ಯೆ ಸೀಟು ಹಂಚಿಕೆ ಸಕ್ಸಸ್ ಆಗ್ತಿದ್ದಂತೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನೂ ರಿಲೀಸ್ ಮಾಡಿದೆ. ಮೊದಲ ಲಿಸ್ಟ್‌ನಲ್ಲಿ 71 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನೂ ಬಿಜೆಪಿ ಅಧಿಕೃತವಾಗಿ ಘೋಷಣೆ ಮಾಡಿದೆ.
ಇಂಡಿಯಾ ಪಕ್ಷಗಳ ಒಕ್ಕೂಟದಲ್ಲಿ ಕಾಂಗ್ರೆಸ್ ಮತ್ತು RJD ನಡುವಿನ ಗಲಾಟೆ ಹೆಚ್ಚಾಗಿದ್ದು, ಟಿಕೆಟ್ ಹಂಚಿಕೆಯಲ್ಲಿ ಅಸಮ್ಮತಿ ಮತ್ತಷ್ಟು ಗಂಭೀರವಾಗಿದೆ. ರಾಜಕೀಯ ವಲಯದಲ್ಲಿ ಇದರಿಂದ ಗೋಜಿಗೆ ಗೋಜು ಉಂಟಾಗುವ ಸಾಧ್ಯತೆ ಇದೆ. ಬಿಜೆಪಿ-ಎನ್‌ಡಿಎ ಮೈತ್ರಿಕೂಟದ ಪ್ರತಿಷ್ಠೆ ಮತ್ತಷ್ಟು ಬಲಪಡುವ ನಿರೀಕ್ಷೆಯೇ ಹೆಚ್ಚುತ್ತಿದೆ.
ವರದಿ : ಲಾವಣ್ಯ ಅನಿಗೋಳ