Dharwad News: ಧಾರವಾಡ: ಅಂಗನವಾಡಿ ಮಕ್ಕಳಿಗೆ ಕಳಪೆ ಮಟ್ಟದ ಆಹಾರ ಪೂರೈಕೆ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ಆದರೆ, ಇದಕ್ಕೆ ಈಗ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಈ ಬಾರಿ ಡೆಟ್ ಬಾರ್ ಆಗಿರುವ ಆಹಾರ ವಿತರಣೆ ಮಾಡಿರುವ ಮೂಲಕ ಬಹಿರಂಗವಾಗಿದೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳ ಅಂಗನವಾಡಿಯಲ್ಲಿ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಗುತ್ತಿಗೆದಾರರು ಸಮಯ ಮುಗಿದ ತೊಗರಿ ಪೂರೈಕೆ ಮಾಡಿದ್ದಾರೆ. ಬಡ ಮಕ್ಕಳಿಗೆ ಡೆಟ್ ಬಾರ್ ಆದ ಕಳಪೆ ಗುಣಮಟ್ಟದ ಆಹಾರ ಪದಾರ್ಥ ವಿತರಣೆ ಮಾಡುವ ಮೂಲಕ ಮಕ್ಕಳ ಜೀವದೊಂದಿಗೆ ಗುತ್ತಿಗೆದಾರರು ಚೆಲ್ಲಾಟವಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳೀಯರ ಅಂಗನವಾಡಿಗೆ ತೆರಳಿ ತಮ್ಮ ಮಕ್ಕಳಿಗೆ ನೀಡುವ ಆಹಾರ ಪದಾರ್ಥ ಪರಿಶೀಲನೆ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಈ ಡೆಟ್ ಬಾರ್ ಆದ ಆಹಾರ ಪೂರೈಕೆಯಲ್ಲಿ ಸಂಬಂಧಪಟ್ಟ ಇಲಾಖೆಯೂ ಶಾಮೀಲಾಗಿರುವ ಶಂಕೆಯಿದೆ. ಆದರೆ ಈ ಬಗ್ಗೆ ಪ್ರಶ್ನೆ ಮಾಡಿದಾಗ ಪ್ರತಿ ತಿಂಗಳು ಪರಿಶೀಲನೆ ಮಾಡಿಯೇ ಆಹಾರ ಪದಾರ್ಥಗಳನ್ನು ನಾವು ತೆಗೆದುಕೊಳ್ಳತ್ತೇವೆ. ಅದರಂತೆ ಈ ಬಾರಿಯೂ ಪರಿಶೀಲನೆ ಮಾಡಿ ತೋಗರಿ, ಹೆಸರನ್ನು ತೆಗೆದುಕೊಳ್ಳಲಾಗಿದೆ. ಈ ಬಾರಿ ತೊಗರಿ ಪಾಕೆಟ್ ಗಳು ಡೆಟ್ ಬಾರ್ ಆಗಿದ್ದು, ಕಳಪೆಯಾಗಿವೆ. ಈ ಬಗ್ಗೆ ಈಗಾಗಲೇ ಉನ್ನತ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಇವುಗಳನ್ನು ವಾಪಾಸ್ ಕಳುಹಿಸಿ ಗುಣಮಟ್ಟದ ಆಹಾರವನ್ನು ಪಾವಾಸ್ ಪಡೆದು ಆಹಾರ ವಿತರಣೆ ಮಾಡುತ್ತೇವೆ ಎಂದು ಅಂಗನವಾಡಿ ಕೇಂದ್ರದ ಮೇಲ್ವೀಚಾರಕಿ ಮಾದೇವಿ ಸಂಗಳದ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುವ ತಪ್ಪಿತಸ್ಥರ ವಿರುದ್ಧ ಮತ್ತು ಇದರಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಶಿಕ್ಷಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ.21 ರಂದು ಹುಬ್ಬಳ್ಳಿಯಿಂದ ಧಾರವಾಡಕ್ಕೆ ಪಾದಯಾತ್ರೆ
ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಪ್ರಸ್ತಾಪ ವಿಚಾರಕ್ಕೆ ಸ್ಪಷ್ಟನೆ ನೀಡಿದ ಸವದಿ..